Vastu Shastra For Kitchen: ಮನೆ ದೊಡ್ಡದೇ ಆಗಲಿ ಚಿಕ್ಕದೆ ಆಗಲಿ ಅಲ್ಲಿ ಅಡುಗೆ ಮನೆಗೆ ಪ್ರಮುಖ ಸ್ಥಾನ.  ವಾಸ್ತು ಶಾಸ್ತ್ರದ ಪ್ರಕಾರ  ಲಕ್ಷ್ಮೀ ಮತ್ತು ತಾಯಿ ಅನ್ನಪೂರ್ಣ ಅಡುಗೆ ಮನೆಯಲ್ಲಿ ನೆಲೆಸಿರುತ್ತಾಳೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು  ಶುಚಿಯಾಗಿಟ್ಟುಕೊಂಡರೆ ಅಲ್ಲಿ ಸದಾ ಲಕ್ಷ್ಮೀ ನೆಲೆಸುತ್ತಾಳೆ. ಮಾತ್ರವಲ್ಲ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತಾಳೆ. ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಗೆ ಸಂಬಂಧಿಸಿದ ಕೆಲವು ವಿಶೇಷ ವಾಸ್ತು ಸಲಹೆಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ. ಮತ್ತೊಂದೆಡೆ, ಅಡುಗೆಮನೆಯಲ್ಲಿ ಮಾಡುವ ತಪ್ಪುಗಳು ತಾಯಿ ಲಕ್ಷ್ಮೀಯ ಕೋಪಕ್ಕೆ ಕಾರಣವಾಗಬಹುದು. ಲಕ್ಷ್ಮೀ ಮುನಿಸಿಕೊಂಡರೆ ಮನೆಯಲ್ಲಿ ಬಡತನವು ತಾಂಡವವಾಡುತ್ತದೆ.


COMMERCIAL BREAK
SCROLL TO CONTINUE READING

ಅಡುಗೆಮನೆಯಲ್ಲಿ ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ :
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಯಾವತ್ತೂ ಕೆಲವು ತಪ್ಪುಗಳನ್ನು ಮಾಡಬಾರದು. ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳಿಂದ ಅಡುಗೆ ಮನೆ ಮಲಿನವಾಗುತ್ತದೆ. ಹೀಗಾದಾಗ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ. ಅಡುಗೆ ಮನೆಯಲ್ಲಿಯೇ ಕುಳಿತು ಊಟ ಮಾಡುವುದಾದರೆ ಅಡುಗೆ ಮಾಡುವ ಸ್ಥಳದಿಂದ ಸ್ವಲ್ಪ ದೂರ ಕುಳಿತುಕೊಳ್ಳಬೇಕು. ಅಡುಗೆ ಮಾಡುವ ಸ್ಥಳದಲ್ಲಿಯೇ ಕುಳಿತು ಊಟ ಮಾಡಬಾರದು.  


ಇದನ್ನೂ ಓದಿ Pitru Paksha : ಹೆಣ್ಣು ಮಕ್ಕಳೂ ಶ್ರಾದ್ಧ ಕರ್ಮ ಮಾಡಬಹುದೇ! ಧರ್ಮಗ್ರಂಥ ಏನು ಹೇಳುತ್ತೆ?


ಬೂಟು ಮತ್ತು ಚಪ್ಪಲಿ ಧರಿಸಿ ಅಡುಗೆ ಕೋಣೆಗೆ ಹೋಗಬೇಡಿ. ಅಡುಗೆಮನೆಯು ಪವಿತ್ರ ಸ್ಥಳವಾಗಿದೆ, ಅಲ್ಲಿ ತಾಯಿ ಅನ್ನಪೂರ್ಣ ಮತ್ತು ಲಕ್ಷ್ಮೀ ದೇವಿ ನೆಲೆಸುತ್ತಾರೆ. ಪಾದರಕ್ಷೆ ಮತ್ತು ಚಪ್ಪಲಿ ಧರಿಸಿ ಅಡುಗೆ ಮನೆಗೆ ಹೋಗುವುದರಿಂದ ಲಕ್ಷ್ಮೀ  ದೇವಿಗೆ ಕೋಪ ಬರುತ್ತದೆ. ಮನೆಯಲ್ಲಿ ಬಡತನ ಉಂಟಾಗುತ್ತದೆ. 


ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ದೇವರನ್ನು ಇಟ್ಟುಕೊಳ್ಳುವುದು ಸರಿಯಲ್ಲ.  . ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ-ಈರುಳ್ಳಿಯನ್ನು ಬಳಸಲಾಗುತ್ತದೆ. ಅಡುಗೆಮನೆಯಲ್ಲಿ  ತಾಮಸಿಕ ಆಹಾರವನ್ನು ತಯಾರಿಸಲಾಗುತ್ತದೆ. ಈ ಕಾರಣದಿಂದ ದೇವರನ್ನು ಅಡುಗೆ ಮನೆಯಲ್ಲಿ ಇಡಬಾರದು. ಹೀಗೆ ಮಾಡಿದರೆ ಲಕ್ಷ್ಮೀ  ದೇವಿ ಮುನಿಸಿಕೊಳ್ಳುತ್ತಾಳೆ.  ಇನ್ನು ಅಡುಗೆ ಮನೆಯಲ್ಲಿ ಯಾವಾಗಲೂ ಸದ್ದು ಗದ್ದಲ ಇರುತ್ತದೆ.  ದೇವರನ್ನು ಯಾವಾಗಲೂ  ಸ್ವಚ್ಛ ಮತ್ತು ಶಾಂತ ಸ್ಥಳದಲ್ಲಿ ಇರಿಸಬೇಕು.  


ಅಡುಗೆಮನೆಯಲ್ಲಿ ಎಂಜಲು ಪಾತ್ರೆಗಳನ್ನು ಎಂದಿಗೂ ಇಡಬೇಡಿ. ಕೊಳಕು ಪಾತ್ರೆಗಳನ್ನು ಅಡುಗೆಮನೆಯಿಂದ ಹೊರಗಿಡಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀಯ ಕೃಪೆ ಯಿಂದ ವಂಚಿತರಾಗಬೇಕಾಗುತ್ತದೆ. 


ಇದನ್ನೂ ಓದಿ : ಸೆಪ್ಟೆಂಬರ್ 10 ರಿಂದ ಈ ರಾಶಿಯವರಿಗೆ ಶುಭ ದಿನ ಆರಂಭ, ವಕ್ರಿ ಬುಧ ನೀಡಲಿದ್ದಾನೆ ಅಪಾರ ಯಶಸ್ಸು-ಸಂಪತ್ತು


ಅದೇ ರೀತಿ, ಅಡುಗೆಮನೆಯ ಮುಂಭಾಗದಲ್ಲಿ ಸ್ನಾನಗೃಹವನ್ನು ಎಂದಿಗೂ ನಿರ್ಮಿಸಬಾರದು. ಅಡಿಗೆ ಕೋಣೆ ಮತ್ತು ಬಾತ್ರೂಮ್ ಮುಖಾಮುಖಿಯಾಗಿರುವುದರಿಂದ  ವಾಸ್ತು ದೋಷ ಸೃಷ್ಟಿಯಾಗುತ್ತದೆ. ಇದು ಮನೆಯಲ್ಲಿ ಹಣದ ಅಭಾವಕ್ಕೆ ಕಾರಣವಾಗುತ್ತದೆ.  



(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.