ನವದೆಹಲಿ : ಅಂಗ ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವನ್ನು  ಭವಿಷ್ಯವನ್ನು ಊಹಿಸಲು ಬಳಸಲಾಗುತ್ತದೆ. ಅದಕ್ಕಾಗಿಯೇ ಸಂಖ್ಯಾಶಾಸ್ತ್ರದಲ್ಲಿ (Numerology) ಪ್ರತಿಯೊಂದು ಸಂಖ್ಯೆಗೂ ವಿಶೇಷ ಮಹತ್ವವಿದೆ. ಕೆಲವು ದಿನಾಂಕದಂದು ಜನಿಸಿದವರು ತುಂಬಾ ಬುದ್ಧಿವಂತರಾಗಿದ್ದರೆ, ಕೆಲವು ದಿನ ಜನಿಸಿದವರು ಅದೃಷ್ಟದಿಂದ ಶ್ರೀಮಂತರಾಗಿರುತ್ತಾರೆ. ಕೆಲವರು ಶಾಂತವಾಗಿದ್ದರೆ, ಕೆಲವರು ಸ್ನೇಹಪರರಾಗಿರುತ್ತಾರೆ. 


COMMERCIAL BREAK
SCROLL TO CONTINUE READING

ಮೂಲಾಂಕ 9 ಇದ್ದವರು ಬಹಳ ಅದೃಷ್ಟವಂತರು :
ಅಂಗ ಜ್ಯೋತಿಷ್ಯದ (Astrology) ಪ್ರಕಾರ, ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರ, ಮೂಲಾಂಕವನ್ನು 9 ಎಂದು ಪರಿಗಣಿಸಲಾಗುತ್ತದೆ. ಮೂಲಾಂಕ 9  ಆಗಿದ್ದರೆ, ಅಂಥಹವರು ಆಸ್ತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. ಅಲ್ಲದೆ, ಈ ಜನರು ತುಂಬಾ ಭಾವೋದ್ರಿಕ್ತ ಮತ್ತು ಉತ್ಸಾಹಭರಿತರಾಗಿರುತ್ತಾರೆ. ಇದಲ್ಲದೇ ಈ ಮೂಲಾಂಕದವರು ಧೈರ್ಯವಂತರಾಗಿರುತ್ತಾರೆ. ರಾಡಿಕ್ಸ್ 9ಕ್ಕೆ ಸೇರಿದ ಜನರು, ಒಮ್ಮೆ ಕೆಲಸವನ್ನು ಮಾಡಲು ನಿರ್ಧರಿಸಿದರೆ, ಅವರು ಅದನ್ನು ಯಶಸ್ವಿಗೊಳಿಸುವ ತನಕ ಸುಮ್ಮನಿರುವುದಿಲ್ಲ.  ಅಲ್ಲದೆ, ಅವರಿಗೆ  ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗುತ್ತದೆ. 


ಇದನ್ನೂ ಓದಿ : Money Vastu: ಈ 4 ವಸ್ತುಗಳು ಪರ್ಸ್ ನಲ್ಲಿದ್ದರೆ ಹಣ ತುಂಬಿ ತುಳುಕುತ್ತದೆ.!


ಸದಾ ನೆರವಾಗಿರುತ್ತದೆ ಮಂಗಳ : 
ಸಂಖ್ಯಾಶಾಸ್ತ್ರದ (Numerology) ಪ್ರಕಾರ, ರಾಡಿಕ್ಸ್ 9 ರ ಅಧಿಪತಿ ಮಂಗಳ. ಈ ಕಾರಣಕ್ಕಾಗಿ ಈ  ಮೂಲಾಂಕದ (radix number) ಜನರು ತುಂಬಾ ಪ್ರಾಯೋಗಿಕರಾಗಿರುತ್ತಾರೆ.  ಈ ಜನರು ಆರಂಭಿಕ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡುತ್ತಾರೆ. ಆದರೆ ಕಾಲಾನಂತರದಲ್ಲಿ, ಅವರ ಸ್ಥಿತಿ ಸುಧಾರಿಸುತ್ತಿದೆ. ಇವರು ಜೀವನದಲ್ಲಿ  ಏನೇ ಕೆಲಸ ಮಾಡಿದರೂ, ಶಿಸ್ತುಬದ್ಧವಾಗಿ ಮಾಡುತ್ತಾರೆ. ಅವರು ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರುವುದಿಲ್ಲ. ಬದಲಿಗೆ, ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.  


ಇದನ್ನೂ ಓದಿ : ಇಂದಿನಿಂದ ಎಚ್ಚರದಿಂದ ಇರಬೇಕು ಈ ಐದು ರಾಶಿಯವರು, ಕಷ್ಟ ನಷ್ಟ ನೀಡಲಿದ್ದಾನೆ ಬುಧ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.