Palmistry: ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಸ್ವಭಾವ ಕೂಡ ಹೇಳುತ್ತದೆ
Palmistry: ಹಸ್ತದ ಗಾತ್ರದಿಂದ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ಹೇಳುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?.
Palmistry: ಕೇವಲ ಅಂಗೈಯಲ್ಲಿನ ರೇಖೆಗಳು ಮತ್ತು ಅವುಗಳು ನಿರ್ಮಿಸಿರುವ ಆಕಾರಗಳು ಮಾತ್ರ ವ್ಯಕ್ತಿಯ ಭವಿಷ್ಯ ಮತ್ತು ನಡವಳಿಕೆ ಬಗ್ಗೆ ಹೇಳುವುದಿಲ್ಲ. ಬದಲಾಗಿ, ಕೈಯ ಆಕಾರ, ಅಂಗೈಯ ಉದ್ದ ಮತ್ತು ಅಗಲ ಕೂಡ ಬಹಳಷ್ಟು ಸಂಗತಿಗಳನ್ನು ಹೇಳುತ್ತವೆ. ಹಸ್ತ ರೇಖಾ ಶಾಸ್ತ್ರದ ಹೊರತಾಗಿ, ಇದನ್ನು ವೇದ-ಜ್ಯೋತಿಷ್ಯದಲ್ಲಿ ಕೂಡ ಉಲ್ಲೇಖಿಸಲಾಗಿದೆ. ಅಂಗೈ ವಿನ್ಯಾಸವು ವ್ಯಕ್ತಿತ್ವದ ಹಲವು ರಹಸ್ಯಗಳನ್ನು ಹೇಗೆ ಬಹಿರಂಗಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನಿಮ್ಮ ಅಂಗೈಯ ಆಕಾರದಿಂದ ನಿಮ್ಮ ಪರ್ಸನ್ಯಾಲಿಟಿ ರಹಸ್ಯ ತಿಳಿದುಕೊಳ್ಳಿ
ಪೃಥ್ವಿ - ಅಂಗೈ ಚೌಕಾಕಾರದಲ್ಲಿದ್ದರೆ ಅದನ್ನು ಪೃಥ್ವಿ ಎಂದು ಕರೆಯಲಾಗುತ್ತದೆ. ಈ ಜಾತಕದ ವ್ಯಕ್ತಿಗಳು ಬಲಿಷ್ಠ ವ್ಯಕ್ತಿತ್ವ ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳಿರುತ್ತವೆ. ಈ ಜನರು ತಮ್ಮ ಮೆದುಳು ಚಲಾಯಿಸುವುದರ ಜೊತೆಗೆ ಶಾರೀರಿಕ ಕಷ್ಟಪಡುವುದರಲ್ಲಿಯೂ ಕೂಡ ಉತ್ತಮರಾಗಿರುತ್ತಾರೆ.
ಜಲ -ಆಯತಾಕಾರದ ಅಂಗೈ ಮತ್ತು ಉದ್ದನೆಯ ಬೆರಳುಗಳನ್ನು ಹೊಂದಿರುವ ವ್ಯಕ್ತಿಯ ಅಂಗೈ ಚಪ್ಪಟೆಯಾಗಿರುತ್ತದೆ, ಇದನ್ನು ಜಲ ಅಂಗೈ ಎಂದು ಕರೆಯಲಾಗುತ್ತದೆ. ಇಂತಹ ಜನರು ಸ್ವಭಾವದಲ್ಲಿ ಭಾವನಾತ್ಮಕ ಮತ್ತು ಸೂಕ್ಷ್ಮ ಜೀವಿಗಳು. ಇವರು ಭಾವನೆಗಳನ್ನು ನಿಭಾಯಿಸುವವರಾಗಿರುತ್ತಾರೆ.
ಇದನ್ನೂ ಓದಿ-Palmistry: ಅಂಗೈಯಲ್ಲಿ ಈ ರೇಖೆಗಳಿದ್ದರೇ ರಾಜನಂತೆ ಬದುಕುತ್ತಾರೆ!
ವಾಯು - ಅಂಗೈ ಚೌಕಾಕಾರದಲ್ಲಿದ್ದು, ಉದ್ದನೆಯ ಬೆರಳುಗಳಿದ್ದರೆ ಅದಕ್ಕೆ ವಾಯು ಅಂಗೈ ಎಂದು ಕರೆಯಲಾಗುತ್ತದೆ. ಈ ಜನರು ಬೇಗನೆ ಒತ್ತಡಕ್ಕೆ ಸಿಲುಕುತ್ತಾರೆ. ಆದರೆ, ಈ ಜನರ ಬೌದ್ಧಿಕ ಕ್ಷಮತೆ ತುಂಬಾ ಚೆನ್ನಾಗಿರುವುದರ ಜೊತೆಗೆ ಇವರು ಸಂವಹನದ ವಿಷಯದಲ್ಲಿ ತುಂಬಾ ಚತುರರಾಗಿರುತ್ತಾರೆ.
ಇದನ್ನೂ ಓದಿ-Palmistry : ಹಣ ಹೂಡಿಕೆ ಮಾಡುವವರೆ ನಿಮ್ಮ ಕೈಯಲ್ಲಿ ಈ ರೇಖೆ ಇದೆಯಾ ನೋಡಿಕೊಳ್ಳಿ!
ಅಗ್ನಿ - ಆಯತಾಕರದ ಅಂಗೈ ಹಾಗೂ ಅಸಮಾನ ಬೆರಳುಗಳಿರುವವರಲ್ಲಿ ಸಾಕಷ್ಟು ಉರ್ಜೆ ಇರುತ್ತದೆ. ಇವರಿಗೆ ಅಡ್ವೆಂಚರ್ ಅಂದರೆ ತುಂಬಾ ಇಷ್ಟ ಹಾಗೂ ಇವರು ತುಂಬಾ ವೃತ್ತಿಪರರಾಗಿರುತ್ತಾರೆ. ತಂಡವನ್ನು ಒಟ್ಟಿಗೆ ಕೊಂಡೊಯ್ಯುವ ಗುಣ ಇವರಲ್ಲಿ ಇರುತ್ತದೆ. ಇವರು ತುಂಬಾ ಬೇಗನೆ ಕಲಿತುಕೊಳ್ಳುತ್ತಾರೆ ಮತ್ತು ಉತ್ತಮ ಪರ್ಫಾರ್ಮೆನ್ಸ್ ನೀಡುತ್ತಾರೆ.
ಇದನ್ನೂ ನೋಡಿ -
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.