ನವದೆಹಲಿ : ಆಚಾರ್ಯ ಚಾಣಕ್ಯ ಅವರು ಅತ್ಯಂತ ಬುದ್ಧಿವಂತ ತಾರ್ಕಿಕ, ಪ್ರಾಯೋಗಿಕ ನೀತಿಗಳ ಜ್ಞಾನವನ್ನು ಹೊಂದಿದ್ದರು. ಉತ್ತಮ ಮತ್ತು ಯಶಸ್ವಿ ಜೀವನವನ್ನು ನಡೆಸಲು ಅನುಸರಿಸಬೇಕಾದ ಅನೇಕ ವಿಷಯಗಳ ಬಗ್ಗೆ ಅವರು ತಿಳಿಸಿದ್ದಾರೆ (Chanakya Niti ). ಆಚಾರ್ಯ ಚಾಣಕ್ಯರ ಈ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆಗಬಹುದಾದ ಅನೇಕ ನಷ್ಟಗಳನ್ನು ತಪ್ಪಿಸಬಹುದು (Chanakya Niti for Success).  


COMMERCIAL BREAK
SCROLL TO CONTINUE READING

ಈ ವಿಷಯಗಳ ಬಗ್ಗೆ ಯಾವತ್ತೂ ಮುಜುಗರ ಬೇಡ :  
ಜ್ಞಾನ ಸಂಪಾದನೆಯಲ್ಲಿ : ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಥವಾ ಜ್ಞಾನವನ್ನು ಸಂಪಾದಿಸುವ ವಿಷಯದಲ್ಲಿ ನಾಚಿಕೆ ಪಟ್ಟುಕೊಳ್ಳುವ ಸ್ವಾಭಾವ ಒಳ್ಳೆಯದಲ್ಲ ಎನ್ನುತಾರೆ ಆಚಾರ್ಯ ಚಾಣಕ್ಯ (Chanakya Niti for sucess). ಈ ವಿಷಯದಲ್ಲಿ ನಾಚಿಕೆಪಟ್ಟರೆ ನಷ್ಟ ನಮಗೆ ಆಗುತ್ತದೆ. ಹೀಗಾದಾಗ,  ಜೀವನದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಗೌರವಾನ್ವಿತ ಜೀವನವನ್ನು ನಡೆಸುವುದು ಕೂಡಾ ಕಷ್ಟವಾಗುತ್ತದೆ. ಹಾಗಾಗಿ ಎಲ್ಲಿಂದಲಾದರೂ ಜ್ಞಾನವನ್ನು ಪಡೆಯುವ  ಅವಕಾಶವಿದ್ದರೆ ಹಿಂಜರಿಯಬೇಡಿ. ಪ್ರಶ್ನೆಗಳನ್ನು ಕೇಳುವಲ್ಲಿ ಹಿಂದೇಟು ಹಾಕಬೇಡಿ (Chanakya niti about education). 


ಇದನ್ನೂ ಓದಿ : Zodiac Sign: ಸಂಬಂಧದ ವಿಷಯದಲ್ಲಿ ತುಂಬಾ ಪ್ರಾಮಾಣಿಕರು ಈ 5 ರಾಶಿಯ ಜನ


ಸಾಲ ಕೊಟ್ಟ ಹಣವನ್ನು ವಾಪಸ್ ಕೇಳುವ ವಿಚಾರದಲ್ಲಿ: ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಗೆ ಕೆಟ್ಟ ಸಮಯದಲ್ಲಿ ಸಹಾಯ ಮಾಡುವುದು ಒಳ್ಳೆಯದು. ಆದರೆ, ಆ ವ್ಯಕ್ತಿ ನೀವು ಮಾಡಿರುವ ಸಹಾಯವನ್ನು ಮರೆತರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ. ಅಂತಹ ವ್ಯಕ್ತಿಗೆ ಕೊಟ್ಟ ಸಾಲವನ್ನು ಮರಳಿ ಕೇಳುವಲ್ಲಿ ಸಂಕೋಚ ಬೇಡ. ಇದರಿಂದ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದೀತು ( Chanakya Niti about Money). ಹಣದ ವಿಷಯದಲ್ಲಿ ನಿಮ್ಮ ನಿಲುವನ್ನು ಯಾವಾಗಲೂ ಸ್ಪಷ್ಟಪಡಿಸಿಕೊಳ್ಳಿ. ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದ ನಂತರವೇ ಸಾಲ ನೀಡುವುದು ಉತ್ತಮ. 


ತಿನ್ನುವುದು :  ಯಾವತ್ತೂ ತಿನ್ನುವ ವಿಚಾರದಲ್ಲಿ ಹಿಂದೇಟು ಹಾಕಬಾರದು. ಎಲ್ಲಿಯಾದರೂ ಊತಕ್ಕೆ ಹೋದಾಗ ಅರ್ಧ ಹೊಟ್ಟೆಯಲ್ಲಿ ವಾಪಸ್ ಆಗುವುದು ಒಳ್ಳೆಯದಲ್ಲ (Chanakya niti about food). ಇದರಿಂದ ನಿಮಗೆ ಊಟ ಹಾಕಿದವರಿಗೆ ಅದರ ಫಲ ಕೂಡಾ ಸಿಗುವುದಿಲ್ಲ. ಹಾಗಾಗಿ ಬೇರೆಯವರ ಮನೆಯಲ್ಲಿ ಊಟ ಮಾಡುವಾಗ ಸರಿಯಾಗಿ ಮಾಡಿ ಇಲ್ಲವೇ ಮಾಡಲೇ ಬೇಡಿ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .


ಇದನ್ನೂ ಓದಿ : Shukra Gochar March 2022 : ಮಾರ್ಚ್ 31 ರೊಳಗೆ ಈ 4 ರಾಶಿಯವರಿಗೆ ಕೈತುಂಬಾ ಹಣ! ಶುಕ್ರನಿಂದ ಸಿಗಲಿದೆ ಯಶಸ್ಸು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.