ನವದೆಹಲಿ: ಆಹಾರದ ಬಣ್ಣ ಮತ್ತು ರುಚಿಯನ್ನು ಹೆಚ್ಚಿಸುವ ಸಲುವಾಗಿ ಅರಶಿನವನ್ನು (Turmeric) ಉಪಯೋಗಿಸುತ್ತೇವೆ. ಕರೋನಾ ಕಾಲದಲ್ಲಿ ಅರಶಿನ ಸೇರಿಸಿದ ಹಾಲು ಸೇವಿಸುವುದರಿಂದ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವುದನ್ನು ನಾವು ಕೇಳಿದ್ದೇವೆ.   ಆದರೆ ಅಡುಗೆ ಮನೆಯಲ್ಲಿ ಬಳಸುವ ಅರಶಿನ ಮನೆಯ ಅನೇಕ ಸಮಸ್ಯೆಗಳಿಗೂ ಪರಿಹಾರ ಅನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಹೌದು ಆರೋಗ್ಯದ ಹೊರತಾಗಿಯೂ, ಅರಶಿನವನ್ನು ಎಲ್ಲಾ ಶುಭ ಕಾರ್ಯಗಳಲ್ಲೂ ಬಳಸುತ್ತಾರೆ. ಶುಭ ಕಾರ್ಯಗಳಿಗೆ ಅರಶಿನ ಬೇಕೇ ಬೇಕು. 


COMMERCIAL BREAK
SCROLL TO CONTINUE READING

ಅರಿಶಿನವು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ : 
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಗ್ರಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ  ಅಥವಾ ಯಾವುದೇ ಆರ್ಥಿಕ ಸಮಸ್ಯೆಯಿರಲಿ,  ಸಂಬಂಧದ ನಡುವಿನ ಕಲಹವಿರಲಿ,  ಎಲ್ಲದಕ್ಕೂ ಅರಶಿನ ಪರಿಹಾರವನ್ನು ಸೂಚಿಸುತ್ತದೆ. 


ಇದನ್ನೂ ಓದಿ : Chandra Grahan 2021: ಈ ದಿನ ಸಂಭವಿಸಲಿದೆ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ?


1. ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ (Vastu Dosha) ಇದ್ದರೆ ಅಥವಾ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತಿದ್ದರೆ, ಈ ಸಮಸ್ಯೆಯನ್ನು ಹೋಗಲಾಡಿಸಲು ಅರಶಿನವನ್ನು (turmeric) ಬಳಸಬಹುದು. ಅರಿಶಿನ ಪುಡಿಯನ್ನು ಮನೆಯ ಎಲ್ಲಾ ಮೂಲೆಗಳಲ್ಲಿ ಸಿಂಪಡಿಸುತ್ತಾ ಬಂದರೆ, ವಾಸ್ತು ದೋಷ ನಿವಾರಣೆಯಾಗುತ್ತದೆಯಂತೆ.  ಹೀಗೆ ಮಾಡುತ್ತಾ ಬಂದರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆಯಂತೆ.  


2. ಇದಲ್ಲದೆ, ಪ್ರತಿ ಗುರುವಾರ (Thursday) ಮನೆಯಲ್ಲಿ ಅರಿಶಿನ ನೀರನ್ನು ಸಿಂಪಡಿಸುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ನೆಲೆಯಾಗುತ್ತದೆ. ತಾಯಿ ಲಕ್ಷ್ಮಿ (Godess Lakshmi) ಸಂತೋಷವಾಗಿರುತ್ತಾಳಂತೆ.  ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆಯಂತೆ. 


ಇದನ್ನೂ ಓದಿ : Char Dham Yatra: ಕರೋನಾ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರದ ಮಹತ್ವದ ನಿರ್ಧಾರ


3. ರಾತ್ರಿ ನಿದ್ದೆ ಮಾಡುವಾಗ ಕೆಟ್ಟ ಕನಸುಗಳು ( Dreams) ಬಂದು ನಿದ್ದೆಗೆ ತೊಂದರೆಯಾಗುತ್ತಿದ್ದರೂ ಅರಶಿನದಲ್ಲಿದೆ ಉಪಾಯ. ಅರಶಿನದ ಸಣ್ಣ ಉಂಡೆಯನ್ನು ಮಾಡಿ, ಅದನ್ನು ತಕೆಯ ಕೆಳಗಿಟ್ಟು ಮಲಗಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲವಂತೆ.. 


5. ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಅರಿಶಿನದ ತಿಲಕವಿಟ್ಟು ಮನೆ ಬಿಡುವುದು ಒಳ್ಳೆಯ ಪದ್ದತಿ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ, ಕೋಪ ಕಡಿಮೆಯಾಗುತ್ತದೆ. ಅಲ್ಲದೆ, ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನ ಬೆರೆಸಿ ಸ್ನಾನ ಮಾಡುವುದರಿಂದ ಅದೃಷ್ಟ ಒಲಿಯುತ್ತದೆಯಂತೆ. 


ಇದನ್ನೂ ಓದಿ : Thursday Remedies: ನೀವು ಗುರುವಾರ ಉಪವಾಸ ಮಾಡುತ್ತಿದ್ದರೆ ಈ ನಿಯಮಗಳನ್ನು ಅನುಸರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.