Mahashivratri 2022: ಧರ್ಮಗ್ರಂಥಗಳ ಪ್ರಕಾರ, ಮಹಾಶಿವರಾತ್ರಿಯ ಪವಿತ್ರ ಹಬ್ಬವು ಶಿವನ ಕೃಪೆಗೆ (Lord Shiva) ಪಾತ್ರರಾಗಲು ವಿಶೇಷವಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಶಿವ ಮತ್ತು ಶಕ್ತಿಯ ಮಿಲನ  ಈ ದಿನ ನಡೆಯಿತು. ಅಂತೆಯೇ , ಶಿವ ಪುರಾಣದ ಪ್ರಕಾರ, ಫಾಲ್ಗುಣ  ಮಾಸದ ಚತುರ್ದಶಿಯಂದು ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನು ಎನ್ನಲಾಗಿದೆ. ಈ ಬಾರಿ ಮಹಾಶಿವರಾತ್ರಿಯ (Mahashivaratri 2022) ಪವಿತ್ರ ಹಬ್ಬವು ಮಾರ್ಚ್ 1, 2022 ರಂದು ಬರಲಿದೆ. . ಈ ದಿನದಂದು ಶಿವನನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂಬುದು ಧಾರ್ಮಿಕ ನಂಬಿಕೆ (Shiva pooja vidhi). ಅಲ್ಲದೆ, ಈ ದಿನದಂದು ವೃತಾಚರಣೆ ಮಾಡುವುದರಿಂದ ಮತ್ತು ಶಿವನನ್ನು ಪೂಜಿಸುವುದರಿಂದ, ಅವಿವಾಹಿತ ಹೆಣ್ಣುಮಕ್ಕಳಿಗೆ ವಿವಾಹ ಯೋಗ ಕೂಡಿ ಬರುತ್ತದೆ. ಮಹಿಳೆಯರಿಗೆ ಅಖಂಡ ಸೌಭಾಗ್ಯ ದೊರೆಯುತ್ತದೆ. ಶಿವ ಪುರಾಣದ ಪ್ರಕಾರ, ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಯಾವ ರೀತಿಯ ಹೂವುಗಳನ್ನು ಅರ್ಪಿಸಬೇಕು  ಎನ್ನುವುದನ್ನು ಹೇಳಲಾಗಿದೆ (Shiva pooja flowers). 


COMMERCIAL BREAK
SCROLL TO CONTINUE READING

ಕನೆರ್ :
ಕನೆರ್  ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ ಆಭರಣಗಳ ಪ್ರಾಪ್ತಿಯಾಗುತ್ತದೆ. ಮತ್ತೊಂದೆಡೆ, ಶಿವಲಿಂಗದ (shivalinga) ಮೇಲೆ ಕನೇರ್ ಹೂವುಗಳನ್ನು ಅರ್ಪಿಸುವ ಮೂಲಕ, ಉತ್ತಮ ಬಟ್ಟೆಯನ್ನು ಪಡೆಯುವ ಬಯಕೆ ನೆರವೇರುತ್ತದೆ. 


ಇದನ್ನೂ ಓದಿ : Shani Dev: ಶನಿದೇವನ ವಿಗ್ರಹವನ್ನು ಮನೆಯಲ್ಲಿ ಏಕೆ ಇಡಬಾರದು?


ಗರಿಕೆ ಮತ್ತು ಪಾರಿಜಾತ : 
ಮಹಾಶಿವರಾತ್ರಿಯ ದಿನದಂದು (Mahashivaratri 2022), ಶಿವಲಿಂಗದ ಮೇಲೆ ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ಸಂಪತ್ತು ಮತ್ತು ವೈಭವವನ್ನು ಹೆಚ್ಚಿಸುತ್ತದೆ. ಆದರೆ ಭೋಲಾನಾಥನಿಗೆ ಗರಿಕೆ ಅರ್ಪಿಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. 


ಕಮಲ, ಶಂಖ ಪುಷ್ಪಾ  ಮತ್ತು ಬಿಲ್ವಪತ್ರೆ :
ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಕಮಲ, ಶಂಖಪುಷ್ಪ ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಹಣಕಾಸಿನ ತೊಂದರೆ ನಿವಾರಣೆ ಯಾಗುತ್ತದೆ.  ಒಂದು ಲಕ್ಷ ಹೂವುಗಳನ್ನು  ಶಿವನಿಗೆ (Lord Shiva) ಅರ್ಪಿಸಿದರೆ ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ.  


ಮಲ್ಲಿಗೆ ಹೂವು :
ಮಲ್ಲಿಗೆ ಹೂಗಳಿಂದ ಶಿವನನ್ನು ಪೂಜಿಸುವುದರಿಂದ ವಾಹನ  ಯೋಗ ಪ್ರಾಪ್ತಿಯಾಗುತ್ತದೆ. ಅಲ್ಲದೆ ಪರಿಮಳಯುಕ್ತ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ, ಕಂಕಣ ಭಾಗ್ಯ ಕೂಡಿ ಬರುತ್ತದೆ. 


ಇದನ್ನೂ ಓದಿ : ನಾಳೆ ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಂಗಾರಕ ಯೋಗ, ಜೀವನದ ಮೇಲೆ ಬೀರಲಿದೆ ಭಾರೀ ಪ್ರಭಾವ


ಶಮಿ ಮತ್ತು ಅಗಸೆ ಹೂವು : 
ಅಗಸೆ ಹೂವುಗಳಿಂದ ಶಿವನನ್ನು ಪೂಜಿಸುವವರಿಗೆ ವಿಷ್ಣುವಿನ (Lord Vishnu)ಅನುಗ್ರಹವೂ ದೊರೆಯುತ್ತದೆ. ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಶಮೀಪತ್ರವನ್ನು ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. 


ಎಕ್ಕ ಮತ್ತು ದತುರಾ ಹೂವು : 
ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಧಾತುರ ಮತ್ತು ಅದರ ಹೂವುಗಳನ್ನು ಅರ್ಪಿಸುವುದರಿಂದ ವಿಷಕಾರಿ ಜೀವಿಗಳ ಅಪಾಯ ನಾಶವಾಗುತ್ತದೆ. ಮತ್ತೊಂದೆಡೆ, ಶಿವಲಿಂಗದ ಮೇಲೆ ಎಕ್ಕದ ಹೂವುಗಳನ್ನು ಅರ್ಪಿಸುವುದರಿಂದ ಕಣ್ಣಿನ ರೋಗಗಳು ದೂರವಾಗುತ್ತವೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ