Vastu Tips For Money : ಅನೇಕ ಜನರು ಮನೆಯ ಮುಂದೆ ಬೇರೆ ಬೇರೆ ರೀತಿಯ ಗಿಡಗಳನ್ನು ನೆಡಲು ಬಯಸುತ್ತಾರೆ. ಇದಕ್ಕಾಗಿ, ತಮಗೆ ಇಷ್ಟವಾದ ಗಿಡವನ್ನು ತಂದು ಮನೆಯಲ್ಲಿ ನೆಡುತ್ತಾರೆ. ಆದರೆ ವಾಸ್ತು ಪ್ರಕಾರ ಕೆಲವು ಗಿಡಗಳನ್ನು ಮನೆಯಲ್ಲಿ ನೆಡ ಲೇಬಾರದು. ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ದಟ್ಟ ದಾರಿದ್ರ್ಯ ಕಾಡುತ್ತದೆ ಎನ್ನುವುದು ನಂಬಿಕೆ. ಹಾಗಾಯಿ ಅಂಥಹ ಗಿಡಗಳನ್ನು ತಪ್ಪಿಯೂ ಮೇಯಲ್ಲಿ ನೆಡಬಾರದು.  


COMMERCIAL BREAK
SCROLL TO CONTINUE READING

ಗೋರಂಟಿ ಗಿಡ :
ಮನೆಯಲ್ಲಿ ಗೋರಂಟಿ ಗಿಡ ನೆಡುವುದು ಶುಭವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ದುಷ್ಟ ಶಕ್ತಿಗಳು ಈ ಸಸ್ಯದಲ್ಲಿ ನೆಲೆಸಿರುತ್ತವೆಯಂತೆ. ಮನೆಯಲ್ಲಿ ಗೋರಂಟಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅಲ್ಲದೆ ಎಷ್ಟೇ ದುಡಿದರೂ ಹಣ ಉಳಿಸುವುದು ಸಾಧ್ಯವಾಗುವುದಿಲ್ಲವಂತೆ. 


ಇದನ್ನೂ ಓದಿ : ಇನ್ನು ಮೂರೇ ದಿನಗಳಲ್ಲಿ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ , ಅಪಾರ ಸುಖ ಸಂಪತ್ತು ಕರುಣಿಸಲಿದ್ದಾನೆ ಶುಕ್ರ


ಹುಣಸೆ ಮರ :
ಹುಣಸೆಹಣ್ಣು ತಿನ್ನಲು ರುಚಿಯಾಗಿರಬಹುದು. ಆದರೆ ಮನೆಯಲ್ಲಿ ಇದರ ಗಿಡವನ್ನು ಹಾಕಬಾರದು. ವಾಸ್ತು ಶಾಸ್ತ್ರದ ಪ್ರಕಾರ ಹುಣಸೆ ಗಿಡ ನೆಡುವುದರಿಂದ ಮನೆಯಲ್ಲಿ ಸದಾ ಭಯದ ವಾತಾವರಣ  ನೆಲೆಯಾಗುತ್ತದೆಯಂತೆ. ಹಾಗಾಗಿ ತಪ್ಪಿಯೂ ಕೂಡಾ ಮನೆಯಲ್ಲಿ ಹುಣಸೆ ಗಿಡ ನೆಡಬಾರದು. 


ಬುಗರಿ ಹಣ್ಣಿನ ಗಿಡ :
ಮನೆಯಲ್ಲಿ  ಬುಗರಿ ಹಣ್ಣಿನ ಗಿಡವನ್ನು ನೆಟ್ಟರೆ ಸಂತೋಷ ನಾಶವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.  ಈ ಗಿಡ ಮುಳ್ಳುಗಳನ್ನು ಹೊಂದಿದೆ. ಅದೇ ರೀತಿಯಲ್ಲಿ,  ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆ ಮಂದಿಯ ಜೀವನ ಕೂಡಾ ಮುಳ್ಳುಗಳಿಂದ ಕೂಡಿರುತ್ತದೆ. ಈ ಮರವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.


ಇದನ್ನೂ ಓದಿ : Shani Mahadasha: ಈ ಜನರಿಗೆ 19 ವರ್ಷಗಳ ಕಾಲ ಇರಲಿದೆ ಶನಿ ಮಹಾದಶಾ: ಶೀಘ್ರವೇ ಪರಿಹಾರ ಮಾಡಿ, ಅಶುಭ ನಿವಾರಿಸಿ


ಕಳ್ಳಿ ಗಿಡ :
ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಜಗಳಗಳು,  ನಡೆಯುತ್ತಿರುತ್ತವೆ.  ಈ ಗಿದವ್ಕಾನ್ನು ನೆಡುವುದರಿಂದ ಮನೆಯಲ್ಲಿ ಯಾರೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಈ ಸಸ್ಯವು ಮನೆಯಲ್ಲಿ ಯಶಸ್ಸನ್ನು ತಡೆಯುತ್ತದೆ, ಇದರಿಂದಾಗಿ ಮನೆಯಲ್ಲಿ ಬಡತನ ನೆಲೆಸುತ್ತದೆ. 


 



 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.