ವಾರಕ್ಕೊಮ್ಮೆ ಹಾಲಿನ ಕೆನೆ ಮತ್ತು ಈ ವಸ್ತುವನ್ನು ಮುಖಕ್ಕೆ ಹಚ್ಚಿದರೆ ಪಾರ್ಲರ್ ಅಗತ್ಯವೇ ಇಲ್ಲ !
ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿದರೆ, ತ್ವಚೆಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಬೆಂಗಳೂರು : ಅನೇಕ ಜನರು ಹಾಲಿನೊಂದಿಗೆ ಹಾಲಿನ ಕೆನೆ ಕೂಡಾ ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಕೆಲವರಿಗೆ ಕೆನೆ ಇಷ್ಟವಾಗುವುದಿಲ್ಲ. ಕೆನೆ ಇಷ್ಟವಾಗುವುದಿಲ್ಲ ಎಂದು ಎಸೆಯುವ ಬದಲು ಹಾಲಿನ ಕೆನೆಯನ್ನು ಚರ್ಮದ ಆರೈಕೆಗಾಗಿ ಬಳಸಬಹುದು. ಕೆನೆ ಸಹಾಯದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಕೆನೆ ಹಚ್ಚುವುದರಿಂದ ಮುಖದಲ್ಲಿರುವ ಕೊಳೆ ಸಂಪೂರ್ಣವಾಗಿ ನಿವಾರಣೆಯಾಗಿ ಮುಖದ ಚರ್ಮ ಕಾಂತಿಯುತವಾಗಿ ಮೃದುವಾಗುತ್ತದೆ. ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿದರೆ, ತ್ವಚೆಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಹಾಲಿಯನ್ ಕೆನೆಯಿಂದ 3 ಬಗೆಯ ಫೇಸ್ ಪ್ಯಾಕ್ ಗಳನ್ನು ತಯಾರಿಸಬಹುದು :
1. ಹಾಲಿನ ಕೆನೆ ಮತ್ತು ಜೇನುತುಪ್ಪ :
ಕೆನೆ ಮತ್ತು ಜೇನುತುಪ್ಪದ ಸಂಯೋಜನೆಯು ಮುಖದ ಚರ್ಮಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಮುಖವನ್ನು ಆಳವಾಗಿ ತೇವಗೊಳಿಸುತ್ತದೆ ಮತ್ತು ಅದ್ಭುತವಾದ ಹೊಳಪನ್ನು ನೀಡುತ್ತದೆ. ಈ ಫೇಸ್ ಪ್ಯಾಕ್ ತಯಾರಿಸಲು ಕೆನೆ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟ ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಇದನ್ನೂ ಓದಿ : ಕೂದಲುದುರುವಿಕೆ, ಬಿಳಿ ಕೂದಲನ್ನು ಕಪ್ಪಾಗಿಸಲು ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ
2. ಹಾಲಿನ ಕೆನೆ ಮತ್ತು ಅರಿಶಿನ :
ಕೆನೆಯೊಂದಿಗೆ ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಒಣ ತ್ವಚೆಯೂ ಬೆಣ್ಣೆಯಂತೆ ಮೃದುವಾಗುತ್ತದೆ. ಇದಕ್ಕಾಗಿ, ಒಂದು ಚಮಚ ಕೆನೆಗೆ 2 ಚಿಟಿಕೆ ಅರಿಶಿನ ಪುಡಿ ಮತ್ತು ರೋಸ್ ವಾಟರ್ ಹನಿಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ. ಹೀಗೆ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ತೊಳೆಯಿರಿ.
3. ಹಾಲಿನ ಕೆನೆ ಮತ್ತು ಕಡಲೆ ಹಿಟ್ಟು :
ಮುಖಕ್ಕೆ ಕೆನೆ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಅನ್ನು ಹಚ್ಚಿದರೆ ಮುಖವು ಸರಿಯಾಗಿ ಟೋನ್ ಮತ್ತು ಎಕ್ಸ್ಫೋಲಿಯೇಟ್ ಆಗುತ್ತದೆ. ಅದರ ಸಹಾಯದಿಂದ, ಮುಖದಿಂದ ಡೆಡ್ ಸೆಲ್ ಗಳನ್ನು ತೆಗೆದು ಹಾಕುವುದು ಸುಲಭವಾಗುವುದು. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗಿದ ನಂತರ ಶುದ್ಧ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ : Lucky Plants: ಮನೆಯಲ್ಲಿ ಧನಾತ್ಮಕ ಶಕ್ತಿಯೊಂದಿಗೆ ಹಣ ಆಕರ್ಷಿಸುವ ಸಸ್ಯಗಳಿವು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.