Palmistry: ಕೈಯಲ್ಲಿ ಪರ್ವತ ಯೋಗ ಇದ್ರೆ ಅಪಾರ ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ!
ಕೆಲವು ವಿಶೇಷ ಯೋಗಗಳು ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಗಳ ಕೈಯಲ್ಲಿ ರೂಪುಗೊಳ್ಳುತ್ತವೆ. ಪರ್ವತ ಯೋಗವು ಸಹ ಅಂತಹ ಮಂಗಳಕರ ಯೋಗವಾಗಿದೆ, ಇದು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಿ ಹೆಚ್ಚಿನ ಖ್ಯಾತಿ ತರುತ್ತದೆ.
ನವದೆಹಲಿ: ಜಾತಕದ ಶುಭ ಮತ್ತು ಅಶುಭ ಯೋಗಗಳಂತೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿಯೂ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗ ಬಗ್ಗೆ ಹೇಳಲಾಗಿದೆ. ವ್ಯಕ್ತಿಯ ಕೈಯಲ್ಲಿರುವ ರೇಖೆಗಳು, ಪರ್ವತಗಳು, ಚಿಹ್ನೆಗಳು, ಗುರುತುಗಳು, ಆಕಾರಗಳು ಸಹ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗವನ್ನು ಸೃಷ್ಟಿಸುತ್ತವೆ. ಇದು ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ.
ಕೆಲವರು ಕಷ್ಟಪಟ್ಟು ಕೆಲಸ ಮಾಡಿದ ನಂತರ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ಆದರೆ ಕೆಲವರು ಕಷ್ಟಪಟ್ಟು ಕೆಲಸ ಮಾಡಿದ ಬಳಿಕವೂ ಅದೃಷ್ಟ ಕೈಹಿಡಿಯುವುದಿಲ್ಲ. ಇಂದು ನಾವು ಒಂದು ಮಂಗಳಕರ ಹಸ್ತ ಯೋಗದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅದುವೇ ‘ಪರ್ವತ ಯೋಗ’. ಇದು ವ್ಯಕ್ತಿಯನ್ನು ಅತ್ಯಂತ ಅದೃಷ್ಟಶಾಲಿಯಾಗಿಸುತ್ತದೆ. ಆತನಿಗೆ ಅಪಾರ ಸುಖ-ಸಂಪತ್ತು ಮತ್ತು ಖ್ಯಾತಿಯನ್ನು ಸುಲಭವಾಗಿ ನೀಡುತ್ತದೆ.
ಇದನ್ನೂ ಓದಿ: 4 ದಿನಗಳ ನಂತರ, ರೂಪುಗೊಳ್ಳುವ 'ಭದ್ರ ರಾಜಯೋಗ'ದಿಂದ ಈ ರಾಶಿಯವರಿಗೆ ಭಾರೀ ಧನ ಲಾಭ
ಕೈಯಲ್ಲಿ ಪರ್ವತ ಯೋಗ
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಪರ್ವತ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಯೋಗವು ಕೆಲವೇ ಜನರ ಕೈಯಲ್ಲಿ ರೂಪುಗೊಳ್ಳುತ್ತದೆ. ವ್ಯಕ್ತಿಯ ಅಂಗೈಯಲ್ಲಿ ಅದೃಷ್ಟ ರೇಖೆಯು ಮಣಿಬಂಧದಿಂದ ಪ್ರಾರಂಭವಾಗಿ ಶನಿ ಪರ್ವತದವರೆಗೆ ಹೋದಾಗ ಮತ್ತು ಅದು ತಲುಪುವ ಸ್ಥಳದಲ್ಲಿ ಮೀನಿನ ಆಕಾರ ಅಥವಾ ಚಿಹ್ನೆಯು ರೂಪುಗೊಳ್ಳುತ್ತದೆ, ಅದನ್ನು ಪರ್ವತ ಯೋಗ ಎಂದು ಕರೆಯಲಾಗುತ್ತದೆ. ಇಲ್ಲಿ ಅದೃಷ್ಟದ ರೇಖೆಯು ಆಳ ಮತ್ತು ಸ್ಪಷ್ಟವಾಗಿರಬೇಕು ಎಂದು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೃಷ್ಟದ ರೇಖೆಯು ಅರ್ಧಂಭರ್ದವಿದ್ದರೆ ಅದು ಪೂರ್ಣ ಫಲಿತಾಂಶವನ್ನು ನೀಡುವುದಿಲ್ಲ.
ಅಪಾರ ಸಂಪತ್ತು ಮತ್ತು ಖ್ಯಾತಿ ತರುತ್ತದೆ
ಪರ್ವತ ಯೋಗವನ್ನು ಕೈಯಲ್ಲಿ ಹೊಂದಿರುವ ವ್ಯಕ್ತಿಯು ಅತ್ಯಂತ ಅದೃಷ್ಟಶಾಲಿ. ಇವರು ಅಲ್ಪಾವಧಿಯಲ್ಲಿಯೇ ಅಪಾರ ಸಂಪತ್ತಿನ ಒಡೆಯನಾಗುತ್ತಾರೆ, ಅಲ್ಲದೆ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ. ಪ್ರತಿಯೊಂದು ಕಡೆಯೂ ಯಶಸ್ಸು ಸಿಗುತ್ತದೆ. ಜ್ಞಾನ ಮತ್ತು ಬುದ್ಧಿವಂತಿಕೆಯಿಂದಾಗಿ ಅವರು ಸಾಕಷ್ಟು ಗೌರವ ಪಡೆಯುತ್ತಾರೆ.
ಇದನ್ನೂ ಓದಿ: Weekly Horoscope 28 Nov- 4 Dec 2022 ; ಹೇಗಿದೆ ಈ ವಾರ ನಿಮ್ಮ ರಾಶಿ ಭವಿಷ್ಯ, ಇಲ್ಲಿದೆ ನೋಡಿ
ಇಂತಹ ಜನರು ಸಾಮಾನ್ಯವಾಗಿ ಶಿಕ್ಷಣ ಜಗತ್ತಿನಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಈ ಜನರು ಉದಾರತೆಯ ಉತ್ತಮ ಪ್ರಜ್ಞೆಯನ್ನು ಹೊಂದಿರುತ್ತಾರೆ. ಇವರು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಇದಲ್ಲದೇ ಈ ಜನರು ಸರ್ಕಾರಿ ಕ್ಷೇತ್ರಕ್ಕೆ ಸೇರಿ ಹೆಸರು ಮತ್ತು ಹಣ ಸಂಪಾದಿಸುತ್ತಾರೆ. ಸಾಕಷ್ಟು ಸೌಕರ್ಯಗಳ ಜೊತೆಗೆ ಇವರು ಐಷಾರಾಮಿ ಜೀವನ ನಡೆಸುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.