ನವದೆಹಲಿ: ಶ್ರಮಜೀವಿಗಳಿಗೆ ಅದೃಷ್ಟದ ಬೆಂಬಲವೂ ಸಿಗುತ್ತದೆ. ಆದರೆ, ಹಲವು ಬಾರಿ ತುಂಬಾ ಕಷ್ಟಪಟ್ಟರೂ ಅದೃಷ್ಟಕ್ಕೆ ಪೂರ್ಣ ಬೆಂಬಲ ಸಿಗುವುದಿಲ್ಲ. ಸಮಯಕ್ಕಿಂತ ಮುಂಚಿತವಾಗಿ ಮತ್ತು ಅದೃಷ್ಟಕ್ಕಿಂತ ಹೆಚ್ಚಿನದನ್ನು ಯಾರೂ ಪಡೆಯುವುದಿಲ್ಲವೆಂದು ಹೇಳಲಾಗುತ್ತದೆ. ಇದೇ ರೀತಿ ಪ್ರೇಮ ಪ್ರಕರಣ(Love Life)ದಲ್ಲಿಯೂ ನಡೆಯುತ್ತದೆ. ವಾಸ್ತವವಾಗಿ ಹಸ್ತಸಾಮುದ್ರಿಕ ಶಾಸ್ತ್ರ(Palmistry)ದಲ್ಲಿ ಪ್ರೀತಿಯ ಸಂಬಂಧಗಳ ಬಗ್ಗೆ ವಿವರಿಸುವ ಕೆಲವು ಹಸ್ತದ ಸಾಲುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಸ್ತದ ರೇಖೆಗಳ ಬಗ್ಗೆ ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ಅಂಗೈನ ಶುಕ್ರ ಉಂಗುರದ ರೇಖೆ


  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ತೋರು ಬೆರಳಿನಿಂದ ಪ್ರಾರಂಭವಾದ ರೇಖೆಯು ಉಂಗುರದ ಬೆರಳು ಮತ್ತು ಶನಿ, ಸೂರ್ಯ ಪರ್ವತವನ್ನು ಸುತ್ತುವರೆದಿರುವ ಚಿಕ್ಕ ಬೆರಳಿನ ನಡುವೆ ಕೊನೆಗೊಂಡಾಗ ಅದನ್ನು ಉಂಗುರವೆಂದು ಕರೆಯಲಾಗುತ್ತದೆ. ಯಾರ ಅಂಗೈಯಲ್ಲಿ ಶುಕ್ರನ ಉಂಗುರಗಳ ಮೊತ್ತವು ರೂಪುಗೊಂಡಿದೆಯೋ ಅಂತವರು ಎಂದಿಗೂ ನಿಜವಾದ ಪ್ರೀತಿ(Love and Marriage Line)ಯನ್ನು ಪಡೆಯುವುದಿಲ್ಲವಂತೆ.


ಇದನ್ನೂ ಓದಿ: Vastu Tips : ವಾಸ್ತು ಪ್ರಕಾರ ಮನೆಯಲ್ಲಿ ಈ 3 ವಿಶೇಷ ಬದಲಾವಣೆ ಮಾಡಿ, ಅದೃಷ್ಟ ಕೂಡಿಬರುತ್ತದೆ!


  • ಯಾರ ಅಂಗೈಯಲ್ಲಿ ಶುಕ್ರ ಉಂಗುರದ ರೇಖೆಯು ತೆಳ್ಳಗಿರುತ್ತದೆಯೋ ಅಂತವರನ್ನು ಬುದ್ಧಿವಂತರು ಮತ್ತು ಧೈರ್ಯಶಾಲಿಗಳೆಂದು ಪರಿಗಣಿಸಲಾಗುತ್ತದೆ. ಆದರೆ, ಇಂತಹ ಜನರು ಪ್ರೀತಿಯ ವಿಷಯದಲ್ಲಿ ಸೋಲುತ್ತಾರಂತೆ. ಇದರ ಹೊರತಾಗಿ ಶುಕ್ರನು ಉಂಗುರದ ರೇಖೆಯಲ್ಲಿ ಮದುವೆಯ ರೇಖೆಯನ್ನು ಛೇದಿಸಿದರೆ ಆ ವ್ಯಕ್ತಿಯು ಮದುವೆಯಾಗುವುದಿಲ್ಲವಂತೆ.

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಇತರ ರೇಖೆಗಳ ಜೊತೆಗೆ ಸೇರಿಕೊಂಡು ಶುಕ್ರನ ಉಂಗುರದ ರೇಖೆಯು ತುಂಬಾ ಆಳವಾಗಿದ್ದರೆ, ಅಂತಹ ಜನರು ಜೀವನದಲ್ಲಿ ಅನೇಕ ಬಾರಿ ವಿವಾಹೇತರ ಸಂಬಂಧ(Love Marriage Line)ಗಳನ್ನು ಹೊಂದುತ್ತಾರೆಂದು ನಂಬಲಾಗಿದೆ.


ಇದನ್ನೂ ಓದಿ: Ugadi Horoscope: ಮುಂದಿನ ಇಡೀ ವರ್ಷ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ


  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಶುಕ್ರವು ಉಂಗುರ(Palm Reading)ದ ಸಾಲಿನಲ್ಲಿ ದ್ವೀಪದ ಗುರುತು ಮಾಡಿದರೆ, ವ್ಯಕ್ತಿಯ ಪಾಲುದಾರನು ಆತನ ವಿರುದ್ಧ ಪಿತೂರಿ ನಡೆಸುತ್ತಾನಂತೆ. ಈ ಕಾರಣದಿಂದಾಗಿಯೇ ಆ ವ್ಯಕ್ತಿಯ ಜೀವನವು ಅನೇಕ ತೊಂದರೆಗಳಿಗೆ ಸಿಲುಕುವುದಂತೆ. ಇದಲ್ಲದೆ ಸೂರ್ಯನ ರೇಖೆಯು ಶುಕ್ರನ ಉಂಗುರ ರೇಖೆಯನ್ನು ಕತ್ತರಿಸಿದರೆ, ಅಂತಹ ಜನರನ್ನು ಮೆದುಳುರಹಿತರು(ಮೆದುಳು ಇಲ್ಲದವರು) ಎಂದು ಪರಿಗಣಿಸಲಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.