ನವದೆಹಲಿ: ಪುಷ್ಯ ಅಮವಾಸ್ಯೆಯು 2022ರ ಕೊನೆಯ ಅಮವಾಸ್ಯೆಯಾಗಿದೆ. ಈ ದಿನ ಪೂರ್ವಜರ ಆಶೀರ್ವಾದ ಪಡೆಯುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪುಷ್ಯ ಅಮವಾಸ್ಯೆಯು ಕರ್ಮಗಳ ಅಮಾವಾಸ್ಯೆಯಾಗಿದೆ. ಮತ್ತೊಂದೆಡೆ ಶುಕ್ರವಾರದ ಅಮಾವಾಸ್ಯೆಯ ದಿನವು ತುಂಬಾ ವಿಶೇಷವಾಗಿದೆ. ತಾಯಿ ಲಕ್ಷ್ಮಿದೇವಿಯ ವಿಶೇಷ ಅನುಗ್ರಹ ಪಡೆಯುವ ವಿಷಯದಲ್ಲಿ ಇದು ತುಂಬಾ ವಿಶೇಷವಾಗಿದೆ.


COMMERCIAL BREAK
SCROLL TO CONTINUE READING

ಪುಷ್ಯ ಅಮವಾಸ್ಯೆಯಂದು ಸ್ನಾನ-ದಾನ, ಪೂಜೆ ಮತ್ತು ಮಂಗಳಕರ ಸಮಯದಲ್ಲಿ ಮಾಡುವ ಕ್ರಮಗಳು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ. ಪುಷ್ಯ ಮಾಸದ ಅಮಾವಾಸ್ಯೆಯಂದು ಭಗವಾನ್ ವಿಷ್ಣು, ಸೂರ್ಯದೇವ ಮತ್ತು ಪೂರ್ವಜರನ್ನು ಪೂಜಿಸುವುದರಿಂದ ವ್ಯಕ್ತಿಯು ಪರಲೋಕದಲ್ಲಿ ಉತ್ತಮ ಸ್ಥಾನ ಪಡೆಯುತ್ತಾನೆ ಎಂದು ನಂಬಲಾಗಿದೆ.


ಇದನ್ನೂ ಓದಿ: Today Horoscope : ಈ ರಾಶಿಯ ಜನರು ಕಚೇರಿಯಲ್ಲಿ ಜಾಗೃತರಾಗಿರಬೇಕು, ಇಲ್ಲದಿದ್ದರೆ ಭಾರೀ ನಷ್ಟವಾಗಬಹುದು


ಪುಷ್ಯ ಅಮವಾಸ್ಯೆಯ ಶುಭ ಸಮಯ


ಹಿಂದೂ ಕ್ಯಾಲೆಂಡರ್ ಪ್ರಕಾರ ಪುಷ್ಯ ಅಮವಾಸ್ಯೆಯು ಡಿಸೆಂಬರ್ 22ರಂದು ರಾತ್ರಿ 7.14ರಿಂದ ಪ್ರಾರಂಭವಾಗಿದೆ ಡಿ.23ರ ಮಧ್ಯಾಹ್ನ 3.47ರವರೆಗೆ ಇರುತ್ತದೆ. ಈ ರೀತಿ ಇಂದು ಮಧ್ಯಾಹ್ನದವರೆಗೆ ಸ್ನಾನ-ದಾನ, ಪೂಜೆಗೆ ಶುಭ ಮುಹೂರ್ತವಿರುತ್ತದೆ.


ಪುಷ್ಯ ಅಮವಾಸ್ಯೆಯಂದು ಈ ಕೆಲಸ ಮಾಡಬೇಕು


  • ಪುಷ್ಯ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣ-ಶ್ರದ್ಧ ಇತ್ಯಾದಿಗಳನ್ನು ಮಾಡಬೇಕು. ಅರ್ಹ ಪಂಡಿತರ ಮಾರ್ಗದರ್ಶನದಲ್ಲಿ ಪಿಂಡ ದಾನ ಮಾಡಿ. ಇದರೊಂದಿಗೆ ಪಿತೃದೋಷ ನಿವಾರಣೆಯಾಗಿ ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸಮೃದ್ಧಿ ಬರುತ್ತದೆ.

  • ಪುಷ್ಯ ಅಮವಾಸ್ಯೆಯ ದಿನ ಪಕ್ಷಿಗಳಿಗೆ ಆಹಾರ ನೀಡಬೇಕು. ವಿಶೇಷವಾಗಿ ಕಾಗೆಗಳಿಗೆ ಧಾನ್ಯಗಳನ್ನು ತಿನ್ನಿಸುವುದರಿಂದ ರಾಹುದೋಷ ಮತ್ತು ಪಿತ್ರದೋಷ ನಿವಾರಣೆಯಾಗುತ್ತದೆ. ಅಂದಹಾಗೆ ಈ ಕೆಲಸವನ್ನು ಪ್ರತಿ ಅಮಾವಾಸ್ಯೆಯ ದಿನದಂದು ಮಾಡಬೇಕು.

  • ಪುಷ್ಯ ಅಮವಾಸ್ಯೆಯ ದಿನ ಬಡವರಿಗೆ ದಾನ ಮಾಡಬೇಕು. ಇದರಿಂದ ಪೂರ್ವಜರ ಋಣವು ದೂರವಾಗುತ್ತದೆ ಮತ್ತು ಅವರು ನಿಮ್ಮನ್ನು ಆಶೀರ್ವದಿಸುತ್ತಾರೆ.

  • ಅಮವಾಸ್ಯೆಯ ದಿನದಂದು ಹಸುವಿಗೆ ಮೇವು, ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸಬೇಕು.


ಇದನ್ನೂ ಓದಿShani Dev: ಶನಿವಾರದಂದು ಈ ಮಾಂತ್ರಿಕ ತಂತ್ರ ಮಾಡಿ, ಶನಿದೇವನ ಕೃಪೆಗೆ ಪಾತ್ರರಾಗಿ


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.