Side effects of amla : ನೆಲ್ಲಿಕಾಯಿ ಪೌಷ್ಟಿಕಾಂಶದ ಹಣ್ಣಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯಲ್ಲಿ ಅನೇಕ ರೀತಿಯ ಸಂಯುಕ್ತಗಳು ಕಂಡುಬರುತ್ತವೆ. ಇದು ಆಮ್ಲೀಯ ಸ್ವಭಾವವನ್ನು ಹೊಂದಿದೆ. ಮಾತ್ರವಲ್ಲ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದರಿಂದಾಗಿ ಇದು ಕೆಲವು ಜನರಿಗೆ ಹಾನಿಕಾರಕವಾಗಿದೆ.


COMMERCIAL BREAK
SCROLL TO CONTINUE READING

ಇಂದು ನಾವು ನೆಲ್ಲಿಕಾಯಿಯನ್ನು ಯಾರು ತಿನ್ನಬಾರದು? ಯಾರಿಗೆ ನೆಲ್ಲಿಕಾಯಿ ಹಾನಿಯನ್ನು ಉಂಟು ಮಾಡುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯಬಹುದು. 


ಇದನ್ನೂ ಓದಿ : ದಟ್ಟವಾದ ಕೂದಲಿಗೆ ಅಲೋವೆರಾದೊಂದಿಗೆ ಈ ವಸ್ತುಗಳನ್ನು ಮಿಶ್ರಣ ಮಾಡಿ ಬಳಸಿ..!


ಅಸಿಡಿಟಿಯಿಂದ ಬಳಲುತ್ತಿರುವವರು :
ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೀವು ಆಮ್ಲೀಯತೆಯಿಂದ ಬಳಲುತ್ತಿದ್ದರೆ, ನೆಲ್ಲಿಕಾಯಿ ಸೇವನೆಯು ಸೀಮಿತವಾಗಿರಬೇಕು.


ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು : 
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ನೆಲ್ಲಿಕಾಯಿಯನ್ನು  ಸೇವಿಸಿದರೆ, ದೇಹದಲ್ಲಿ ಸೋಡಿಯಂ ಮಟ್ಟವು ಹೆಚ್ಚಾಗುತ್ತದೆ. ಸೋಡಿಯಂ ಮತ್ತ ಹೆಚ್ಚಾದರೆ ಅದು ಕಿಡ್ನಿಯ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ : ಈ ಐದು ವಿಧಾನ ಅನುಸರಿಸಿದರೆ ಮಲಗಿದ ಕೂಡಲೇ ನಿದ್ದೆಗೆ ಜಾರುತ್ತೀರಿ ! ಗಾಢ ನಿದ್ದೆ ಕೂಡಾ ಗ್ಯಾರಂಟಿ


ಕಡಿಮೆ ರಕ್ತದ ಸಕ್ಕರೆಯಿಂದ ಬಳಲುತ್ತಿರುವವರು : 
ನೆಲ್ಲಿಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಕಡಿಮೆ ರಕ್ತದ ಸಕ್ಕರೆಯಿಂದ ಬಳಲುತ್ತಿದ್ದರೆ, ನೆಲ್ಲಿಕಾಯಿಯನ್ನು ಸೇವಿಸಬಾರದು. ಇದಲ್ಲದೇ ಮಧುಮೇಹ ನಿವಾರಕ ಔಷಧಗಳನ್ನು ಸೇವಿಸುವವರು ಕೂಡಾ ನೆಲ್ಲಿಕಾಯಿಯಿಂದ ಅಂತರವನ್ನು ಕಾಯ್ದುಕೊಳ್ಳಬೇಕು. 


ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು :
ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ನೆಲ್ಲಿಕಾಯಿ ಸೇವಿಸುವ ಮೊದಲು ತಮ್ಮ ವೈದ್ಯರ ಅನುಮತಿ ಪಡೆದುಕೊಳ್ಳಬೇಕು. ಇಲ್ಲವಾದರೆ   ಹೊಟ್ಟೆ ಉರಿ ಸಮಸ್ಯೆ ಎದುರಾಗಬಹುದು. ಇದಲ್ಲದೆ, ಗರ್ಭಿಣಿಯರು ನಿರ್ಜಲೀಕರಣದಂತಹ ಸಮಸ್ಯೆಗಳಿಂದ ಕೂಡ ತೊಂದರೆಗೊಳಗಾಗಬಹುದು.


ಇದನ್ನೂ ಓದಿ : ಕೂದಲು ದಟ್ಟವಾಗಿ ಮತ್ತು ಗಾಢವಾಗಿ ಬೆಳೆಯಲು ಈ ಬಿಳಿ ವಸ್ತು ಬಳಸಿ !


ಶಸ್ತ್ರ ಚಿಕಿತ್ಸೆಗೆ ಒಳಗಾಗುವವರು :
ಮುಂದಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರು ನೆಲ್ಲಿಕಾಯಿ ತಿನ್ನಬಾರದು. ಇದನ್ನು ಸೇವಿಸುವುದರಿಂದ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಶಸ್ತ್ರಚಿಕಿತ್ಸೆಗೆ ಕನಿಷ್ಠ 2 ವಾರಗಳ ಮೊದಲು ನೆಲ್ಲಿಕಾಯಿಯನ್ನು ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.