ಇದು ನಿಮ್ಮ ಮೂಲಾಂಕವಾಗಿದ್ದರೆ ಹೊಸ ವರ್ಷ ಹೊತ್ತುತರಲಿದೆ ಸಮೃದ್ದಿ, ಶುಕ್ರ, ಮಂಗಳನ ಕೃಪೆಯಿಂದ ಸಿಗಲಿದೆ ಅದೃಷ್ಟ
ಮುಂಬರುವ ಹೊಸ ವರ್ಷದ ಸಂಖ್ಯೆ 6 ಆಗಿದೆ. ಸಂಖ್ಯೆ 6 ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ ಈ ಇಡೀ ವರ್ಷವು ಶುಕ್ರನ ಪ್ರಭಾವಕ್ಕೆ ಒಳಗಾಗುತ್ತದೆ.
ನವದೆಹಲಿ : ಸಂಖ್ಯಾಶಾಸ್ತ್ರದ (Numerology) ಪ್ರಕಾರ, 2022 ವರ್ಷವು ವಿಶೇಷವಾಗಿರುತ್ತದೆ. ವಾಸ್ತವವಾಗಿ ಮುಂಬರುವ ಹೊಸ ವರ್ಷದ ಸಂಖ್ಯೆ 6 ಆಗಿದೆ. ಸಂಖ್ಯೆ 6 ಶುಕ್ರ ಗ್ರಹಕ್ಕೆ (Venus) ಸಂಬಂಧಿಸಿದೆ. ಹಾಗಾಗಿ ಈ ಇಡೀ ವರ್ಷವು ಶುಕ್ರನ ಪ್ರಭಾವಕ್ಕೆ ಒಳಗಾಗುತ್ತದೆ. ಇದಲ್ಲದೆ, ಹೊಸ ವರ್ಷದ ಆರಂಭವು ಕನ್ಯಾಲಘ್ನದಲ್ಲೇ ಆರಂಭವಾಗಲಿದೆ. ಈ ವರ್ಷದ ಆರಂಭದಲ್ಲಿ, ಚಂದ್ರನು ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಆದ್ದರಿಂದ, ಮಂಗಳನ ಪ್ರಭಾವವೂ ಇರುತ್ತದೆ.
2022ರಲ್ಲಿ ಯಾರಿಗೆ ಪ್ರಯೋಜನವಾಗಲಿದೆ ?
ಸಂಖ್ಯಾಶಾಸ್ತ್ರದ (Numerology) ಪ್ರಕಾರ, 6, 14 ಅಥವಾ 24 ರಂದು ಜನಿಸಿದವರು ಅಥವಾ ಅವರ ಜನ್ಮ ವರ್ಷವು 15, 24, 33 ಅಥವಾ 42 ರಂದು ನಡೆಯುತ್ತಿದ್ದರೆ, ಅವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ, ಫೆಬ್ರವರಿ, ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಜನಿಸಿದವರು ಸಹ ಪ್ರಯೋಜನ ಪಡೆಯುತ್ತಾರೆ. ಇದರೊಂದಿಗೆ, ವೃಷಭ, ಸಿಂಹ (Leo) , ತುಲಾ (Libra), ವೃಶ್ಚಿಕ (Scorpio) ಮತ್ತು ಕುಂಭ ರಾಶಿಯ ಜನರು ಹೊಸ ಮೂಲಗಳಿಂದ ಲಾಭ ಪಡೆಯುತ್ತಾರೆ. ಮತ್ತೊಂದೆಡೆ, ಯಾರ ಜಾತಕದಲ್ಲಿ ಶುಕ್ರ ಮತ್ತು ಚಂದ್ರ ಉಚ್ಚ ಸ್ಥಾನದಲ್ಲಿರುತ್ತರೆಯೋ ಅವರಿಗೆ ಹೊಸ ವರ್ಷವು ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ.
ಇದನ್ನೂ ಓದಿ : Palmistry: ನಿಮ್ಮ ಹೆಬ್ಬೆರಳಿನಲ್ಲಿ ಈ ರೇಖೆ ಇದ್ದರೆ ರಾಜನಂತೆ ಸಂಪತ್ತು ಗಳಿಸುವಿರಿ..!
2022 ರಲ್ಲಿ ಯಾರಿಗೆ ಎದುರಾಗಲಿದೆ ಸಮಸ್ಯೆಗಳು ?
ಸಂಖ್ಯಾಶಾಸ್ತ್ರದ ಪ್ರಕಾರ, ಹುಟ್ಟಿದ ದಿನಾಂಕ 01, 10, 09, 18, 27, 18 ಆಗಿರುವ ಜನರಿಗೆ ಹೊಸ ವರ್ಷವು ಕಷ್ಟಕರವಾಗಿರುತ್ತದೆ. ಅಲ್ಲದೆ, ಯಾರ ಜಾತಕದಲ್ಲಿ ಶುಕ್ರ ಅಥವಾ ಮಂಗಳನ (Mars) ದೋಷ ಇರುತ್ತದೆಯೋ, ಅವರು ಕೂಡಾ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಇವರೂ ಹೊಸವರ್ಷದಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳ್ಳೆಯದು. ಸಣ್ಣ ಸಣ್ಣ ವಿಚಾರಗಳು ಕೂಡಾ ವಿವಾದಕ್ಕೆ ಕಾರಣವಾಗಬಹುದು.
ಹೊಸ ವರ್ಷ ಉತ್ತಮವಾಗಿರಲು ಏನು ಮಾಡಬೇಕು ?
2022 ರ ವರ್ಷವನ್ನು ಉತ್ತಮ ಮತ್ತು ಮಂಗಳಕರವಾಗಿಸಲು, ಶುಕ್ರವಾರದಂದು ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ. ಪ್ರತಿನಿತ್ಯವೂ ಲಕ್ಷ್ಮಿ ದೇವಿಯನ್ನು (Godess Lakshmi) ಪೂಜಿಸಿ. ಇದಲ್ಲದೆ ವರ್ಷವಿಡೀ ಪ್ರತಿ ಶುಕ್ರವಾರದಂದು 'ಶ್ರೀ ಸೂಕ್ತ'ವನ್ನು ಪಠಿಸಿ. ವರ್ಷವಿಡೀ ಗುಲಾಬಿ ಅಥವಾ ಕೆನೆ ಬಣ್ಣವನ್ನು ಹೆಚ್ಚು ಹೆಚ್ಚು ಬಳಸಿ. ಅದೇ ಸಮಯದಲ್ಲಿ, ಸಾಧ್ಯವಾದಷ್ಟು ಕಪ್ಪು ಬಣ್ಣವನ್ನು ಬಳಸುವುದನ್ನು ತಪ್ಪಿಸಿ.
ಇದನ್ನೂ ಓದಿ: Feng shui: ಆಮೆ ಜೊತೆಗೆ ಈ ವಿಗ್ರಹ ಇಟ್ಟರೆ ಹಣದ ಹೊಳೆಯೇ ಹರಿಯುತ್ತದೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.