ಈ ತಿಂಗಳಲ್ಲಿ ಜನಿಸಿದವರು ಸೋಲಿಲ್ಲದ ಸರದಾರರು ! ಯಾವುದೇ ಕೆಲಸ ಮಾಡಿದರೂ ದಕ್ಕುವುದು ಜಯ
June Month Born People Personality: ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯದ ಜೊತೆಗೆ, ಇವರು ರಾಜತಾಂತ್ರಿಕ ಗುಣಗಳನ್ನು ಕೂಡಾ ಹೊಂದಿರುತ್ತಾರೆ.
ಬೆಂಗಳೂರು : ಬೇರೆ ಬೇರೆ ತಿಂಗಳಲ್ಲಿ ಹುಟ್ಟಿದವರ ಸ್ವಭಾವವೂ ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂಗ್ಲಿಷ್ ತಿಂಗಳಲ್ಲಿ ಆರನೇ ತಿಂಗಳನ್ನು ಜೂನ್ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಜನಿಸಿದವರು ಧೈರ್ಯಶಾಲಿಯಾಗಿರುತ್ತಾರೆ. ಯಾವುದೇ ರೀತಿಯ ಅಪಾಯಕಾರಿ ಕೆಲಸಗಳಿಂದಲೂ ಇವರು ಹಿಂದೆ ಸರಿಯುವುದಿಲ್ಲ.ಕೆಲಸ ಎಷ್ಟೇ ಕಷ್ಟಕರವಾಗಿದ್ದರೂ ಒಂದಿಷ್ಟೂ ಹೆದರದೆ ಮುನ್ನುಗ್ಗುತ್ತಾರೆ.
ಜೂನ್ ನಲ್ಲಿ ಹುಟ್ಟಿದವರ ವ್ಯಕ್ತಿತ್ವ :
ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯದ ಜೊತೆಗೆ, ಇವರು ರಾಜತಾಂತ್ರಿಕ ಗುಣಗಳನ್ನು ಕೂಡಾ ಹೊಂದಿರುತ್ತಾರೆ. ಯಾರೊಂದಿಗೆ, ಯಾವಾಗ ಹೇಗೆ ಮಾತನಾಡಬೇಕು ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದಲೇ ಅವರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗುತ್ತಾರೆ.
ಇದನ್ನೂ ಓದಿ :ಮಾದಪ್ಪನ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು: ಮಹಾ ಜ್ಯೋತಿ ದರ್ಶನಕ್ಕೆ ಕಾತರ
ಜೂನ್ ನಲ್ಲಿ ಹುಟ್ಟಿದವರ ಗುಣ ಹೇಗಿರುತ್ತದೆ :
ಜೂನ್ ತಿಂಗಳಲ್ಲಿ ಜನಿಸಿದವರಲ್ಲಿ ಹಲವು ಕಲಾತ್ಮಕ ಗುಣಗಳಿವೆ. ಅಡುಗೆ ಕಲೆಯಲ್ಲಿ ಇವರು ಪ್ರವೀಣರು. ರುಚಿಕರವಾದ ತಿನಿಸುಗಳನ್ನು ಮಾಡಿ ಎಲ್ಲರಿಗೂ ಉಣಬಡಿಸುವುದರಲ್ಲಿ ವಿಶೇಷ ಒಲವು ಹೊಂದಿರುತ್ತಾರೆ.
ಸಮಾಜದಲ್ಲಿ ಹೆಚ್ಚುವುದು ಗೌರವ :
ರಾಜಕೀಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೆ ಮೇಲುಗೈ ಸಾಧಿಸುವ ಶಕ್ತಿ ಅವರಲ್ಲಿರುತ್ತದೆ. ರಾಜತಾಂತ್ರಿಕತೆಯು ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಮುನ್ನಡೆಯಲು ಸಹಾಯ ಮಾಡುತ್ತದೆ. ತಮ್ಮ ಜೀವನದಲ್ಲಿ ಯಥೇಚ್ಛವಾಗಿ ಹೆಸರು-ಕೀರ್ತಿ-ಹಣ ಪಡೆಯುತ್ತಾರೆ. ಯಾರ ಬೆಂಬಲವೂ ಇಲ್ಲದೆ ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಗಳಿಸುತ್ತಾರೆ.
ಇದನ್ನೂ ಓದಿ :ಸಿರಿವಂತರಾಗಬೇಕಾದರೆ ಮನೆಯ ಸುತ್ತ ಈ ಗಿಡಗಳನ್ನು ನೆಡಿ ! ಅದೃಷ್ಟ ನಿಮ್ಮ ಹಿಂದೆಯೇ ಇರುವುದು
ಅವರ ಸ್ವಭಾವ :
ಕೆಲವೊಮ್ಮೆ ಮೊಂಡುತನದ ಸ್ವಭಾವ ಹೊಂದಿರುತ್ತಾರೆ. ಈ ಮೊಂಡುತನದ ಸ್ವಭಾವದಿಂದಾಗಿ ತಮಗೇ ನಷ್ಟವನ್ನು ಉಂಟು ಮಾಡಿಕೊಳ್ಳುತ್ತಾರೆ. ಏನೇ ಬೇಸರವಾದರೂ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ತಮ್ಮ ಮನಸ್ಸಿನ ಭಾವನೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ. ತಮ್ಮ ಕಷ್ಟಕ್ಕೆ ತಾವೇ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಯೋಚನೆ ಇವರದ್ದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ