Relationship tips : ನಿಮ್ಮ ಸಂಗಾತಿಯಿಂದ ʼಇದನ್ನುʼ ಯಾವತ್ತೂ ನಿರೀಕ್ಷಿಸಬೇಡಿ..!
ಸಂಬಂಧದಲ್ಲಿ ಬಿರುಕು ಬರಬಾರದು ಅಂದ್ರೆ ಮೊದಲು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿ. ಏಕಂದ್ರೆ ಕೆಲವೊಂದು ಬಾರಿ ಆ ನಿಮ್ಮ ನಿರೀಕ್ಷೆಗಳೇ ಸಂಬಂಧದ ಅಂತ್ಯಕ್ಕೆ ಕಾರಣವಾಗುತ್ತವೆ. ಕೆಲವರು ತಮ್ಮ ಸಂಗಾತಿಯಿಂದ ಬಹಳ ವಿಚಾರಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಯಾವಾಗ ಅವುಗಳು ನೆರವೇರುವುದಿಲ್ಲ ಎಂದು ಗೊತ್ತಾದಾಗ ನೋವು ಮತ್ತು ನಿರಾಶೆ ಉಂಟಾಗುತ್ತದೆ. ಇದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಇದರ ನಡುವೆ ಉತ್ತಮ ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಸಂಬಂಧದ ಅವಧಿ ನಿಗದಿಯಾಗಿರುತ್ತದೆ. ಉತ್ತಮ ಸಂಬಂಧಕ್ಕಾಗಿ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ ನೋಡಿ.
Relationship tips : ಸಂಬಂಧದಲ್ಲಿ ಬಿರುಕು ಬರಬಾರದು ಅಂದ್ರೆ ಮೊದಲು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿ. ಏಕಂದ್ರೆ ಕೆಲವೊಂದು ಬಾರಿ ಆ ನಿಮ್ಮ ನಿರೀಕ್ಷೆಗಳೇ ಸಂಬಂಧದ ಅಂತ್ಯಕ್ಕೆ ಕಾರಣವಾಗುತ್ತವೆ. ಕೆಲವರು ತಮ್ಮ ಸಂಗಾತಿಯಿಂದ ಬಹಳ ವಿಚಾರಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಯಾವಾಗ ಅವುಗಳು ನೆರವೇರುವುದಿಲ್ಲ ಎಂದು ಗೊತ್ತಾದಾಗ ನೋವು ಮತ್ತು ನಿರಾಶೆ ಉಂಟಾಗುತ್ತದೆ. ಇದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಇದರ ನಡುವೆ ಉತ್ತಮ ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಸಂಬಂಧದ ಅವಧಿ ನಿಗದಿಯಾಗಿರುತ್ತದೆ. ಉತ್ತಮ ಸಂಬಂಧಕ್ಕಾಗಿ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ ನೋಡಿ.
ನಿಮ್ಮ ಸಂಗಾತಿ ಎಲ್ಲಾ ಕೆಲಸಗಳು ನಿಮ್ಮನ್ನು ಸಂತೋಷಪಡಿಸುತ್ತವೆ ಎಂದು ಭಾವಿಸಬೇಡಿ. ಏಕೆಂದರೆ ಎಲ್ಲರೂ ಒಂದೇ ಮನಸ್ಸಿನ ಚೌಕಟ್ಟಿನಲ್ಲಿ ಎಲ್ಲಾ ಸಮಯದಲ್ಲೂ ಇರಲು ಸಾಧ್ಯವಿಲ್ಲ. ಅದಕ್ಕಾಗಿ ನಿರೀಕ್ಷೆ ಬೇಡ. ವಾಸ್ತವ ಅರ್ಥಮಾಡಿಕೊಳ್ಳಿ.
ಲೈಂಗಿಕತೆ ವಿಚಾರದಲ್ಲಿ ಎರಡೂ ಕಡೆ ಸಮ್ಮತವಿರಬೇಕು. ದೇಹ ಮತ್ತು ಮನಸ್ಸು ಲೈಂಗಿಕ ಕ್ರಿಯೆಯಲ್ಲಿ ತೊಡಗಿರಬೇಕು. ಬೇಡದ ಮನಸ್ಸಿನಿಂದ ದೈಹಿಕ ಸುಖ ಸಿಗುವುದಿಲ್ಲ. ಈ ವಿಷಯದಲ್ಲಿ ನಿಮ್ಮ ಸಂಗಾತಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲವೇ ಎಂಬುವುದನ್ನು ಮೊದಲು ಖಚಿತ ಪಡಿಸಿಕೊಂಡು ಅದರಂತೆ ವರ್ತಿಸುವುದು ಉತ್ತಮ.
ಇದನ್ನೂ ಓದಿ: Burn Hip Fat : ಹಿಪ್ಸ್ ಪ್ಯಾಟ್ ಕರಗಿಸಲು ಈ 7 ಎಕ್ಸಸೈಜ್ ಮಾಡಿ..!
ನಿಮ್ಮ ಸಂಗಾತಿಯನ್ನು ನೀವು ಮಾತ್ರ ಪ್ರೀತಿಸಬೇಕು, ಅವಳು ನಿಮ್ಮನ್ನಷ್ಟೇ ಇಷ್ಟಪಡಬೇಕು ಅಂತ ಭಾವಿಸುವುದು ತಪ್ಪು. ಇತರರೊಂದಿಗೆ ಅವರು ಸ್ನೇಹಪೂರ್ವಕವಾಗಿ ಬೆಳೆಯಲು ಬಿಡಿ. ಇದರ ಅರ್ಥ ನಿಮ್ಮ ಸಂಗಾತಿಯು ನಿಮ್ಮನ್ನು ಪ್ರೀತಿಸುವುದಿಲ್ಲ ಎಂದಲ್ಲ. ಅವರಿಗೂ ಸ್ನೇಹ ಬೇಕು ಅಲ್ಲವೆ.
ಸಂಬಂಧಗಳು ಯಾವಾಗಲೂ ಸುಗಮವಾಗಿ ಸಾಗುವುದಿಲ್ಲ. ಸಂಬಂಧದಲ್ಲಿ ಕೆಟ್ಟ ರಸ್ತೆಗಳನ್ನು ದಾಟುವ ಪ್ರಸಂಗ ಬರುತ್ತವೆ. ಅನೇಕ ಭಾವನಾತ್ಮಕ ಗಾಯಗಳಾಗುತ್ತವೆ. ಆರೋಗ್ಯಕರ ಸಂಬಂಧಕ್ಕೆ ನೀವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಒಬ್ಬರಿಗೊಬ್ಬರು ಇರಲು ಪ್ರಯತ್ನಿಸಿ.
ಇದನ್ನೂ ಓದಿ: Garuda Purana : ಮನುಷ್ಯ ಸಾಯುವ ಮೊದಲು ಅವನ ದೇಹದಲ್ಲಿ ಕಂಡು ಬರುತ್ತವೆ ಈ 5 ಸಂಕೇತಗಳು!
ಸಂಬಂಧದಲ್ಲಿ ರೊಮ್ಯಾನ್ಸ್ ಯಾವಾಗಲೂ ಒಂದೇ ಆಗಿದ್ದರೆ, ಅದು ಬೇಗನೆ ಬೇಸರಗೊಳ್ಳುತ್ತದೆ. ಸಂಬಂಧವು ಪ್ರಣಯದ ಬಗ್ಗೆ ಮಾತ್ರವಲ್ಲ, ಅದು ಗೌರವ, ನಿರೀಕ್ಷೆ, ತಿಳುವಳಿಕೆಯನ್ನೂ ಸಹ ಒಳಗೊಂಡಿರುತ್ತದೆ.
ಪ್ರತಿಯೊಂದು ಸಂಬಂಧವೂ ನಾವು ಸಿನಿಮಾದಲ್ಲಿ ನೋಡುವಷ್ಟು ಸುಂದರವಾಗಿರುವುದಿಲ್ಲ. ವಾಸ್ತವವನ್ನು ಅರಿಯಲು ಪ್ರಯತ್ನಿಸಿ. ಸಂಬಂಧದಲ್ಲಿ ನೀವು ಅನೇಕ ಅಡೆತಡೆಗಳನ್ನು ಜಯಿಸಬೇಕಾಗುತ್ತದೆ.
ಪ್ರಣಯ ಸಂಬಂಧದಲ್ಲಿ ಅಸೂಯೆ ಅನಿವಾರ್ಯ, ಆದರೆ ಈ ಭಾವನೆ ಮಿತಿಮಿರಬಾರದು. ಅಸೂಯೆ ವಿಪರೀತವಾದಾಗ ಅದು ಅನುಮಾನವಾಗಿ ತಿರುಗಿ ಸಂಬಂಧವನ್ನು ಮುರಿಯಬಹುದು ಎಚ್ಚರಿಕೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.