ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ ಪ್ರತಿಯೊಬ್ಬ ಮನುಷ್ಯನ ಅಂಗೈಯಲ್ಲಿ ಜೀವನ ರೇಖೆ, ಹೃದಯ ರೇಖೆ ಮತ್ತು ಮಸ್ತಿಷ್ಕ ರೇಖೆಗಳಿರುತ್ತವೆ. ಇದಲ್ಲದೆ, ಅನೇಕ ಜನರ ಅಂಗೈಯಲ್ಲಿ ಹಣಕಾಸಿನ ರೇಖೆ ಕೂಡ ಇರುತ್ತದೆ. ಕೆಲವು ರೇಖೆಗಳು ಒಂದಾಗಿ ವಿಶೇಷ ಚಿಹ್ನೆಗಳು ಕೂಡ ರೂಪಗೊಳ್ಳುತ್ತವೆ. ಈ ಚಿಹ್ನೆಗಳು ಜೀವನದ ಆರ್ಥಿಕ ಸ್ಥಿತಿಯನ್ನು ತೋರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹಸ್ತದ ಯಾವ ರೇಖೆಗಳು ಮತ್ತು ಚಿಹ್ನೆಗಳು ಜೀವನದಲ್ಲಿ ಸಂಪತ್ತಿನ ಕುರಿತು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

COMMERCIAL BREAK
SCROLL TO CONTINUE READING

ಈ ರೇಖೆಗಳು ಮತ್ತು ಚಿಹ್ನೆಗಳು ಜೀವನದಲ್ಲಿ ಹಣದ ಸ್ಥಿತಿಯನ್ನು ತೋರಿಸುತ್ತವೆ
>> ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಶುಕ್ರ ಪರ್ವತವು ಭೌತಿಕ ಸಂತೋಷವನ್ನು ತೋರಿಸುತ್ತದೆ. ಸೂರ್ಯ ಪರ್ವತ ಗೌರವ ಮತ್ತು ಖ್ಯಾತಿಯ ಬಗ್ಗೆ ಹೇಳುತ್ತದೆ. ಆದರೆ ಗುರು ಪರ್ವತವು ನಾಯಕತ್ವದ ಸಾಮರ್ಥ್ಯವನ್ನು ತೋರಿಸುತ್ತದೆ. ವ್ಯಕ್ತಿಯ ಅಂಗೈಯಲ್ಲಿ ಈ ಮೂರು ಪರ್ವತಗಳ ಸ್ಥಾನವು ಉತ್ತಮವಾಗಿದ್ದರೆ, ಇಂತಹ ವ್ಯಕ್ತಿಯ ಸಿರಿವಂತಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

>> ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ ಮಸ್ತಿಷ್ಕ ರೇಖೆ, ಜೀವನ ರೇಖೆ ಮತ್ತು ಅದೃಷ್ಟ ರೇಖೆಗಳು ಒಟ್ಟಾಗಿ ಇಂಗ್ಲಿಷ್‌ನ 'M' ಚಿಹ್ನೆಯನ್ನು ರೂಪಿಸಿದರೆ, ವ್ಯಕ್ತಿಯು 35-55 ವರ್ಷಗಳ ನಡುವಿನ ಅವಧಿಯಲ್ಲಿ ಬಹಳಷ್ಟು ಹಣವನ್ನು ಸಂಪಾದಿಸುತ್ತಾನೆ. ಅಲ್ಲದೆ, ಇವರು ಮದುವೆಯ ನಂತರವೂ ಕೂಡ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಈ ಜನರು ಉದ್ಯೋಗ-ವ್ಯಾಪಾರದಲ್ಲಿಯೂ ಕೂಡ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ.

>> ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲವರ ಅಂಗೈಯಲ್ಲಿರುವ ಅದೃಷ್ಟದ ರೇಖೆಯು ಅವರ ಜೀವನದ ಸಂಪತ್ತಿನ ಸ್ಥಿತಿಯನ್ನು ತೋರಿಸುತ್ತದೆ. ಕಂಕಣದಿಂದ ಸರಳ ರೇಖೆಯು ಹೊರಬಂದು ಶನಿಗ್ರಹದ ಪರ್ವತವನ್ನು ತಲುಪಿದರೆ, ಇದ್ದಕ್ಕಿದ್ದಂತೆ ಧನಾಗಮನವಾಗುತ್ತದೆ. ಇಂತಹ ಜನರಿಗೆ ಕಠಿಣ ಪರಿಶ್ರಮದಿಂದ ಹೆಚ್ಚಿನ ಅದೃಷ್ಟ ಒಲಿದುಬರುತ್ತದೆ.

>> ಅಂಗೈಯಲ್ಲಿ ಜೀವನದ ರೇಖೆ, ಅದೃಷ್ಟ ರೇಖೆ ಮತ್ತು ಹೃದಯ ರೇಖೆ ಅಥವಾ ಅದೃಷ್ಟ ರೇಖೆ, ಹೃದಯ ರೇಖೆ ಮತ್ತು ಮಸ್ತಿಷ್ಕ ರೇಖೆಗಳು ಒಂದಾಗಿ ತ್ರಿಕೋನವು ರೂಪುಗೊಂಡರೆ, ವ್ಯಕ್ತಿಯು ಅನೇಕ ಮೂಲಗಳಿಂದ ಹಣವನ್ನು ಸಂಪಾದಿರುತ್ತಾನೆ.


ಇದನ್ನೂ ಓದಿ-ಅತ್ಯಂತ ಜಿಪುಣರಾಗಿರುತ್ತಾರೆ ಈ 4 ರಾಶಿಯ ಜನರು .! ಹಣ ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತಾರೆ

>> ಯಾರ ಅಂಗೈಯಲ್ಲಿ ಯಾವುದೇ ಒಂದು ರೇಖೆಯು, ಅದೃಷ್ಟದ ರೇಖೆಯಿಂದ ಹೊರಹೊಮ್ಮುತ್ತದೆ ಮತ್ತು ಸೂರ್ಯನ ಪರ್ವತಕ್ಕೆ ಹೋಗುತ್ತದೆ, ಅವರು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರಾಗಿರುತ್ತಾರೆ. ಅಷ್ಟೇ ಅಲ್ಲ ಈ ಜನರಿಗೆ ಸಮಾಜದಲ್ಲಿ ಸಾಮಾಜಿಕ ಪ್ರತಿಷ್ಠೆ ಕೂಡ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ-Ram Navami 2022: ರಾಮನವಮಿಯಂದು ಮಾಡಲಾಗುವ ಈ ಉಪಾಯಗಳಿಂದ ಮನೆ ಸುಖ-ಸಂಪತ್ತಿನಿಂದ ತುಂಬಿ ತುಳುಕಲಿದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.