ನವದೆಹಲಿ : ಜ್ಯೋತಿಷ್ಯದಲ್ಲಿ, (Astrology) ಪ್ರತಿ ರಾಶಿಚಕ್ರದ ಜನರ ಗುಣಲಕ್ಷಣಗಳನ್ನು ಹೇಳಲಾಗಿದೆ. ಈ ಗುಣಲಕ್ಷಣಗಳು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತವೆ. ಆದರೆ ಕೆಲವು ಜನರು ಮಾತ್ರ ಭಿನ್ನವಾಗಿರುವುದು ಮಾತ್ರ ಅಲ್ಲ, ಯಾವಾಗಲೂ ಇತರರ ಆಕರ್ಷಣೆಯ ಕೇಂದ್ರವಾಗಿರುತ್ತಾರೆ. ಅವರ ವ್ಯಕ್ತಿತ್ವವು ತುಂಬಾ ಆಕರ್ಷಕ ಮತ್ತು ದೃಢವಾಗಿರುತ್ತದೆ. ಇವರ ಬಗ್ಗೆ ಇತರರಿಗೆ ಅತಿ ಹೆಚ್ಚು ಆಸಕ್ತಿ ಇರುತ್ತದೆ. ಅಂತಹ 2 ರಾಶಿಚಕ್ರ ಚಿಹ್ನೆಗಳ (Zodiac sign) ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಈ 2 ರಾಶಿಚಕ್ರದ ಜನರು ಬಹಳ ಆಕರ್ಷಕವಾಗಿರುತ್ತಾರೆ :
ಮಕರ : ಮಕರ ರಾಶಿಯ (Capricorn) ಜನರು ಹೊಂದಿರುವ ಕೆಲವು ಗುಣಗಳಿಂದ ಅವರು, ತುಂಬಾ ಜವಾಬ್ದಾರಿಯುತವಾಗಿರುತ್ತಾರೆ. ಅಲ್ಲದೆ, ಇವರು ತತ್ವಬದ್ಧವಾಗಿ ಮತ್ತು ಶಿಸ್ತುಬದ್ಧವಾಗಿರುತ್ತಾರೆ. ಈ ರಾಶಿಯವರು  (Zodiac sign) ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುವುದು ಮಾತ್ರವಲ್ಲದೆ, ನಿರ್ವಹಣೆಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಈ ಎಲ್ಲಾ ಸಂಗತಿಗಳು ಈ ರಾಶಿಯ ಜನರ ವ್ಯಕ್ತಿತ್ವವನ್ನು ದೃಢವಾಗಿಸುತ್ತದೆ. ಇದಲ್ಲದೇ, ಮಕರ ರಾಶಿಯವರು ತಮ್ಮ ಬಗ್ಗೆ ಕೂಡಾ ಹೆಚ್ಚಿನ ಗಮನ ವಹಿಸುತ್ತಾರೆ. ಈ ರೀತಿಯಾಗಿ ಅವರು ಯಾವಾಗಲೂ ಆಕರ್ಷಕವಾಗಿ ಕಾಣುತ್ತಾರೆ. ಆದರೆ ಇವರಲ್ಲಿರುವ ಏಕೈಕ ಸಮಸ್ಯೆ ಎಂದರೆ ತಮ್ಮನ್ನು ತಾವು ಎಲ್ಲರಿಗಿಂತ ಉತ್ತಮರು ಎಂದು ಕೊಳ್ಳುವುದು.  


ಇದನ್ನೂ ಓದಿ: October 2021 Rashi Parivartan: ಎರಡು ದೊಡ್ಡ ಗ್ರಹಗಳ ರಾಶಿ ಪರಿವರ್ತನೆ, ನಿಮ್ಮ ಮೇಲೆ ಅದರ ಪರಿಣಾಮ ಏನೆಂದು ತಿಳಿಯಿರಿ


ತುಲಾ : ತುಲಾ ರಾಶಿಯ (Libra) ಜನರು ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತಾರೆ. ತಮ್ಮ ಜೊತೆ, ಯಾವತ್ತೂ ತಪ್ಪಾಗಲು ಬಿಡುವುದಿಲ್ಲ. ಮಾತ್ರವಲ್ಲ, ಇವರು ಬೇರೆಯವರ ಜೊತೆ ತಪ್ಪಾಗಿ ನಡೆದುಕೊಳ್ಳುವುದಿಲ್ಲ. ಈ ರಾಶಿಯವರು ದಯೆಯ ಸ್ವಭಾವವನ್ನುಹೊಂದಿರುತ್ತಾರೆ. ಅವರ ಸಹಕಾರ ಮನೋಭಾವ ಇತರ ಜನರ ಮಧ್ಯೆ, ಜನಪ್ರಿಯಗೊಳಿಸುತ್ತದೆ. ಅದೇ ಸಮಯದಲ್ಲಿ, ಅವರ ತೀಕ್ಷ್ಣವಾದ ಮನಸ್ಸು, ಉತ್ಸಾಹ ಮತ್ತು ಹರ್ಷಚಿತ್ತದಿಂದ ಇರುವ ಸ್ವಭಾವವು ಅವರಿಗೆ ದೃಢವಾದ ವ್ಯಕ್ತಿತ್ವವನ್ನು ನೀಡುತ್ತದೆ. ಈ ರಾಶಿಯ (Zodiac sign) ಜನರು ಕೂಡಾ ಬಹಳ ಬುದ್ಧಿವಂತರು. ಅವರು ಸಾಮಾಜಿಕ ಜೀವನದಲ್ಲಿ (Socail life) ಉತ್ತಮ ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ. 


ಇದನ್ನೂ ಓದಿ: Ashwin Month 2021: ಬಹಳ ವಿಶೇಷ ಅಕ್ಟೋಬರ್ 22 ರವರೆಗಿನ ಸಮಯ, ಆದರೆ ಈ ವಿಷಯಗಳನ್ನು ನೆನಪಿನಲ್ಲಿಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.