High Blood Pressure: ಈ ಆಹಾರಗಳನ್ನು ಎಂದಿಗೂ ಕೂಡ ಅತಿಯಾಗಿ ಸೇವಿಸಬೇಡಿ, ಇಲ್ಲವೇ ಹೆಚ್ಚಾಗುತ್ತೆ Blood Pressure
High Blood Pressure: ರಕ್ತದೊತ್ತಡವು ಹಲವು ಕಾಯಿಲೆಗಳಿಗೆ ಆಹ್ವಾನವಿದ್ದಂತೆ. ಅಧಿಕ ರಕ್ತದೊತ್ತಡದಿಂದಾಗಿ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ದೇಹದ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ 57 ಪ್ರತಿಶತದಷ್ಟು ಪಾರ್ಶ್ವವಾಯು ಸಾವುಗಳಿಗೆ ಅಧಿಕ ರಕ್ತದೊತ್ತಡವು ನೇರ ಕಾರಣವಾಗಿದೆ ಮತ್ತು ಕೊರೊನರಿ ಹೃದಯ ಕಾಯಿಲೆಯಿಂದ 24 % ಸಾವುಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ.
High Blood Pressure: ಇತ್ತೀಚಿನ ಜೀವನ ಶೈಲಿಯಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಸಮಸ್ಯೆಗಳು ಆರಂಭವಾಗುತ್ತವೆ. ರಕ್ತದೊತ್ತಡ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇದರೊಂದಿಗೆ ಆಹಾರ ಪದ್ದತಿಯ ಬಗ್ಗೆಯೂ ನಿಗಾವಹಿಸುವುದು ಅತ್ಯಗತ್ಯ. ನಾವು ಆಹಾರ ಮತ್ತು ಪಾನೀಯದ ಅನೇಕ ವಿಷಯಗಳಲ್ಲಿ ಉಪ್ಪನ್ನು ಬಳಸುತ್ತೇವೆ. ಆದರೆ ಬಹುತೇಕ ಮಂದಿ ಅದರ ಪ್ರಮಾಣಕ್ಕೆ ಗಮನ ಕೊಡುವುದಿಲ್ಲ. ಅತಿಯಾದ ಉಪ್ಪಿನ ಸೇವನೆಯು ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
ನೀವು ಉಪ್ಪಿನ (Salt) ಪ್ರಮಾಣವನ್ನು ಸೀಮಿತಗೊಳಿಸಿದರೆ ಮತ್ತು ಒಂದು ದಿನದಲ್ಲಿ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸದಿದ್ದರೆ, ಅದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಅಧಿಕ ರಕ್ತದೊತ್ತಡದಿಂದಾಗಿ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ದೇಹದ ಪ್ರಮುಖ ಅಂಗಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ.
ದೇಹಕ್ಕೆ ಹಾನಿ:
ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನ ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ, ಭಾರತದಲ್ಲಿ 57 ಪ್ರತಿಶತದಷ್ಟು ಪಾರ್ಶ್ವವಾಯು ಸಾವುಗಳಿಗೆ ಅಧಿಕ ರಕ್ತದೊತ್ತಡವು ನೇರ ಕಾರಣವಾಗಿದೆ ಮತ್ತು ಕೊರೊನರಿ ಹೃದಯ ಕಾಯಿಲೆಯಿಂದ 24 % ಸಾವುಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- Benefits of Cucumber Water: ಆರೋಗ್ಯಕ್ಕೆ ವರದಾನ ಸವತೆಕಾಯಿ ನೀರು
ವಿಶೇಷವೆಂದರೆ ಅಧಿಕ ರಕ್ತದೊತ್ತಡದ ಲಕ್ಷಣಗಳು (Symptoms of high blood pressure) ಬೇಗನೆ ಗೋಚರಿಸುವುದಿಲ್ಲ, ಎಷ್ಟೋ ಬಾರಿ ಅದು ಪತ್ತೆಯಾಗುವುದಿಲ್ಲ. ಇದು ನಿಮ್ಮ ದೇಹವನ್ನು ಮೂಕ ಕೊಲೆಗಾರನಂತೆ ಹಾನಿ ಮಾಡುತ್ತದೆ. ಈ ಕಾರಣದಿಂದಾಗಿ ಹೃದಯ ಸ್ತಂಭನ ಅಥವಾ ಪಾರ್ಶ್ವವಾಯು, ಅಂಗಾಂಗ ವೈಫಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯವಿದೆ.
ಪ್ರತಿದಿನ ಎಷ್ಟು ಉಪ್ಪು ತಿನ್ನಬೇಕು ?
ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ, ಪ್ರತಿದಿನ 1,500 ಮಿಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಒಂದು ಟೀಚಮಚ ಉಪ್ಪನ್ನು 2,400 ಮಿಗ್ರಾಂಗೆ ಸಮನಾಗಿದ್ದರೂ ಆರೋಗ್ಯವಂತ ವ್ಯಕ್ತಿಯು ಒಂದು ದಿನದಲ್ಲಿ ಅಷ್ಟು ಪ್ರಮಾಣದ ಉಪ್ಪನ್ನು ಸೇವಿಸಬಹುದು ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ, ಆದರೆ ಇದಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸುವುದು ಒಳ್ಳೆಯದಲ್ಲ. ವಿಪರ್ಯಾಸವೆಂದರೆ ಹೆಚ್ಚಿನ ಜನರು ಸೋಡಿಯಂ ಸೇವನೆಯ ಈ ಮಾರ್ಗಸೂಚಿಯನ್ನು ಅನುಸರಿಸುವುದಿಲ್ಲ.
ತಜ್ಞರ ಪ್ರಕಾರ, ಉಪ್ಪು ಹೆಚ್ಚಾಗಿ ಸೋಡಿಯಂ ಖನಿಜವಾಗಿದ್ದು ಅದು ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಅಧಿಕ ಪ್ರಮಾಣದ ಸೋಡಿಯಂ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಚೈನೀಸ್ ಆಹಾರವನ್ನು ಸೇವಿಸಿದರೆ, ಆಹಾರಕ್ಕೆ ಸೇರಿಸುವ ಸೋಡಿಯಂನ ಇನ್ನೊಂದು ರೂಪವಾದ ಎಂಎಸ್‌ಜಿ (ಮೊನೊಸೋಡಿಯಂ ಗ್ಲುಟಾಮೇಟ್) ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
ಇದನ್ನೂ ಓದಿ- World Heart Day: ಹೃದಯವನ್ನು ಆರೋಗ್ಯವಾಗಿಡಲು ಈ ಐದು ಆಹಾರಗಳು ಸಾಕು
ಆಹಾರದಲ್ಲಿ ಈ ಬದಲಾವಣೆಗಳನ್ನು ಮಾಡಿ:
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೀವು ಔಷಧಿಗಳನ್ನು ತೆಗೆದುಕೊಳ್ಳಬಹುದು, ಆದರೆ ನಿಮ್ಮ ಆಹಾರವನ್ನು ಬದಲಿಸುವುದು ಉತ್ತಮ ಚಿಕಿತ್ಸೆಯಾಗಿದೆ. ಸಾಕಷ್ಟು ಹಣ್ಣುಗಳು, ತರಕಾರಿಗಳು, ಒಣ ಹಣ್ಣುಗಳನ್ನು ಸೇವಿಸಿ. ಮೀನು ತಿನ್ನಿರಿ ಆದರೆ ಆಹಾರದಲ್ಲಿ ಮಾಂಸ ಮತ್ತು ಡೈರಿ ಉತ್ಪನ್ನಗಳ ಪ್ರಮಾಣವನ್ನು ಕಡಿಮೆ ಮಾಡಿ. ತುಪ್ಪ ಮತ್ತು ಬೆಣ್ಣೆಯಂತಹ ವಸ್ತುಗಳನ್ನು 170 ಗ್ರಾಂ ಗಿಂತ ಹೆಚ್ಚು ಸೇವಿಸಬೇಡಿ. ಆಹಾರದಲ್ಲಿ ಧಾನ್ಯಗಳನ್ನು ಸೇರಿಸಿ ಮತ್ತು ಸಸ್ಯ ಆಧಾರಿತ ಆಹಾರದ ಮೇಲೆ ಹೆಚ್ಚು ಗಮನಹರಿಸಿ.
ಊಟದಲ್ಲಿ ಎಲ್ಲಾ ರೀತಿಯ ಸಲಾಡ್‌ಗಳನ್ನು ಸೇರಿಸಿ. ಚಿಪ್ಸ್, ಫ್ರೈಸ್, ಉಪ್ಪಿನಕಾಯಿ, ಹಪ್ಪಳ ಮುಂತಾದವುಗಳನ್ನು ತಪ್ಪಿಸಿ. ಏಕೆಂದರೆ, ಅವುಗಳಲ್ಲಿ ಉಪ್ಪಿನ ಪ್ರಮಾಣವು ತುಂಬಾ ಹೆಚ್ಚಿರುತ್ತದೆ.
ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಅಧ್ಯಯನಗಳನ್ನೂ ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.