ನವದೆಹಲಿ : ಯಾವುದೇ ವ್ಯಕ್ತಿಯನ್ನು ಮೂರ್ಖ ಎಂದು ಸಾಬೀತು ಮಾಡಿದರೆ, ಅವರ ವಾದಗಳನ್ನು ಅಥವಾ ಅವರ ಒಳ್ಳೆಯ ಕಾರ್ಯಗಳನ್ನು ನಿರ್ಲಕ್ಷಿಸುವುದು ಸುಲಭವಾಗಿ ಬಿಡುತ್ತದೆ. ತಾವು ಮಾಡುವುದೇ ಸರಿ, ತಮ್ಮ ಯೋಚನೆಗಳೇ ಸರಿ ಎಂದು  ಭಾವಿಸಿ, ಇತರರನ್ನು ಕೀಳು ಎನ್ನುವಂತೆ ನೋಡುವ ಅನೇಕ ಜನ ನಮ್ಮ ಮಧ್ಯೆ ಇರುತ್ತಾರೆ. ಇವರು ಎಂಥ ಬುದ್ದಿವಂತರನ್ನು ಕೂಡಾ ಮೂರ್ಖರೆಂದು ಸಾಬೀತು ಮಾಡಿ ಬಿಡುತ್ತಾರೆ. ಅಂಥಹ ಜನರಿಂದ ಸಾಧ್ಯವಾದಷ್ಟು ದೂರ ಇರುವುದು ಒಳ್ಳೆಯದು. ಅಂಥಹ ಜನರೊಂದಿಗೆ ದೀರ್ಘಕಾಲ ಬದುಕುವುದು ಸಾಧ್ಯವಾಗುವುದಿಲ್ಲ.  


COMMERCIAL BREAK
SCROLL TO CONTINUE READING

ಈ ರಾಶಿಚಕ್ರ ಚಿಹ್ನೆಗಳಿಂದ ದೂರವಿರಿ : 
ಮಿಥುನ: ಮಿಥುನ ರಾಶಿಯ (Gemini) ಜನರು ಇತರರ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಷ್ಟೇ ಅಲ್ಲ, ಬೇರೆಯವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ತಮ್ಮ ಮುಂದೆ ಇರುವ ವ್ಯಕ್ತಿಯನ್ನು ಮೂರ್ಖ ಎಂದು ಸಾಬೀತುಪಡಿಸುವುದರಲ್ಲಿ ಇವರು ಎತ್ತಿದ ಕೈ. ತಾವು ಹೇಳಿದ್ದೇ ಸರಿ ಎಂದು ವಾದಿಸುವುದರಲ್ಲಿ ನಿಪುಣರು ಈ ರಾಶಿಯವರು.


ಇದನ್ನೂ ಓದಿ : Mercury: ನಿಮಗೂ ಬುಧ ದುರ್ಬಲನಾಗಿರುವನೇ? ಈ ಚಿಹ್ನೆಗಳೊಂದಿಗೆ ಗುರುತಿಸಿ


ಕನ್ಯಾ ರಾಶಿ : ಈ ರಾಶಿಯವರು (Zodiac sign) ಪ್ರತಿಯೊಬ್ಬರನ್ನು ತಮಗಿಂತ ಕೀಳು ಎಂದೇ ಪರಿಗಣಿಸುತ್ತಾರೆ. ಯಾವಾಗಲೂ ಇತರರ ಕೆಲಸಗಳಲ್ಲಿ ದೋಷಗಳನ್ನು ಕಂಡುಹಿಡಿಯುವುದೇ ಇವರ ಕೆಲಸ. ಅಲ್ಲದೆ, ಎದುರಿಗಿರುವವರು ಕಡಿಮೆ ಬುದ್ಧಿವಂತರು ಎಂದು ಸಾಬೀತುಪಡಿಸುವುದರಲ್ಲಿಯೇ ನಿರತರಾಗಿರುತ್ತಾರೆ. ತಮ್ಮಿಂದ ಏನಾದರೂ ತಪ್ಪಾದರೂ ಕೂಡಾ ಅದಕ್ಕೆ ಬೇರೆಯವರನ್ನು ಹೊಣೆಯಾಗಿಸುತ್ತಾರೆ.


 ಸಿಂಹ: ಸಿಂಹ ರಾಶಿಯವರು (Leo) ಯಾರ ಬಳಿಯೂ ಕ್ಷಮೆ ಕೇಳಲು ಇಷ್ಟಪಡುವುದಿಲ್ಲ. ತಮ್ಮ ತಪ್ಪನ್ನು ಮುಚ್ಚಿ ಹಾಕಲು ಬೇರೆಯವರನ್ನು ಮೂರ್ಖರು ಎಂದು ಸಾಬೀತುಪಡಿಸಲು ಕೂಡಾ  ಹಿಂಜರಿಯುವುದಿಲ್ಲ. ಈ ರಾಶಿಯವರು ಮೈಂಡ್ ಗೇಮ್ಸ್ (mind game) ಆಡುವುದರಲ್ಲಿ ನಿಪುಣರು. 


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ (Scorpio) ಜನರು ಎಲ್ಲದರ ಮೇಲೆ ತಮ್ಮ ನಿಯಂತ್ರಣವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಇದಕ್ಕಾಗಿ ಅವರು ಯಾವುದೇ ಹಂತಕ್ಕೆ ಹೋಗಲು ಕೂಡಾ ರೆಡಿಯಾಗಿರುತ್ತಾರೆ. ತಮ್ಮ ಎದುರಾಳಿಯನ್ನು ಅವಮಾನಿಸುವ ಸಲುವಾಗಿ, ಅವರನ್ನು ಮೂರ್ಖ ಎಂದು ಸಾಬೀತು ಪಡಿಸಲು ಅನೈತಿಕ ವಿಧಾನಗಳನ್ನು ಕೂಡಾ ಅಳವಡಿಸಿಕೊಳ್ಳಬಹುದು. 


ಇದನ್ನೂ ಓದಿ : ಈ ರಾಶಿಯವರಿಗೆ 2022ರಲ್ಲಿ ಭಾರೀ ಆರ್ಥಿಕ ಲಾಭ, ಮಂಗಳನ ಕೃಪೆಯಿಂದ ಬೆಳಗಲಿದೆ ಅದೃಷ್ಟ


ತುಲಾ: ಈ ರಾಶಿಯ (Libra) ಜನರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ನೀವು ಅವರಿಗೆ ಪುರಾವೆಗಳನ್ನು ತೋರಿಸಿದರೂ, ಅವರು ಅದನ್ನು ನಿರಾಕರಿಸಲು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮನ್ನು ತಾವು ಸರಿ ಎಂದು ಸಾಬೀತುಪಡಿಸಲು ಇತರರ ಹೃದಯ ಮತ್ತು ಮನಸ್ಸಿನೊಂದಿಗೆ ಸುಲಭವಾಗಿ ಆಟವಾಡುತ್ತಾರೆ. 


ಕುಂಭ: ಕುಂಭ ರಾಶಿಯವರಿಗೆ (Aquarius)ಇತರರ ಬಗ್ಗೆ ಅಸೂಯೆ ಪಡುವ ಕೆಟ್ಟ ಅಭ್ಯಾಸ ಇರುತ್ತದೆ. ಬೇರೆಯವರ ಯಶಸ್ಸನ್ನು ಇವರು ಸಹಿಸುವುದಿಲ್ಲ. ಸದಾ ಇನ್ನೊಬ್ಬರ ನ್ಯೂನತೆಗಳನ್ನು ಲೆಕ್ಕ ಹಾಕುತ್ತಿರುತ್ತಾರೆ. ಯಶಸ್ವಿ ವ್ಯಕ್ತಿಯನ್ನು ದಾರಿತಪ್ಪಿಸುತ್ತಾರೆ ಮತ್ತು ಅವನನ್ನು ಸರಿಯಾದ ಮಾರ್ಗದಿಂದ ವಿಚಲಿತಗೊಳಿಸುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ