Navratri Mahanavami 2021: ಈ 4 ರಾಶಿಯವರ ಮೇಲೆ ದುರ್ಗಾ ದೇವಿಯ ವಿಶೇಷ ಅನುಗ್ರಹ
Navratri Mahanavami 2021: ಮಹಾನವಮಿಯ (Mahanavami) ದಿನ ಬಹಳ ವಿಶೇಷವಾಗಿದೆ. ಈ ದಿನ ದುರ್ಗಾ ದೇವಿಯು ಭೂ ಲೋಕದಿಂದ ತನ್ನ ಲೋಕಕ್ಕೆ ಮರಳಿ ಪ್ರಯಾಣಿಸುವ ದಿನ. ಹೊರಡುವಾಗ, ಮಾ ದುರ್ಗಾ (Maa Durga) 4 ರಾಶಿಚಕ್ರದ (Zodiac Sign) ಜನರ ಮೇಲೆ ವಿಶೇಷ ಆಶೀರ್ವಾದಗಳನ್ನು ಸುರಿಸುತ್ತಿದ್ದಾರೆ.
Navratri Mahanavami 2021: ಅಶ್ವಿನ್ ತಿಂಗಳ ನವರಾತ್ರಿ (Navratri 2021) ಮುಗಿಯುತ್ತಿದೆ. ಇಂದು ನವರಾತ್ರಿ ಕೊನೆಯ ದಿನ ಮಹಾನವಮಿ (Mahanavami2021). ನವರಾತ್ರಿಯ 9 ದಿನಗಳ ಕಾಲ ತಾಯಿ ದುರ್ಗಾ ಭೂಮಿಯ ಮೇಲೆ ಓಡಾಡುತ್ತಾಳೆ ಮತ್ತು ನಂತರ ತನ್ನ ಪ್ರಪಂಚಕ್ಕೆ ಮರಳುತ್ತಾಳೆ ಎಂದು ನಂಬಲಾಗಿದೆ.
ನವರಾತ್ರಿಯಲ್ಲಿ ದುರ್ಗಾ ಮಾತೆಯು (Maa Durga) ಭೂಮಿಯಲ್ಲಿ ಸಂಚರಿಸುತ್ತಾಳೆ. ಈ ಸಂದರ್ಭದಲ್ಲಿ ದುರ್ಗೆಯನ್ನು ಆಕೆಯ ಒಂಬತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನ ದುರ್ಗಾ ಮಾತೆಯು ಮರಳಿ ತನ್ನ ಲೋಕಕ್ಕೆ ತೆರಳುವಾಗ ತನ್ನ ಭಕ್ತರಿಗೆ ಸಂತೋಷ, ಸಮೃದ್ಧಿಯನ್ನು ಅನುಗ್ರಹಿಸುತ್ತಾ ಹೋಗುತ್ತಾಳೆ ಎಂದು ಹೇಳಲಾಗುತ್ತದೆ. ಇಂದು (ಅಕ್ಟೋಬರ್ 14, 2021), ಮಹಾನವಮಿಯ ವಿಶೇಷ ಸಂದರ್ಭದಲ್ಲಿ, ಯಾವ ರಾಶಿಯ (Zodiac Sign) ಜನರು ದುರ್ಗಾದೇವಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ತಿಳಿಯಿರಿ.
ಇದನ್ನೂ ಓದಿ- Astrology: ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಈ 3 ರಾಶಿಯ ಜನ
ಈ 4 ರಾಶಿಯವರಿಗೆ ಸಿಗಲಿದೆ ದುರ್ಗಾ ಮಾತೆಯ ವಿಶೇಷ ಆಶೀರ್ವಾದ:
ಮೇಷ ರಾಶಿ (Aries): ಮೇಷ ರಾಶಿಯವರಿಗೆ, ಮಹಾನವಮಿಯ (Mahanavami) ದಿನ ಅಂದರೆ 14 ಅಕ್ಟೋಬರ್ 2021 ವಿಶೇಷ ಉಡುಗೊರೆಯನ್ನು ತರುತ್ತದೆ. ನೀವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹಣ ಪ್ರಯೋಜನಕಾರಿಯಾಗಲಿದೆ. ನೀವು ಹೊಸ ಉದ್ಯೋಗವನ್ನು ಪಡೆಯಬಹುದು ಅಥವಾ ಬಡ್ತಿಯನ್ನು ಪಡೆಯಬಹುದು. ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ವೃಷಭ ರಾಶಿ (Taurus): ವೃಷಭ ರಾಶಿಯ ಜನರ ಯಾವುದೇ ಪ್ರಮುಖ ಸಮಸ್ಯೆಯನ್ನು ನಿವಾರಿಸಲಾಗುವುದು. ಇದ್ದಕ್ಕಿದ್ದಂತೆ ನೀವು ಹಣವನ್ನು ಪಡೆಯುತ್ತೀರಿ. ಕಳೆದ ಕೆಲವು ದಿನಗಳಿಂದ ನಿಮ್ಮ ಮೇಲೆ ಪ್ರಾಬಲ್ಯ ಹೊಂದಿರುವ ಶತ್ರುಗಳು ಈಗ ಹಿಂದೆ ಸರಿಯುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ- Ayudha Puje In Mysuru Palace: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಆಯುಧಪೂಜೆ ಸಂಭ್ರಮ
ಕರ್ಕ ರಾಶಿ (Cancer): ನವರಾತ್ರಿಯ (Navaratri) ನಂತರ, ದುರ್ಗಾಮಾತೆ ತನ್ನ ಲೋಕಕ್ಕೆ ಮರಳಿ ತೆರಳುವಾಗ ಕರ್ಕಾಟಕ ರಾಶಿಯ ಜನರಿಗೆ ಸಂಪತ್ತು ಮತ್ತು ವೈಭವವನ್ನು ನೀಡುತ್ತಾಳೆ. ಆಕೆಯ ಕೃಪೆಯಿಂದ ಕರ್ಕ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಇದಾಗಿದೆ. ಆರೋಗ್ಯ ಚೆನ್ನಾಗಿರುತ್ತದೆ. ನೀವು ದೀರ್ಘಕಾಲದಿಂದ ಕಾಯುತ್ತಿದ್ದ ಕೆಲಸವು ನಿಮಗೆ ಯಶಸ್ಸನ್ನು ನೀಡುತ್ತದೆ.
ಧನು ರಾಶಿ (Sagittarius): ಮಹಾನವಮಿಯಂದು ದುರ್ಗಾದೇವಿಯ ವಿಶೇಷ ಆಶೀರ್ವಾದವು ಧನು ರಾಶಿಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಈ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ