Weight Loss: ರಾತ್ರಿ ಮಲಗುವಾಗ ಯಾವತ್ತೂ ಈ ತಪ್ಪನ್ನು ಮಾಡಬೇಡಿ, ತೂಕ ಹೆಚ್ಚಾಗುತ್ತದೆ!
Weight Loss Tips: ರಾತ್ರಿಯ ವೇಳೆ ನಾವು ತಿನ್ನುವ ವಿಚಾರದಲ್ಲಿ ತುಂಬಾ ಅಸಡ್ಡೆ ಹೊಂದಿದ್ದೇವೆ. ಮಲಗುವ ಹೊತ್ತಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ದೇಹದ ತೂಕ ಹೆಚ್ಚಾಗಲು ಆರಂಭಿಸುತ್ತದೆ.
Weight Loss Tips: ಇಂದಿನ ಕಾಲದಲ್ಲಿ, ಅನೇಕ ಜನರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಬೊಜ್ಜು ಅನೇಕ ಸಮಸ್ಯೆಗಳಿಗೆ ಮೂಲವಾಗಿದೆ. ಇದು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಪರಿಧಮನಿಯ ಕಾಯಿಲೆಯ ಅಪಾಯವನ್ನು ಸೃಷ್ಟಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ತೂಕವನ್ನು ಕಡಿಮೆ ಮಾಡಬೇಕು. ತೂಕವನ್ನು ಕಳೆದುಕೊಳ್ಳಲು ಕೆಲವರಿಗೆ ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ಜಿಮ್ ಆಶ್ರಯಿಸಬೇಕಾಗುತ್ತದೆ. ಅನೇಕ ಬಾರಿ ನಮ್ಮದೇ ತಪ್ಪುಗಳಿಂದಾಗಿ ಹಠಾತ್ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಸ್ಥೂಲಕಾಯವನ್ನು ತಪ್ಪಿಸಲು ರಾತ್ರಿ ಹೊತ್ತು ಈ ತಪ್ಪುಗಳನ್ನು ಮಾಡಬಾರದು.
ಮಲಗುವ ಮುನ್ನ ತಂಪು ಪಾನೀಯ ಸೇವನೆ : ಸಾಮಾನ್ಯವಾಗಿ ನಾವು ಮದುವೆ, ಪಾರ್ಟಿಗಳಲ್ಲಿ ಊಟದ ನಂತರ ಅಥವಾ ಮನೆಗೆ ಅತಿಥಿಗಳು ಬಂದಾಗ ರಾತ್ರಿ ಊಟದ ಬಳಿಕ ತಂಪು ಪಾನೀಯಗಳನ್ನು ಕುಡಿಯುತ್ತೇವೆ. ಆದರೆ ಮಲಗುವ ಮುನ್ನ ತಂಪು ಪಾನೀಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಇದರಿಂದ ಸೊಂಟ ಮತ್ತು ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ.
ಇದನ್ನೂ ಓದಿ: Health Care Tips: ಶರೀರದಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ!
ಭಾರೀ ಭೋಜನ ಮಾಡಬೇಡಿ : ಕೆಲವು ಜನರು ರಾತ್ರಿ ಅತಿಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಇದು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಕೆಲವರಿಗೆ ಸಾಮಾನ್ಯವಾಗಿ ಹಗಲಿನಲ್ಲಿ ಹೆಚ್ಚು ತಿನ್ನಲು ಸಮಯ ಸಿಗುವುದಿಲ್ಲ, ಆದ್ದರಿಂದ ಅವರು ರಾತ್ರಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಇದು ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಮದ್ಯಪಾನ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೂ ಕೆಲವರು ತಮ್ಮ ಕೆಟ್ಟ ಚಟದಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಲೇಟ್ ನೈಟ್ ಪಾರ್ಟಿಗಳಲ್ಲಿ ಮದ್ಯಪಾನ ಮಾಡುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಈ ರೀತಿ ಮಾಡುವುದರಿಂದ ದೇಹದ ಮೆಟಾಬಾಲಿಸಂ ರೇಟ್ ಕಡಿಮೆಯಾಗುತ್ತದೆ. ನಂತರ ತೂಕ ಹೆಚ್ಚಾಗುವ ಅಪಾಯವಿದೆ.
ಇದನ್ನೂ ಓದಿ: Long hair tips: ಉದ್ದ, ದಪ್ಪ ಕೂದಲಿಗಾಗಿ ಈ ಎಣ್ಣೆಯನ್ನು ಬಳಸಿ, ಹೇರ್ ಫಾಲ್ ಕೂಡ ನಿಲ್ಲುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.