ಬೆಂಗಳೂರು : ಕೂದಲಿಗೆ ಸರಿಯಾಗಿ ಆರೈಕೆ ಮಾಡದಿದ್ದರೆ ಅಥವಾ ಕೂದಲಿಗೆ ಪೋಷಣೆ ಸಿಗದಿದ್ದರೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮನ್ನು ಕಾಡತೊಡಗುತ್ತವೆ. ಕೆಲವೊಮ್ಮೆ ಕೂದಲು ಹೆಚ್ಚು ಉದುರಲು ಪ್ರಾರಂಭಿಸುತ್ತದೆ. ಹೀಗಾದಾಗ ಕೂದಲು ತೆಳ್ಳಗಾಗುವ ಆತಂಕ ಎದುರಾಗುತ್ತದೆ. ಕೂದಲು ಹೊಳಪನ್ನು ಹೊಂದಿಲ್ಲದೆ, ಜಿಗುಟು ಜಿಗುಟಾಗಿದ್ದರೂ ಚೆನ್ನಾಗಿ ಕಾಣುವುದಿಲ್ಲ. ನಿಮಗೂ ಇದೇ ರೀತಿಯ ಸಮಸ್ಯೆಗಳಿದ್ದರೆ ಕೂದಲಿಗೆ ಈರುಳ್ಳಿ ರಸವನ್ನು  ಹಚ್ಚಬೇಕು. ಈರುಳ್ಳಿ ರಸವು ಕೂದಲಿಗೆ ಹಲವಾರು ಪ್ರಯೋಜನಗಳನ್ನು  ನೀಡುತ್ತದೆ. 


COMMERCIAL BREAK
SCROLL TO CONTINUE READING

ಕೂದಲ ಬೆಳವಣಿಗೆಗೆ ಈರುಳ್ಳಿ ರಸ  : 
ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು  ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ . ಹೆಚ್ಚಿನ ಸಲ್ಫರ್ ಅಂಶದಿಂದಾಗಿ, ಕೂದಲಿನ ಬೇರುಗಳನ್ನು ಇದು ಬಲಪಡಿಸುತ್ತದೆ. ಇದಲ್ಲದೆ ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಕೂದಲು ಕಿರಿ ವಯಸ್ಸಿನಲ್ಲಿ ಬಿಳಿಯಾಗುವುದನ್ನು ತಡೆಯುತ್ತದೆ. 


ಇದನ್ನೂ ಓದಿ : Weight Loss Tips: ಈ ಆಯುರ್ವೇದ ಮೂಲಿಕೆಯಿಂದ ಕೇವಲ 30 ದಿನಗಳಲ್ಲಿ ಮಾಯವಾಗುತ್ತೆ ಬೆಲ್ಲಿ ಫ್ಯಾಟ್


ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ:
ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಲು, ಒಂದರಿಂದ ಎರಡು ಈರುಳ್ಳಿ ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಅಥವಾ ಈರುಳ್ಳಿ ತುರಿದ ನಂತರ ಅದನ್ನು ಬಟ್ಟೆಯಲ್ಲಿ ಕಟ್ಟಿ, ಹಿಂಡಿ ರಸವನ್ನು ತೆಗೆಯಿರಿ. ಹೀಗೆ ತೆಗೆದು ಇರಿಸಿಕೊಂಡ ಈರುಳ್ಳಿ ರಸವನ್ನು ತಲೆ ಕೂದಲಿನ ಬುಡಕ್ಕೆ ಹಚ್ಚಿ. 


ಕೂದಲಿಗೆ ಈರುಳ್ಳಿ ರಸವನ್ನು ಅನ್ವಯಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ನೇರವಾಗಿ ಕೂದಲಿಗೆ ಹಚ್ಚುವುದು. ಕೂದಲು ತೊಳೆಯುವ ಅರ್ಧ ಗಂಟೆ ಮೊದಲು ಇದನ್ನು ಕೂದಲಿಗೆ ಹಚ್ಚಿ ನಂತರ ಕೂದಲನ್ನು ತೊಳೆಯಿರಿ. ಈರುಳ್ಳಿ ರಸವನ್ನು ಬೆರಳುಗಳಿಂದ ಆರಾಮವಾಗಿ ಕೂದಲಿಗೆ ಹಚ್ಚಬಹುದು.  


ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಬಹುದು. ಅದರಿಂದ ಈರುಳ್ಳಿ ಎಣ್ಣೆಯನ್ನು ತಯಾರಿಸಲಾಗುತ್ತದೆ. ಕೂದಲಿನ ಬೆಳವಣಿಗೆಗೆ ಈ ಎಣ್ಣೆಯು ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ ಈ ಎಲೆಯ ನೀರು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದು ಮಾತ್ರವಲ್ಲ ದಟ್ಟವಾಗಿ ಬೆಳೆಯುವುದು ಕೂಡಾ


ಈ ಎಣ್ಣೆಯನ್ನು ತಯಾರಿಸಲು ಸುಲಭವಾದ ಮಾರ್ಗವೆಂದರೆ : 
1.  ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.  
2. ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. 
3. ಈ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಹುರಿಯಿರಿ. 
4. ಈರುಳ್ಳಿ ಹುರಿದ ನಂತರ ಗ್ಯಾಸ್ ಆಫ್ ಮಾಡಿ. 
5. ಈಗ ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ
6. ಇಷ್ಟಾಯಿತು ಎಂದಾದ ಮೇಲೆ ಈರುಳ್ಳಿ ಎಣ್ಣೆ ಸಿದ್ಧವಾಯಿತು ಎಂದರ್ಥ. 
7. ಕೂದಲನ್ನು ತೊಳೆಯುವ ಅರ್ಧ ಗಂಟೆ ಮೊದಲು ಈ ಎಣ್ಣೆಯನ್ನು  ಹಚ್ಚಬಹುದು. 


ಕೂದಲು ಉದುರುವಿಕೆಗೆ ಪರಿಹಾರ :
1. ಈರುಳ್ಳಿ ರಸ ,  ನಿಂಬೆ ರಸ ಅಥವಾ ಪುದೀನಾ ಸೇರಿಸಿ ಮತ್ತು ನೆತ್ತಿಯ ಮೇಲೆ ಹಚ್ಚಿ. ಈ ಪ್ರಕ್ರಿಯೆಯನ್ನು ಇದು ನಿಖರವಾಗಿ 6 ​​ತಿಂಗಳವರೆಗೆ ಮುಂದುವರಿಸಬೇಕು. ಹೀಗೆ ಮಾಡಿದರೆ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. 


2. ತಲೆ ಕೂದಲಿಗೆ ಸ್ನಾನ ಮಾಡುವಾಗ ಕಡಲೆ ಹಿಟ್ಟನ್ನು ಬಳಸಿ. ಇದು ಕೂದಲಿನ ಸಮಸ್ಯೆಗಳನ್ನು  ನಿವಾರಿಸುತ್ತದೆ. 


ಇದನ್ನೂ ಓದಿ : ತ್ವಚೆಯ ಅಂದಕ್ಕೆ ಮನೆಮದ್ದು - ಇಲ್ಲಿದೆ ಸಿಂಪಲ್‌ ಟಿಪ್ಸ್‌!!


3. ಚಿಕ್ಕ ಈರುಳ್ಳಿಯನ್ನು ಅರೆದು ತಲೆಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ