ಹೌದು ಹಿಂದುಗಳು ಬ್ರಾಹ್ಮಿ ಮುಹೂರ್ತವನ್ನು ಹೆಚ್ಚು ಪವಿತ್ರವಾದದು ಎಂದು ನಂಬಿದ್ದಾರೆ. ಈ ಸಮಯದಲ್ಲಿ ಮದುವೆಯಾದರೆ ಅವರ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ ಅದು ಫಲ ನೀಡುತ್ತದೆ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಹಾಗಾದರೆ ಅವು ಯಾವವು ಎಂದು ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

ಮೊದಲ ತಪ್ಪು : ಬ್ರಾಹ್ಮಿ ಮುಹೂರ್ತದಲ್ಲಿ ಮಲಗುವುದು. ಹೌದು ಹಿಂದು ಸಂಪ್ರದಾಯಗಳ ಪ್ರಕಾರ ಬೇಳಗಿನ ಜಾವ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಮಲಗಿದರೆ ಅದು ದರಿದ್ರತನವನ್ನು ಸೂಚಿಸುತ್ತದೆ. ಹಾಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಪೂಜೆ ಪುನಸ್ಕಾರಗಳಂತಹ ಕಾರ್ಯಗಳನ್ನು ಮಾಡುವುದರಿಂದ ನಾವು ಅಂದುಕೊಂಡಿರುವ ಕೆಲಸ ಕಾರ್ಯಗಳು ಕೈಗೂಡುತ್ತವೆ ಎನ್ನುವುದು ನಂಬಿಕೆ. 


ಅಂದುಕೊಂಡ ಕೆಲಸಗಳನ್ನು ನೆರವೇರಿಸಿಕೊಳ್ಳಬೇಕಾದರೆ ಬ್ರಾಹ್ಮಿ ಮುಹೂರ್ತದಲ್ಲಿ ಮಲಗುವುದನ್ನು ನಿಲ್ಲಿಸಬೇಕು ಅಂದಾಗ ಮಾತ್ರ ನಾವು ಉನ್ನತಿಯನ್ನು ಸಾಧಿಸಬಹುದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ-ಬಂಗಾರದ ಈ ವಸ್ತು ಕಳೆದು ಹೋದರೆ ಸಿಗುವುದಂತೆ ಅಶುಭ ವಾರ್ತೆ ! ಸ್ಥಾನಮಾನದ ಮೇಲೂ ಆಗುವುದಂತೆ ಪ್ರಹಾರ !


ಎರಡನೇ ತಪ್ಪು : ಬ್ರಾಹ್ಮಿ ಮುಹೂರ್ತದಲ್ಲಿ ಆಹಾರ ಸೇವನೆ. ಹೌದು ಬೆಳಗಿನ ಜಾವ ಎದ್ದು ಸ್ನಾನ ಮಾಡಿ ಪೂಜಾ ಕಾರ್ಯವನ್ನು ಮುಗಿಸಿ ಆಹಾರ ಸೇವನೆ ಮಾಡಬೇಕು ಎನ್ನುವುದು ಹಿಂದೂ ಸಂಪ್ರದಾಯ. ಆದರೆ ಬ್ರಾಹ್ಮಿ ಸಮಯದಲ್ಲಿ ಆಹಾರ ಸೇವನೆ ಮಾಡುವುದು ಮನುಷ್ಯನ ದೇಹದಲ್ಲಿಉ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ ಜೊತೆಗೆ ಆರೋಗ್ಯವು ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. 


ಮೂರನೇಯ ತಪ್ಪು : ಮೂರನೇಯ ತಪ್ಪು ಅಂದರೇ ಅದು ಬ್ರಾಹ್ಮಿ ಮುಹೂರ್ತದಲ್ಲಿ ಕಣ್ಣೀರು ಹಾಕುವುದು. ಹಿಂದು ಸಂಪ್ರದಾಯಗಳ ಪ್ರಕಾರ ಬ್ರಾಹ್ಮಿ ಮುಹೂರ್ತ ಉತ್ತಮ ಸಮಯ ಇದು ದೇವತೆಗಳು ಪ್ರಸನ್ನವಾಗುವಂತಹ ವೇಳೆ. ಹಾಗಾಗಿ ಈ ಸಮಯದಲ್ಲಿ ಸಂತೋಷವಾಗಿರಬೇಕು. ಆದಷ್ಟು ಶಾಂತವಾಗಿರಬೇಕು. ಇಂತಹ ಸಮಯದಲ್ಲಿ ಕಣ್ಣೀರು, ಜಗಳ, ಸಿಟ್ಟು ಮುಂತಾದ ಕದನ ಕ್ರಿಯೆಗಳನ್ನು ಮಾಡಿದರೆ ಆಮನೆಗೆ ಒಳ್ಳೆಯದಾಗುವುದಿಲ್ಲ ಜೊತೆಗೆ ಅಂತವರಿಗೆ ಸಫಲರಾಗಲು ದಾರಿಗಳು ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ-Gajakesari Yog: 48 ಗಂಟೆಗಳ ನಂತರ ಈ ಜನರಿಗೆ ದಿಢೀರ್ ಹಣ & ಅಪಾರ ಯಶಸ್ಸು ಸಿಗುತ್ತದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.