Things Never Keep In Fridge: ಸಾಧ್ಯವಾದಷ್ಟು ಕಾಲ ಹಣ್ಣುಗಳು, ತರಕಾರಿಗಳನ್ನು ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಹಣ್ಣು-ತರಕಾರಿಗಳು ಫ್ರಿಡ್ಜ್‌ನ ತಂಪಾದ ತಾಪಮಾನ ಮತ್ತು ತೇವಾಂಶಕ್ಕೆ ಹಾಳಾಗುತ್ತವೆ. ಹಾಗಾಗಿ, ಆ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಫ್ರಿಡ್ಜ್‌ನಲ್ಲಿಟ್ಟರೆ ಹಾಳಾಗುವಂತಹ ಕೆಲವು ಹಣ್ಣು, ತರಕಾರಿಗಳು ಯಾವುದು ಎಂದು ನೋಡುವುದಾದರೆ... 
ಟೊಮ್ಯಾಟೋ: 

ಟೊಮ್ಯಾಟೋವನ್ನು ಫ್ರಿಡ್ಜ್‌ನ ಒಳಗೆ ಇಡುವುದರಿಂದ  ತ್ವರಿತವಾಗಿ ಹಾಳಾಗುತ್ತವೆ. ಟೊಮ್ಯಾಟೋವನ್ನು ಶೈತ್ಯೀಕರಣಗೊಳಿಸುವುದರ್ಫಿಂದ ಅವು ಪರಿಮಳ ಕಳೆದುಕೊಳ್ಳಬಹುದು. ಫ್ರಿಡ್ಜ್‌ನ ಒಳಗಿನ ತಂಪಾದ, ಆರ್ದ್ರ ವಾತಾವರಣವು ಟೊಮಾಟೊಗಳ ರುಚಿಯನ್ನು ಕೆಡಿಸುವುದರ ಜೊತೆಗೆ ಇದು ಆರೋಗ್ಯಕ್ಕೂ ಹಾನಿಕಾರಕವಾಗಿದೆ. 


ಇದನ್ನೂ ಓದಿ- ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ


ಈರುಳ್ಳಿ: 
ಈರುಳ್ಳಿಯನ್ನು ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಿದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ಈರುಳ್ಳಿ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಇವುಗಳನ್ನು ಫ್ರಿಡ್ಜ್‌ನಲ್ಲಿ ಅಥವಾ ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸುವುದರಿಂದ ಇವು ಬೇಗನೆ ಕೊಳೆಯುತ್ತವೆ. 


ಆಲೂಗಡ್ಡೆ: 
ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ಆಲೂಗಡ್ಡೆ ರುಚಿ, ವಿನ್ಯಾಸ ಎರಡರ ಮೇಲೂ ಪರಿಣಾಮ ಬೀರಬಹುದು. 


ಇದನ್ನೂ ಓದಿ-  ಈ ಕಾಳನ್ನು ಅರೆದು ಹಚ್ಚಿದರೆ ಬಿಳಿ ಕೂದಲು ನಿಮಿಷಗಳಲ್ಲಿ ಕಪ್ಪಾಗುವುದು!


ಬೆಳ್ಳುಳ್ಳಿ: 
ಈರುಳ್ಳಿಯಂತೆ ಬೆಳ್ಳುಳ್ಳಿಯೂ ಸಹ ಶುಷ್ಕ ಮತ್ತು ತಂಪಾದ ವಾತಾವರಣಕ್ಕೆ ಆದ್ಯತೆ ನೀಡುತ್ತದೆ. ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದರಿಂದ ಅದು ಬೇಗೆ ಮೊಳಕೆಯೊಡಿಯುತ್ತದೆ. 


ಬ್ರೆಡ್: 
ರೆಫ್ರಿಜರೇಟರ್ ಬ್ರೆಡ್ ಅನ್ನು ಅಚ್ಚೊತ್ತದಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಫ್ರಿಡ್ಜ್‌ನ ಆರ್ದ್ರತೆಯು ಬ್ರೆಡ್‌ನಿಂದ ತೇವಾಂಶವನ್ನು ಹೊರತೆಗೆಯುತ್ತದೆ. ಮಾತ್ರವಲ್ಲದೆ, ಇದು ಮೃದುತ್ವವನ್ನು ಕೂಡ ಕಳೆದುಕೊಳ್ಳುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.