ಇಂದು ಸಂಜೆಯವರೆಗೆ ಶಿವಲಿಂಗದ ಮೇಲೆ ಈ ಎಲೆಗಳನ್ನು ಅರ್ಪಿಸಿದರೆ ಆಗಲಿದೆ ಭಾರೀ ಧನ ಲಾಭ
ಈಶ್ವರನನ್ನು ಮೆಚ್ಚಿಸಲು ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಈ ವಸ್ತುಗಳು ಶಿವನಿಗೆ ಬಹಳ ಪ್ರಿಯವಾದವು.
ನವದೆಹಲಿ : ಶಿವನ ಆಶೀರ್ವಾದ ಪಡೆಯಲು, ಮಹಾಶಿವರಾತ್ರಿಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ (Mahashivaratri). ಮಹಾಶಿವರಾತ್ರಿಯ ಶಿವಪೂಜೆಯನ್ನು ಚತುರ್ದಶಿ ತಿಥಿಯಂದು ನೆರವೇರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಚತುರ್ದಶಿ ಇಂದು ರಾತ್ರಿ 1 ಗಂಟೆಯವರೆಗೆ ಇರುತ್ತದೆ. ಈಶ್ವರನನ್ನು ಮೆಚ್ಚಿಸಲು ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ (Mahashivaratri pooja). ಈ ವಸ್ತುಗಳು ಶಿವನಿಗೆ ಬಹಳ ಪ್ರಿಯವಾದವು. ಅವುಗಳನ್ನು ಅರ್ಪಿಸುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ. ಇದಲ್ಲದೆ, ಕೆಲವು ಮರದ ಎಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ (Shivaratri offerings). ಈ ಎಲೆಗಳನ್ನು ಅರ್ಪಿಸುವುದರಿಂದ ಶಿವನು ಪ್ರಸನ್ನನಾಗುತ್ತಾನೆ.
ಬಿಲ್ವಪತ್ರೆ :
ಮಹಾಶಿವರಾತ್ರಿಯಂದು ಶಿವಲಿಂಗದ (Shivalinga) ಮೇಲೆ ಬಿಲ್ವಪತ್ರೆಯನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಎಲೆಗಳನ್ನು ಅರ್ಪಿಸುವುದರಿಂದ ಮನಸ್ಸಿನಲ್ಲಿ ಬರುವ ಕೆಟ್ಟ ಯೋಚನೆಗಳು ದೂರವಾಗುತ್ತವೆ ಎನ್ನಲಾಗಿದೆ.
ಇದನ್ನೂ ಓದಿ : Navagrah Dosh: ಇಂದು ರಾತ್ರಿ ಈ ವಿಶೇಷ ಕ್ರಮ ತೆಗೆದುಕೊಳ್ಳುವುದರಿಂದ ಜಾತಕದ ಅಶುಭ ಗ್ರಹಗಳು ಶುಭ ಫಲಿತಾಂಶ ನೀಡುತ್ತೆ
ಶಮಿ :
ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುವ ಮೂಲಕ, ಶಿವನು ತುಂಬಾ ಸಂತೋಷಪಡುತ್ತಾನೆ. ಹೀಗೆ ಮಾಡುವುದರಿಂದ ಭೋಲೆನಾಥನ ಜೊತೆಗೆ ಶನಿದೇವನ (Shanideva) ಆಶೀರ್ವಾದವೂ ದೊರೆಯುತ್ತದೆ.
ಗರಿಕೆ :
ಧಾರ್ಮಿಕ ಗ್ರಂಥಗಳಲ್ಲಿ ಗರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲಿ ಅಮೃತವು ನೆಲೆಸಿದೆ ಎಂದು ನಂಬಲಾಗಿದೆ. ಗರಿಕೆ ಶಿವ ಮತ್ತು ಗಣೇಶನಿಗೆ (Lord Ganesha)ಬಹಳ ಪ್ರಿಯವಾದುದು. ಶಿವಲಿಂಗದ ಮೇಲೆ ಗರಿಕೆಯನ್ನು ಅರ್ಪಿಸುವುದರಿಂದ ಅಕಾಲಿಕ ಮರಣದ ಅಪಾಯವನ್ನು ತಪ್ಪಿಸಬಹುದು.
ಮಾವಿನ ಎಲೆಗಳು :
ಭಗವಾನ್ ಶಿವನಿಗೆ (Lord Shiva) ಮಾವಿನ ಎಲೆಗಳನ್ನು ಅರ್ಪಿಸಿದರೆ ಭಕ್ತರ ದುರದೃಷ್ಟ ದೂರವಾಗುತ್ತದೆ ಎನ್ನಲಾಗಿದೆ. ಮಾತ್ರವಲ್ಲ, ಆರ್ಥಿಕ ಸಮಸ್ಯೆಗಳಿಂದ ಕೂಡಾ ಮುಕ್ತರಾಗುತ್ತಾರೆ. ಜೀವನದಲ್ಲಿ ಅದೃಷ್ಟ ಒದಗಿ ಬರುತ್ತದೆ.
ಇದನ್ನೂ ಓದಿ : ಸ್ಟಡಿ ರೂಂ ಹೀಗಿದ್ದರೆ ಪ್ರತಿ ಪರೀಕ್ಷೆ, ಇಂಟರ್ ವ್ಯೂ ನಲ್ಲಿ ಸಿಗಲಿದೆ ಯಶಸ್ಸು
ಅಶ್ವತದ ಎಲೆಗಳು :
ಧರ್ಮಗ್ರಂಥಗಳ ಪ್ರಕಾರ, ಅಶ್ವತದ ಎಲೆಯಲ್ಲಿ ತ್ರಿದೇವ ನೆಲೆಸಿರುತ್ತಾನೆ ಎಂದು ಹೇಳಲಾಗಿದೆ. ಅಶ್ವತದ ಎಲೆಯಲ್ಲಿ ಈಶ್ವರ ನೆಲೆಸಿರುತ್ತಾನೆ. ಶಿವನಿಗೆ ಅರಶಿನವನ್ನು ಅರ್ಪಿಸುವುದರಿಂದ ಗ್ರಹದೋಷಗಳು ನಿವಾರಣೆಯಾಗುತ್ತದೆ. ಇದರೊಂದಿಗೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.