ಬೆಂಗಳೂರು : ಜೀವನದಲ್ಲಿ ಶ್ರೀಮಂತರಾಗಬೇಕು ಅನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಲಕ್ಷ್ಮೀ ದೇವಿಯ ಕೃಪೆ (blessings of Godess Lakshmi)ಎಲ್ಲರ ಮೇಲೆ ಇರುವುದಿಲ್ಲ. ಕೇವಲ ಕೆಲವು ವಿಶೇಷ ವ್ಯಕ್ತಿಗಳ ಮೇಲೇ ಮಾತ್ರ ಲಕ್ಷ್ಮೀ ಕೃಪೆ ಇರುತ್ತದೆ. ಜನರ ಸ್ವಂತ ಕಾರ್ಯಗಳು, ಅಭ್ಯಾಸಗಳು ಮತ್ತು ಕೆಲವು ಸನ್ನಿವೇಶಗಳು ಇದಕ್ಕೆ ಕಾರಣವಾಗಿರುತ್ತವೆ.  ಚಾಣಕ್ಯ ನೀತಿಯಲ್ಲಿ (Chanakya Niti) ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುವ ಅಭ್ಯಾಸಗಳು ಮತ್ತು ವಿಷಯಗಳನ್ನು ಹೇಳಲಾಗಿದೆ. ಈ ಗುಣಗಳನ್ನು ಅಳವಡಿಸಿಕೊಂಡರೆ, ವ್ಯಕ್ತಿ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ಮಾತ್ರವಲ್ಲ ಅವನ ಮೇಲೆ ಯಾವಾಗಲೂ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. 


COMMERCIAL BREAK
SCROLL TO CONTINUE READING

ಈ 2 ಗುಣಗಳಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ : 
ಯಶಸ್ಸನ್ನು ಸಾಧಿಸಲು ಮತ್ತು ಶ್ರೀಮಂತರಾಗಲು, ಕಠಿಣ ಪರಿಶ್ರಮ, ಸಾಮರ್ಥ್ಯ ಮತ್ತು ಅದೃಷ್ಟವನ್ನು ಹೊಂದಿರುವುದು ಅವಶ್ಯಕ. ಆದರೆ ಇವೆಲ್ಲವುಗಳ ಹೊರತಾಗಿ, ಯಶಸ್ಸು ಸಾಧಿಸಲು ನೆರವಾಗುವ ಇನ್ನೂ ಎರಡು ಗುಣಗಳಿವೆ (Chanakya Niti For Money). ಅದು ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಯಶಸ್ಸು ಸಾಧಿಸಿ ಸಮೃದ್ಧಿ ಹೊಂದಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿ ಈ ಎರಡು ಗುಣಗಳನ್ನು ಹೊಂದಿಲ್ಲ ಎಂದಾದರೆ  ಮೇಲಿಂದ ಕೆಳಗೆ ಬೀಳಲು ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ. ಚಾಣಕ್ಯ ನೀತಿಯಲ್ಲಿ  (Chanakya Niti) ಆ ಎರಡು ವಿಶೇಷ ಗುಣಗಳ ಬಗ್ಗೆ ಉಲ್ಲೇಖಿಸಲಾಗಿದೆ.   


ಇದನ್ನೂ ಓದಿ : ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಈ ನಾಲ್ಕು ರಾಶಿಯವರು


ನಮ್ರತೆ: ಒಬ್ಬ ವ್ಯಕ್ತಿಯು ನಮ್ರತೆಯನ್ನು ಹೊಂದಿಲ್ಲದಿದ್ದರೆ, ಅವನು ಯಶಸ್ಸು ಪಡೆಯುವುದು ಸಾಧ್ಯವೇ ಇಲ್ಲ.  ವ್ಯಕ್ತಿಯು ಅಹಂಕಾರ ಭಾವವನ್ನು ಹೊಂದಿದ್ದರೆ, ಲಕ್ಷ್ಮೀ ದೇವಿಯು (Godess Lakshmi) ಅವನತ್ತ ಸುಳಿಯುವುದೇ ಇಲ್ಲ. ಅಂತಹ ವ್ಯಕ್ತಿಯನ್ನು ಜನರು ಕೂಡಾ ಇಷ್ಟಪಡುವುದಿಲ್ಲ. ಆದ್ದರಿಂದಲೇ ಹುದ್ದೆ, ಹಣ, ಪ್ರತಿಷ್ಠೆ, ಗೌರವ ಪಡೆಯಲು ವಿನಯವಂತಿಕೆ ಬಹಳ ಮುಖ್ಯ. 


ಸಿಹಿ ಮಾತು: ಸಿಹಿ ಮಾತನಾಡುವುದೇ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಬಿಡುತ್ತದೆ.  ಮಾತಿನಲ್ಲಿ ಮಾಧುರ್ಯವಿದ್ದರೆ, ಒಬ್ಬ ವ್ಯಕ್ತಿಯು ಶತ್ರುವನ್ನು ಕೂಡಾ ಮಿತ್ರನನ್ನಾಗಿ ಮಾಡಿಕೊಳ್ಳಬಹುದು (Chanakya Niti For Success) .ಕೈ ತಪ್ಪುತ್ತಿರುವ ಕೆಲಸವನ್ನು ಸುಲಭವಾಗಿ ನಿಭಾಯಿಸಿ ಬಿಡಬಹುದು.   ಅಲ್ಲದೆ, ಇದು ಎಲ್ಲರ ಹೃದಯವನ್ನು ಸುಲಭವಾಗಿ ಗೆಲ್ಲಲು ಸಹಾಯ ಮಾಡುತ್ತದೆ. ಯಶಸ್ವಿ ಮತ್ತು ಸಿರಿವಂತಿಕೆಯ ಜೀವನವನ್ನು ನಡೆಸಬೇಕಾದರೆ  ಮಾತಿನಲ್ಲಿ ಮಾಧುರ್ಯವನ್ನು ಅಳವಡಿಕೊಳ್ಳಬೇಕು.  


ಇದನ್ನೂ ಓದಿ : ಊಟದ ವೇಳೆ ಮಾಡುವ ಈ ತಪ್ಪು ಮೃತ್ಯುವಿಗೆ ಆಮಂತ್ರಣ ನೀಡಿದಂತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.