Orange For Healthy Skin:  ಕೆಲವು ಹಣ್ಣುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಕಿತ್ತಳೆ ಹಣ್ಣಿನ ಬಳಕೆಯಿಂದ ಚರ್ಮದ ಹಲವು ಸಮಸ್ಯೆಗಳಿಂದ ಸುಲಭ ಪರಿಹಾರವನ್ನು ಪಡೆಯಬಹುದು ಎನ್ನಲಾಗುತ್ತದೆ. ಆಯುರ್ವೇದದ ಪ್ರಕಾರ, ಕಿತ್ತಳೆ ಹಣ್ಣಿನ ರಸ, ಕಿತ್ತಳೆ ಹಣ್ಣಿನ ಸಿಪ್ಪೆ, ಕಿತ್ತಳೆಯ ಫೇಸ್ ಪ್ಯಾಕ್‌ಗಳ ಬಳಕೆಯಿಂದ ಮೊಡವೆ, ಚರ್ಮದ ಕಲೆ, ಡೆಡ್ ಸ್ಕಿನ್ ಸೇರಿದಂತೆ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

ಕಲೆ ರಹಿತ, ಸುಂದರ, ಕಾಂತಿಯುತ ತ್ವಚೆಗಾಗಿ ಕಿತ್ತಳೆ ಹಣ್ಣನ್ನು ಈ ರೀತಿ ಬಳಸಿ: 
ಕಿತ್ತಳೆ ಸಿಪ್ಪೆ, ಮೊಸರಿನ ಫೇಸ್ ಪ್ಯಾಕ್: 

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿಟ್ಟು ಅದನ್ನು ಚೆನ್ನಾಗಿ ಪುಡಿ ಮಾಡಿ ಇದರಲ್ಲಿ ಮೊಸರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ಸ್ವಲ್ಪ ಬೆಚ್ಚಗಿನ ನೀರು ಬೆರೆಸಿ ಫೇಸ್ ವಾಶ್ ಮಾಡಿ. ಇದು ಡೆಡ್ ಸ್ಕಿನ್ (Dead Skin), ಪಿಗ್ಮೆಂಟೇಶನ್ ಸಮಸ್ಯೆಯಿಂದ ಸುಲಭ ಪರಿಹಾರ ನೀಡುತ್ತದೆ. 


ಕಿತ್ತಳೆ ಸಿಪ್ಪೆಯೊಂದಿಗೆ ನಿಂಬೆ ರಸ: 
ಒಣಗಿಸಿ ಪುಡಿ ಮಾಡಿದ ಕಿತ್ತಳೆ ಸಿಪ್ಪೆಯಲ್ಲಿ(Orange Peel) ಒಂದು ಸ್ಪೂನ್ ನಿಂಬೆ ರಸ, ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ತ್ವಚೆ ಮೃದುವಾಗುತ್ತದೆ. 


ಇದನ್ನೂ ಓದಿ-ಸೌತೆಕಾಯಿಯನ್ನು ಈ ರೀತಿ ಸೇವಿಸಿ, ಕೇವಲ ಒಂದು ತಿಂಗಳಲ್ಲಿ ತೂಕ ಇಳಿಸಿ


ಕಿತ್ತಳೆ ಜ್ಯೂಸ್, ಹಾಲು: 
ಕಿತ್ತಳೆ ರಸದೊಂದಿಗೆ ಹಸಿ ಹಾಲನ್ನು ಬೆರೆಸಿ ಇದನ್ನು ಮುಖಕ್ಕೆ ಲೇಪಿಸುವುದರಿಂದ ಇದು ತ್ವಚೆಗೆ ಉತ್ತಮ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮುಖದಲ್ಲಿ ಡೆಡ್ ಸ್ಕಿನ್ ಸಮಸ್ಯೆಯನ್ನು ನಿವಾರಿಸುವುದಲ್ಲದೆ, ಬ್ಲಾಕ್ ಹೆಡ್, ವೈಟ್ ಹೆಡ್ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ. 


ಕಿತ್ತಳೆ ಸಿಪ್ಪೆಯೊಂದಿಗೆ ಶ್ರೀಗಂಧದ ಪುಡಿ: 
ಒಣಗಿಸಿ ಪುಡಿ ಮಾಡಿದ ಕಿತ್ತಳೆ ಸಿಪ್ಪೆಯಲ್ಲಿ ಒಂದೆರಡು ಸ್ಪೂನ್ ಶ್ರೀಗಂಧದ ಪುಡಿಯನ್ನು ಹಾಕಿ ಇದರಲ್ಲಿ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಅನ್ವಯಿಸಿ. ಅರ್ಧ ಗಂಟೆ ಬಳಿಕ ಫೇಸ್ ವಾಶ್ ಮಾಡುವುದರಿಂದ ಮುಖದಲ್ಲಿ ಮೂಡಿರುವ ಕಲೆಗಳು ನಿವಾರಣೆ ಆಗಿ, ಮುಖದ ಕಾಂತಿ ಹೆಚ್ಚುತ್ತದೆ. 


ಇದನ್ನೂ ಓದಿ- ಈ ಎಣ್ಣೆ ಹೀಗೆ ಹಚ್ಚಿ ಸಾಕು.. ಬೋಳು ತಲೆಯಲ್ಲೂ ಹೊಸ ಕೂದಲು ಬೆಳೆದು ಉದ್ದ ದಪ್ಪ ಕಪ್ಪು ಕೇಶರಾಶಿ ನಿಮ್ಮದಾಗುವುದು!


ಕಿತ್ತಳೆ ಫೇಸ್ ಪ್ಯಾಕ್: 
ಕಿತ್ತಳೆಯ ಒಳಭಾಗವನ್ನು/ತಿರುಳನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 5 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಚರ್ಮ ಬಿಗಿಯಾಗುವುದರ ಜೊತೆಗೆ ಕಾಂತಿಯುತ ತ್ವಚೆಯೂ ನಿಮ್ಮದಾಗುತ್ತದೆ. 


 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.