Paush Purnima 2023: ವರ್ಷದ ಮೊದಲ ಹುಣ್ಣಿಮೆಯ ದಿನ 3 ಶುಭಯೋಗಗಳ ನಿರ್ಮಾಣ, ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಈ ಕೆಲಸ ಮಾಡಿ
Paush Purnima 2023: ಹೊಸ ವರ್ಷ ಅಂದರೆ 2023ರ ಪುಷ್ಯ ಮಾಸದ ಹುಣ್ಣಿಮೆ ಜನವರಿ 6, 2023 ಕ್ಕೆ ಬೀಳುತ್ತಿದೆ. ಹೌದು, 2023ನೇ ಸಾಲಿನ ಈ ಮೊದಲ ಹುಣ್ಣಿಮೆ ಅತ್ಯಂತ ವಿಶೇಷ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಬನ್ನಿ ಪೌಷ್ಯ ಹುಣ್ಣಿಮೆಯ ಶುಭ ಮುಹೂರ್ತ, ಶುಭ ಯೋಗಗಳು ಹಾಗೂ ಪೂಜೆಯ ವಿಧಿ ವಿಧಾನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
Paush Purnima 2023 Date and Time: ಹಿಂದೂ ಧರ್ಮದಲ್ಲಿ ಹುಣ್ಣಿಮೆ ಮತ್ತು ಅಮವಾಸ್ಯೆಯ ತಿಥಿಗಳಿಗೆ ವಿಶೇಷ ಮಹತ್ವವಿದೆ. ಹೊಸ ವರ್ಷ ಅಂದರೆ 2023 ರಲ್ಲಿ, ಪೌಷ್ಯ ಮಾಸದ ಹುಣ್ಣಿಮೆಯು 6 ಜನವರಿ 2023 ರಂದು ಇರಲಿದೆ. ಹುಣ್ಣಿಮೆಯ ತಿಥಿಯು ಶುಕ್ಲ ಪಕ್ಷದ ಕೊನೆಯ ದಿನವಾಗಿದೆ ಮತ್ತು ಶುಕ್ಲ ಪಕ್ಷವನ್ನು ಧರ್ಮಗ್ರಂಥಗಳಲ್ಲಿ ದೇವತೆಗಳ ಸಮಯ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯಂದು ಚಂದ್ರನೊಂದಿಗೆ ಲಕ್ಷ್ಮಿ-ನಾರಾಯಣನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸವಿದ್ದು ಮನೆಯಲ್ಲಿ ಸತ್ಯನಾರಾಯಣ ಕಥೆಯನ್ನು ಪಠಿಸುವುದರಿಂದ ಮನುಷ್ಯ ಜೀವನದಲ್ಲಿ ಆನಂದವನ್ನು ಪಡೆಯುತ್ತಾನೆ ಮತ್ತು ಮರಣಾನಂತರ ಮುಂದಿನ ಜನ್ಮದಲ್ಲಿಯೂ ಸಂಪತ್ತು, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. 2023 ರ ಮೊದಲ ಹುಣ್ಣಿಮೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪೌಷ್ಯ ಹುಣ್ಣಿಮೆಯ ಶುಭ ಮುಹೂರ್ತ, ಶುಭ ಯೋಗ ಮತ್ತು ಪೂಜಾ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.
ಪೌಷ್ಯ ಹುಣ್ಣಿಮೆ 2023 ರ ಶುಭಯೋಗಗಳು
2023 ರ ಹೊಸ ವರ್ಷದಲ್ಲಿ, ಪೌಷ್ಯ ಹುಣ್ಣಿಮೆ ಉಪವಾಸವನ್ನು ಜನವರಿ 6 ರಂದು ಶುಕ್ರವಾರ ಆಚರಿಸಲಾಗುತ್ತದೆ. ವಿಶೇಷವೆಂದರೆ ಹುಣ್ಣಿಮೆ ಮತ್ತು ಶುಕ್ರವಾರ ಎರಡೂ ಲಕ್ಷ್ಮೀದೇವಿಗೆ ಮೀಸಲಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಪೌಷ್ಯ ಹುಣ್ಣಿಮೆಯಂದು ತಾಯಿ ಲಕ್ಷ್ಮಿಯ ಕೃಪಾವೃಷ್ಟಿ ಪಡೆಯಲು ಒಂದು ಸುವರ್ಣಾವಕಾಶವಿದೆ. ಈ ದಿನದಂದು ಮಾಡುವ ಪೂಜೆ ಮತ್ತು ಪರಿಹಾರಗಳು ಜೀವನದಲ್ಲಿ ಸಂತೋಷವನ್ನು ತರುತ್ತವೆ. ಮತ್ತೊಂದೆಡೆ, ಪೌಷ್ಯ ಹುಣ್ಣಿಮೆಯ ದಿನ ಬ್ರಹ್ಮ, ಇಂದ್ರ ಮತ್ತು ಸರ್ವಾರ್ಥ ಸಿದ್ಧಿ ಯೋಗವು ರೂಪುಗೊಳ್ಳುತ್ತಿದೆ, ಇದು ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
>> ಇಂದ್ರ ಯೋಗ - 06 ಜನವರಿ 2023, 08.11 am - 07 ಜನವರಿ 2023, 08.55 am
>> ಬ್ರಹ್ಮ ಯೋಗ - 05 ಜನವರಿ 2023, 07.34 am - 06 ಜನವರಿ 2023, 08.11 am
>> ಸರ್ವಾರ್ಥ ಸಿದ್ಧಿ ಯೋಗ - 12.14 am - 06.38 am (7 ಜನವರಿ 2023)
ಪೌಷ್ಯ ಹುಣ್ಣಿಮೆಯ ಶುಭ ಮುಹೂರ್ತಗಳು
ಪೌಷ್ಯ ಹುಣ್ಣಿಮೆ ದಿನಾಂಕ ಪ್ರಾರಂಭ - ಜನವರಿ 6, 2023, 2.14 am
ಪೌಷ್ಯ ಹುಣ್ಣಿಮೆ ದಿನಾಂಕ ಮುಕ್ತಾಯ - 7 ಜನವರಿ 2023, 04.37 am
ಅಭಿಜಿತ್ ಮುಹೂರ್ತ - 11:33 am - 12:15 pm
ಚಂದ್ರೋದಯ ಸಮಯ - ಸಂಜೆ 04.32 (ಹುಣ್ಣಿಮೆಯಂದು ಚಂದ್ರನನ್ನು ಪೂಜಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ)
ಇದನ್ನೂ ಓದಿ-Vaikuntha Ekadashi 2023:ಜನವರಿಯ ಈ ದಿನ 'ಮಹಾ ಉಪವಾಸ', ಮೂರು ಅದ್ಭುತ ಶುಭ ಯೋಗಗಳಿಂದ ದ್ವಿಗುಣ ಫಲಿತಾಂಶ
ಪೌಷ್ಯ ಹುಣ್ಣಿಮೆಯ ಪೂಜಾ ವಿಧಿ
ಪೌಷ್ಯ ಮಾಸದ ಹುಣ್ಣಿಮೆಯನ್ನು ಶಾಕಾಂಬರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಸ್ವಲ್ಪ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ. ಉಪವಾಸದ ವ್ರತದ ಸಂಕಲ್ಪ ಮಾಡಿ, ಲಕ್ಷ್ಮಿ-ನಾರಾಯಣನನ್ನು ಅರಿಶಿಣ, ಕುಂಕುಮ, ಅರಿಶಿನ, ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಪಂಚಾಮೃತ, ನೈವೇದ್ಯಗಳೊಂದಿಗೆ ಪೂಜಿಸಿ. ಶ್ರೀಮನ್ ಸತ್ಯನಾರಾಯಣನ ಕಥೆಯನ್ನು ಓದಿ. ಶ್ರೀ ಹರಿಯ ಭಜನೆ-ಕೀರ್ತನೆ ಮಾಡಿ. ಸಂಜೆ ಹಾಲಿನಲ್ಲಿ ಸಕ್ಕರೆ ಮತ್ತು ಅಕ್ಕಿಯನ್ನು ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಸಾಧ್ಯವಾದರೆ ಮಧ್ಯರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಹುಣ್ಣಿಮೆಯ ರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ.
ಇದನ್ನೂ ಓದಿ-Vastu Tips 2023: ಹೊಸವರ್ಷದಂದು ಮನೆಯ ಮುಖ್ಯದ್ವಾರದ ಬಳಿ ಇರಲಿ ಈ 6 ಸಂಗತಿಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.