Navratri 2021: ಗೃಹ ಪ್ರವೇಶ, ಮದುವೆ ಸಂಬಂಧ ಮುಂತಾದ ಹೊಸ ಕೆಲಸಗಳಿಗೆ ನವರಾತ್ರಿಯ (Navratri) ಸಮಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವರ್ಷದಿಂದ ದುರ್ಗಾ ಮಾತೆಯು ಡೋಲಿಯ ಮೇಲೆ ಸವಾರಿ ಮಾಡುತ್ತಿರುವುದರಿಂದ ಇದನ್ನು ವಿಪತ್ತು-ಹಿಂಸೆಯ ಸಂಕೇತವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಅದರ ಪರಿಣಾಮದ ಬಗ್ಗೆ ಕಾಳಜಿ ಇರುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯದ (Astrology) ಲೆಕ್ಕಾಚಾರಗಳ ಪ್ರಕಾರ, ದುರ್ಗಾ ಮಾತೆಯ (Maa Durga) ಡೋಲಿಯ ಸವಾರಿ ಕೂಡ ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರವಾಗಿದೆ. ಈ ರಾಶಿಚಕ್ರದ (Zodiac Sign) ಜನರು ನವರಾತ್ರಿಯ ಸಮಯದಲ್ಲಿ ಅಕ್ಟೋಬರ್ 15 ರವರೆಗೆ ಮಾ ದುರ್ಗಾಳ ಆಶೀರ್ವಾದ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.


ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ:
ಮೇಷ ರಾಶಿ (Aries):
ಮೇಷ ರಾಶಿಯವರಿಗೆ ಅಕ್ಟೋಬರ್ 15 ರವರೆಗಿನ ಸಮಯ ಅತ್ಯಂತ ಶುಭಕರವಾಗಿರುತ್ತದೆ. ಇನ್ನೂ ಕೂಡ ವಿವಾಹವಾಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುವ ಯೋಗವಿದೆ. ಆರ್ಥಿಕವಾಗಿ (Finance) ಪ್ರಯೋಜನಕಾರಿಯಾಗಲಿದೆ. ನೀವು ವೃತ್ತಿಜೀವನದಲ್ಲಿ ದೊಡ್ಡ ಅವಕಾಶವನ್ನು ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ. 


ಇದನ್ನೂ ಓದಿ- Navratri 2021: ನವರಾತ್ರಿಯ ಉಪವಾಸದ ನಿಯಮಗಳು; ಮರೆತೂ ಮಾಡದಿರಿ ಈ ತಪ್ಪು


ಕನ್ಯಾ ರಾಶಿ  (Virgo): ಕನ್ಯಾ ರಾಶಿಯ ಜನರು ನವರಾತ್ರಿಯ (Navaratri) ಈ ಶುಭ ಸಂದರ್ಭದಲ್ಲಿ ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಆಸ್ತಿ ಖರೀದಿಸುವ ಯೋಗವಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದರೆ ಅದರಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ.


ಧನು ರಾಶಿ (Sagittarius): ಧನು ರಾಶಿಯ ಜನರಿಗೆ ಹಠಾತ್ ಧನಲಾಭ ಸಿಗಲಿದೆ. ಬಹಳ ದೀರ್ಘ ಕಾಲದಿಂದ ಮುಗಿಯದ ಸಾಲದಿಂದ ಮುಕ್ತರಾಗುವಿರಿ. ಮನೆಯಲ್ಲಿ ಸಂತೋಷ ಇರುತ್ತದೆ. ಆಸ್ತಿಯನ್ನು ಖರೀದಿಸುವ ಯೋಗ ಕೂಡಿ ಬರಲಿದೆ. ಕಾಣಬಹುದು. ವ್ಯಾಪಾರ-ವ್ಯವಹಾರ ಸಂಬಂಧಿತ ನಿಮ್ಮ  ಪ್ರಯಾಣ ಯಶಸ್ವಿಯಾಗುತ್ತದೆ. ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಿ. 


ಇದನ್ನೂ ಓದಿ- Navratri Money Remedies: ನಿಮಗೂ ಶ್ರೀಮಂತರಾಗುವ ಬಯಕೆಯೇ? ನವರಾತ್ರಿಯಲ್ಲಿ 9 ದಿನಗಳ ಕಾಲ ಈ ಕೆಲಸ ಮಾಡಿ


ಮಕರ ರಾಶಿ (Capricorn): ಮಕರ ರಾಶಿಯವರಿಗೆ ಕೂಡ ನವರಾತ್ರಿಯ ಈ ಸಮಯ ಅತ್ಯಂತ ಶುಭಕರವಾಗಿರುತ್ತದೆ. ಅವರು ಪೂಜೆಯ ಸಂಪೂರ್ಣ ಫಲವನ್ನು ಪಡೆಯುತ್ತಾರೆ ಮತ್ತು ಮಾತೆ ದುರ್ಗಾಳ ಆಶೀರ್ವಾದವನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಬಹಳ ದಿನಗಳಿಂದ ಬಯಸಿದ್ದ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ನಿನ್ನ ಕಷ್ಟಗಳು ದೂರವಾಗುತ್ತವೆ. ಆರ್ಥಿಕವಾಗಿ ಪ್ರಯೋಜನಕಾರಿಯಾಗಿ ಇರಲಿದೆ. ಒಟ್ಟಾರೆಯಾಗಿ, ಜೀವನದಲ್ಲಿ ಆಹ್ಲಾದಕರ ಬದಲಾವಣೆ ಇರುತ್ತದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ