ಬೆಂಗಳೂರು : ಕಪ್ಪು, ದಪ್ಪ ಮತ್ತು ಉದ್ದ ಕೂದಲು  ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಇಂದಿನ ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲು ಉದುರುವುದು ಮತ್ತು ಹಾನಿಯಾಗುವುದು ಸಾಮಾನ್ಯವಾಗಿದೆ. ಇದರಿಂದ ಇಂದಿನ ಕಾಲಘಟ್ಟದಲ್ಲಿ ಬೋಳು ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು, ದುಬಾರಿ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ಆಶ್ರಯಿಸಬೇಕಾಗುತ್ತದೆ. ಆದರೆ  ಅದು ಪರಿಣಾಮಕಾರಿ ಎಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ಮನೆಯಲ್ಲಿಯೇ ಕೂದಲು ಉದುರುವುದನ್ನು ತಡೆಯುವ ಎಣ್ಣೆಯನ್ನು ತಯಾರಿಸಬಹುದು. ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂದರೆ ತಪ್ಪಲ್ಲ. 


COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆ ತಡೆಗೆ ಮನೆಯಲ್ಲಿಯೇ ಎಣ್ಣೆಯನ್ನು ತಯಾರಿಸುವುದು ಹೇಗೆ? : 
ಕೂದಲು ಉದುರುವುದನ್ನು ತಡೆಯುವ ಎಣ್ಣೆಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು
ಒಂದು ಈರುಳ್ಳಿಯ ರಸ
ಅಲೋವೆರಾ ಜೆಲ್ ಒಂದು ಚಮಚ 
ಸಾಸಿವೆ ಎಣ್ಣೆ


ಇದನ್ನೂ ಓದಿ : ಯಾವ ಅಡ್ಡ ಪರಿಣಾಮವೂ ಇಲ್ಲದೆ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತವೆ ಈ ಮೂರು ವಸ್ತುಗಳು !


ಕೂದಲು ಉದುರುವಿಕೆ ತಡೆಯಲು ಎಣ್ಣೆಯನ್ನು ಹೇಗೆ ತಯಾರಿಸುವುದು? 
1.ಕೂದಲು ಉದುರುವಿಕೆ ತಡೆಯಲು ಎಣ್ಣೆಯನ್ನು ತಯಾರಿಸಲು, ಮೊದಲು ಈರುಳ್ಳಿಯನ್ನು ತೆಗೆದುಕೊಳ್ಳಿ.
2. ನಂತರ ಅದನ್ನು ಚೆನ್ನಾಗಿ ತುರಿದು ಹಿಸುಕಿ ರಸವನ್ನು ತೆಗೆಯಿರಿ.
3. ಇದರ ನಂತರ, ಈ ರಸಕ್ಕೆ ಒಂದು ಚಮಚ ಅಲೋವೆರಾ ಜೆಲ್ ಮತ್ತು ಸಾಸಿವೆ ಎಣ್ಣೆಯನ್ನು ಸೇರಿಸಿ.
4. ನಂತರ ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
5. ಈಗ ನಿಮ್ಮ ಕೂದಲು ಉದುರುವಿಕೆ ತಡೆಗೆ ಎಣ್ಣೆ ರೆಡಿಯಾಗುತ್ತದೆ. ಸಿದ್ಧವಾಗಿದೆ.


ಕೂದಲು ಉದುರುವಿಕೆ ತಡೆಯಲು ಈ ಎಣ್ಣೆಯನ್ನು ಬಳಸುವುದು ಹೇಗೆ?  : 
1.ಈ  ಎಣ್ಣೆಯನ್ನು ನಿಮ್ಮ ಕೂದಲಿನ ಬೇರು ಮತ್ತು ಕೂದಲಿಗೆ ಚೆನ್ನಾಗಿ  ಹಚ್ಚಿ. 
 2.ಹೀಗೆ ಹಚ್ಚಿದ ನಂತರ ಕನಿಷ್ಟ 5 ನಿಮಿಷಗಳ ಕಾಲ ಕೈಗಳಿಂದ ಕೂದಲನ್ನು ಮಸಾಜ್ ಮಾಡಿ. 
3.ಇದರ ನಂತರ, ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. 
4.ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ. 
5.ಈ ರೆಸಿಪಿಯನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಿದರೆ ಕೂದಲಿನ ಆರೋಗ್ಯ ಸುಧಾರಿಸುತ್ತದೆ.
6.ಇದು ನಿಮ್ಮ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. . 
7. ಇದರೊಂದಿಗೆ ಡ್ಯಾಂಡ್ರಫ್ ಸಮಸ್ಯೆಯನ್ನೂ ದೂರ ಮಾಡುತ್ತದೆ. 


ಇದನ್ನೂ ಓದಿ : Lifestyle Tips: ಇಂದಿನಿಂದಲೇ ಈ ಪಾನೀಯಗಳ ಸೇವನೆ ಆರಂಭಿಸಿ ಮಧುಮೇಹ ನಿಯಂತ್ರಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.