Numerology: ಎಂತಹವರನ್ನೇ ಆದರೂ ಮೊದಲ ನೋಟದಲ್ಲೇ ಮೋಡಿ ಮಾಡುತ್ತಾರೆ ಈ ದಿನಾಂಕದಂದು ಜನಸಿದ ಜನ
Numerology: ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾ ಶಾಸ್ತ್ರಕ್ಕೂ ಬಹಳ ಮಹತ್ವವಿದೆ. ಸಂಖ್ಯಾಶಾಸ್ತ್ರದಲ್ಲಿ ಜನರ ಜನನ ದಿನಾಂಕದ ಆಧಾರದ ಮೇಲೆ ರಾಡಿಕ್ಸ್ ಸಂಖ್ಯೆಗಳನ್ನು ಹೇಳಲಾಗುತ್ತದೆ. ಪ್ರತಿ ರಾಡಿಕ್ಸ್ ಸಂಖ್ಯೆಗೂ ಒಂದೊಂದು ಗ್ರಹ ಆಡಳಿತ ಗ್ರಹವಾಗಿದ್ದು, ಇದರ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವವನ್ನು ಬಣ್ಣಿಸಲಾಗುತ್ತದೆ.
Mulank 6 People Nature: ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರಕ್ಕೂ ಬಹಳ ಮಹತ್ವವಿದೆ. ಸಂಖ್ಯಾಶಾಸ್ತ್ರದಲ್ಲಿ ಯಾವುದೇ ವ್ಯಕ್ತಿಯ ರಾಡಿಕ್ಸ್ ಸಂಖ್ಯೆಯನ್ನು ಅವನ ಜನ್ಮ ದಿನಾಂಕದಿಂದ ನಿರ್ಧರಿಸಬಹುದು. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಯಾವುದೇ ತಿಂಗಳ 6, 15 ಮತ್ತು 24ನೇ ತಾರೀಕಿನಂದು ಜನಿಸಿದವರ ಮೂಲಾಂಕ ಅಥವಾ ರಾಡಿಕ್ಸ್ ನಂಬರ್ 6 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 6ರ ಆಡಳಿತ ಗ್ರಹ ಶುಕ್ರ. ಶುಕ್ರ ಗ್ರಹವನ್ನು ಸಂಪತ್ತು, ಸಮೃದ್ಧಿ, ಐಷಾರಾಮಿ ಜೀವನದ ಅಂಶ ಎಂದು ಬಣ್ಣಿಸಲಾಗುತ್ತದೆ.
ರಾಡಿಕ್ಸ್ 6ರ ಜನರ ವ್ಯಕ್ತಿತ್ವ, ಸ್ವಭಾವ:
ಸಂಖ್ಯಾ ಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 6ರ ಜನರು ಬಹಳ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಶುಕ್ರನ ಪ್ರಭಾವದಿಂದಾಗಿ ಐಷಾರಾಮಿ ಜೀವನವನ್ನು ಇಷ್ಟಪಡುವ ಈ ರಾಶಿಯವರ ಮೇಲೆ ಸದಾ ಲಕ್ಷ್ಮೀ ಆಶೀರ್ವಾದವಿರುತ್ತದೆ. ಇವರು ತಮ್ಮವರಿಗಾಗಿ ಹಣ ಖರ್ಚು ಮಾಡುವಲ್ಲಿಯೂ ತುಂಬಾ ಉದಾರಿಗಳು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Numerology: ಈ ದಿನ ಜನಿಸಿದವರು ಶಾಂತ, ಮೃದು ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ!
ಆಕರ್ಷಕ ವ್ಯಕ್ತಿತ್ವ:
ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ ಸಂಖ್ಯೆ 6ರ ಜನರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ವರ್ತಮಾನದಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ಬೇರೆಯವರಿಗೆ ಮಾದರಿಯಾಗಿರುತ್ತಾರೆ. ಇವರು ಮೊದಲ ನೋಟದಲ್ಲಿಯೇ ಬೇರೆಯವರನ್ನು ಮೋಡಿ ಮಾಡಬಲ್ಲರು. ಎಂತಹವರೇ ಆದರೂ, ಇವರನ್ನು ಮೊದಲೇ ಭೇಟಿಯಲ್ಲಿಯೇ ಪ್ರೀತಿಸುವಂತೆ ಮಾಡಬಲ್ಲರು. ಮಾತ್ರವಲ್ಲ, ಇವರೊಂದಿಗಿನ ಪ್ರಯಾಣವು ಜೊತೆಗಿರುವವರಿಗೆ ಆಹ್ಲಾದಕರ ಅನುಭವವನ್ನು ನೀಡಬಲ್ಲದು. ಹಾಗಾಗಿ, ಜನರು ಇವರೊಂದಿಗೆ ಹೆಚ್ಚು ತಮ್ಮ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.
ಆರ್ಥಿಕ ಸ್ಥಿತಿ:
ರಾಡಿಕ್ಸ್ ಸಂಖ್ಯೆ 6ರ ಜನರ ಆರ್ಥಿಕ ಸ್ಥಿತಿ ಸದಾ ಒಂದೇ ರೀತಿ ಆಗಿರುವುದಿಲ್ಲ. ಕೆಲವೊಮ್ಮೆ ಹಣದ ಸುರಿಮಳೆಯಾದರೆ, ಇನ್ನೂ ಕೆಲವು ಬಾರಿ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಆದಾಗ್ಯೂ, ಹಣ ಇರಲಿ, ಇಲ್ಲದಿರಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುಕ್ತ ಮನಸ್ಸಿನಿಂದ ಹರ್ಷಚಿತ್ತತೆಯಿಂದ ಇರುವ ಇವರ ಸ್ವಭಾವವು ಬೇರೆಯವರಿಗೆ ಸ್ಫೂರ್ತಿಯಾಗಿರುತ್ತದೆ.
ಇದನ್ನೂ ಓದಿ- Numerology: ಈ ಸಂಖ್ಯೆಯ ಜನರು ಜೀವನದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಾರೆ..!
ಜೀವನದಲ್ಲಿ ಯಶಸ್ಸು:
ಮೂಲಾಂಕ 6ರ ಜನರು ಹೆಚ್ಚಾಗಿ ಕಲೆ, ಮಾಡೆಲಿಂಗ್, ಫಿಲ್ಮ್ ಲೈನ್, ಫ್ಯಾಶನ್ ಡಿಸೈನಿಂಗ್, ಆಭರಣಗಳು, ವ್ಯಾಪಾರ ಸಂಬಂಧಿತ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುತ್ತಾರೆ. ತುಂಬಾ ಶ್ರಮ ಜೀವಿಗಳಾದ ಇವರು ತಮ್ಮ ಪರಿಶ್ರಮದಿಂದಲೇ ಜೀವನದಲ್ಲಿ ಇವರಿಗೆ ಸಾಕಷ್ಟು ಹೆಸರು, ಕೀರ್ತಿ, ಹಣವನ್ನು ತರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.