ನವದೆಹಲಿ: ಸಂಖ್ಯಾಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಅವನ ರಾಡಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯಕ್ತಿಯ ಜೀವನದಿಂದ ಅವನ ಭವಿಷ್ಯದವರೆಗೆ ಬಹಳಷ್ಟು ಅಂದಾಜು ಮಾಡಬಹುದು. ಒಬ್ಬ ವ್ಯಕ್ತಿ 1 ರಿಂದ 31ರ ಸಂಖ್ಯೆಯ ನಡುವೆ ಯಾವುದೇ ದಿನದಲ್ಲಿ ಜನಿಸಬಹುದು. ಆದರೆ ರಾಡಿಕ್ಸ್ ಅನ್ನು 1 ರಿಂದ 9 ಅಂಕೆಗಳವರೆಗೆ ಮಾತ್ರ ಪರಿಗಣಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ರಾಡಿಕ್ಸ್ ಎಂದರೆ ಏನು..?


ಬಹುತೇಕರಿಗೆ ಈ ರಾಡಿಕ್ಸ್ ಎಂದರೆ ಏನು? ಅನ್ನೋದರ ಬಗ್ಗೆ ತಿಳಿದಿರುವುದಿಲ್ಲ. ಇದು ತುಂಬಾ ಸುಲಭ. ಉದಾಹರಣೆಗೆ ಯಾರಾದರೂ 15ನೇ ತಾರೀಖಿನಂದು ಜನಿಸಿದರೆ ಅವರ ರಾಡಿಕ್ಸ್ ಸಂಖ್ಯೆ 1+5=6. ಅದೇ ರೀತಿ 6 ಮತ್ತು 24 ರಂದು ಜನಿಸಿದ ವ್ಯಕ್ತಿಯ ರಾಡಿಕ್ಸ್ ಕೂಡ 6 ಆಗಿರುತ್ತದೆ. ರಾಡಿಕ್ಸ್ ಪ್ರಕಾರ ಆಗಸ್ಟ್ 7ರ ದಿನವು ನಿಮಗೆ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳಿರಿ.


ಇದನ್ನೂ ಓದಿ: Lucky Gemstone: ಈ ರತ್ನ ಧರಿಸುವುದರಿಂದ ಅದ್ಭುತ ಲಾಭಗಳು ಸಿಗುತ್ತವೆ, ಮಲಗಿರುವ ಭಾಗ್ಯ ಕೂಡ ಬದಲಾಗುತ್ತದೆ


1) ಇಂದು ನಿಮ್ಮ ದಿನವು ಸರಾಸರಿಯಾಗಿರುತ್ತದೆ. ಕಚೇರಿ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ನೀವು ಕೆಲವು ಕೆಲಸಕ್ಕೆ ಯೋಜಿಸುತ್ತಿದ್ದರೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಿ. ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಬಹುದು. ಚಾಲನೆ ಮಾಡುವಾಗ ಜಾಗರೂಕರಾಗಿರಿ.


2) ನೀವು ಇಂದು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸದ್ಯಕ್ಕೆ ಮುಂದೂಡಿ. ಯಾವುದೇ ಕೆಲಸದಲ್ಲಿ ಆತುರಪಡಬೇಡಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಉಳಿಯುತ್ತದೆ.


3) ಈ ದಿನದಂದು ಯಾವುದೇ ವ್ಯಕ್ತಿಯನ್ನು ಶೀಘ್ರದಲ್ಲೇ ನಂಬಬೇಡಿ. ಕಚೇರಿಯಲ್ಲಿ ತೊಂದರೆ ಉಂಟಾಗಬಹುದು. ವ್ಯಾಪಾರಸ್ಥರು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅವರು ನಷ್ಟವನ್ನು ಅನುಭವಿಸಬೇಕಾಗಬಹುದು. ಉಸಿರಾಟದ ಕಾಯಿಲೆ ಇರುವವರು ಜಾಗರೂಕರಾಗಿರಬೇಕು.


4) 4 ರಾಡಿಕ್ಸ್ ಜನರಿಗೆ ಇಂದು ಉತ್ತಮ ದಿನವಾಗಲಿದೆ. ಕಚೇರಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಅದೃಷ್ಟ ಇರುತ್ತದೆ. ಇದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಮಾಡಿದ ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗಲಿದೆ.


5) ಇದು ಮಿಶ್ರ ದಿನವಾಗಲಿದೆ. ಯಾವುದೇ ನಿರ್ಧಾರದಲ್ಲಿ ಅಪಾಯವನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ವ್ಯಾಪಾರಸ್ಥರು ಲಾಭ ಪಡೆಯಬಹುದು. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆಗಳಿವೆ.


6) ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ಕಚೇರಿ ಮತ್ತು ವ್ಯಾಪಾರದ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆದರೆ ವೆಚ್ಚ ಅಧಿಕವಾಗಲಿದೆ. ಆದ್ದರಿಂದ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಭಾವೋದ್ವೇಗಕ್ಕೆ ಒಳಗಾಗಿ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬದ ಬೆಂಬಲ ಸಿಗಲಿದೆ.


7) ನೀವು ಸ್ನೇಹಿತರಿಂದ ನಿರೀಕ್ಷಿತ ಸಹಕಾರ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಮಗುವಿನ ಕಡೆಯಿಂದ ಉದ್ವೇಗ ಉಂಟಾಗಬಹುದು. ಚಾಲನೆ ಮಾಡುವಾಗ ಜಾಗರೂಕರಾಗಿರಿ.


8) ಈ ರಾಡಿಕ್ಸ್ ಜನರಿಗೆ ಇಂದು ಸಾಮಾನ್ಯವಾಗಿರುತ್ತದೆ. ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ.


9) ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳನ್ನು ಕಾಣಬಹುದು. ನೀವು ಮಾಡಿದ ಕಠಿಣ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಈ ದಿನವು ಸಂತೋಷವಾಗುತ್ತದೆ.


ಇದನ್ನೂ ಓದಿ: Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.