ಹೆತ್ತವರು ಮಕ್ಕಳೆದುರು ಈ ನಾಲ್ಕು ಕೆಲಸಗಳನ್ನು ಮಾಡಬಾರದು .! ಮುಗ್ದ ಮನಸ್ಸಿಗಾಗುವುದು ಆಘಾತ
ಪೋಷಕರು ಮಾಡುವ ಸಣ್ಣದೊಂದು ತಪ್ಪು ಮಗುವಿನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಮಾಡುವ ಸಣ್ಣ ತಪ್ಪು ಕೂಡಾ ಮಗುವಿನ ಭವಿಷ್ಯವನ್ನು ಹಾಳು ಮಾಡಿ ಬಿಡಬಹುದು.
ಬೆಂಗಳೂರು : ಮಗುವಿನ ಮನಸ್ಸು ಬಿಳಿ ಕಾಗದದ ಹಾಗೆ. ಅದರಲ್ಲಿ ನಾವು ಏನು ಬರೆಯುತ್ತೆವೆಯೋ ಅದನ್ನೇ ಓದುತ್ತದೆ. ಮಕ್ಕಳ ಪಾಲನೆಯಲ್ಲಿ ಪೋಷಕರು ಮಾಡುವ ಸಣ್ಣದೊಂದು ತಪ್ಪು ಮಗುವಿನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಮಾಡುವ ಸಣ್ಣ ತಪ್ಪು ಕೂಡಾ ಮಗುವಿನ ಭವಿಷ್ಯವನ್ನು ಹಾಳು ಮಾಡಿ ಬಿಡಬಹುದು. ಸಾಮಾನ್ಯವಾಗಿ ಪೋಷಕರು ತಿಳಿದೋ ತಿಳಿಯದೆಯೋ ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಮಗುವಿನ ಮುಂದೆ ಹೆತ್ತವರು ಮಾಡಬಾರದ ಕೆಲಸಗಳು ಯಾವುದು ನೋಡೋಣ .
ಮಕ್ಕಳ ಮುಂದೆ ಜಗಳ :
ಕೆಲವು ಪೋಷಕರು ತಮ್ಮ ಮಕ್ಕಳ ಮುಂದೆಯೇ ಜಗಳವಾಡಲು ಪ್ರಾರಂಭಿಸುತ್ತಾರೆ. ಮಕ್ಕಳ ಮುಂದೆ ಜಗಳವಾಡುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಸಂಬಂಧದಲ್ಲಿ ಮಕ್ಕಳಿಗೆ ವಿಶ್ವಾಸ ಮೂಡದೇ ಇರಬಹುದು.
ಇದನ್ನೂ ಓದಿ : Cholesterol ಹೆಚ್ಚಾಗುವುದು ಎಚ್ಚರಿಕೆಯ ಕರೆಗಂಟೆ, ಈ 6 ಸಂಗತಿಗಳ ಬಗ್ಗೆ ಎಚ್ಚರಿಕೆವಹಿಸಿ
ಮಕ್ಕಳ ಮೇಲೆ ಕೈ ಮಾಡುವುದು :
ಕೆಲವೊಮ್ಮೆ ಪೋಷಕರು ಮಕ್ಕಳ ಮೇಲೆ ಕೈ ಮಾಡಿ ಬಿಡುತ್ತಾರೆ. ಆದರೆ ಇದು ಮಗುವಿನ ಮನಸ್ಸಿನಲ್ಲಿ ಜೀವನದ ಕೆಟ್ಟ ಘಟನೆಯಂತೆ ಅಚ್ಚಳಿಯದೇ ಉಳಿಯಬಹುದು. ಈ ರೀತಿಯ ಹಿಂಸಾಚಾರವು ಮಗುವಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಕ್ಕಳಲ್ಲಿ ತಾರತಮ್ಯ :
ಪಾಲಕರು ಸಣ್ಣ ವಿಷಯಗಳಿಗೆ ಮಕ್ಕಳ ಮುಂದೆ ತಾರತಮ್ಯ ಮಾಡಲು ಪ್ರಾರಂಭಿಸುತ್ತಾರೆ. ಇದು ಮಗುವಿನ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಮಗು ಕೂಡಾ ಮುಂದೆ ಇದೇ ರೀತಿಯ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬಹುದು .
ಇದನ್ನೂ ಓದಿ : Green Teaಯಲ್ಲಿ ಈ 4 ವಸ್ತುಗಳನ್ನು ಸೇರಿಸಿ ಕುಡಿದರೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ
ತುಂಬಾ ಕಟ್ಟುನಿಟ್ಟಾಗಿರುವುದು :
ಮಗುವಿನ ಮುಂದೆ ತುಂಬಾ ಕಟ್ಟುನಿಟ್ಟಾಗಿ ವರ್ತಿಸುವುದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೀವನದಲ್ಲಿ ಶಿಸ್ತು ಮುಖ್ಯ. ಹಾಗಂತ ಅತಿಯಾದ ಕಟ್ಟು ನಿಟ್ಟು ತೋರಿಸಿದರೆ ಮಗುವಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.