1000 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಅದ್ಭುತ ಸಂಯೋಗ ; ಗ್ರಹಗಳ ಈ ಸ್ಥಿತಿ ಯಾವುದರ ಮುನ್ಸೂಚನೆ ?
Planet Parade 2022 Date: ಸೌರವ್ಯೂಹದಲ್ಲಿ ಅನೇಕ ಬಾರಿ ಇಂತಹ ಅದ್ಭುತ ನೋಟಗಳು ಕಂಡುಬರುತ್ತವೆ. ಸುಮಾರು 1000 ವರ್ಷಗಳ ನಂತರ ಇಂತಹದೊಂದು ಕಾಕತಾಳೀಯ ನಡೆಯಲಿದ್ದು, ಇದರಲ್ಲಿ 4 ಗ್ರಹಗಳು ಪರೇಡ್ ಮಾಡುತ್ತಿರುವಂತೆ ನೇರ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ.
ಬೆಂಗಳೂರು : Planet Parade 2022 Date: 30 ಏಪ್ರಿಲ್ 2022 ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಷಯದಲ್ಲಿ ಬಹಳ ವಿಶೇಷವಾಗಿರುತ್ತದೆ. ಈ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಮಾತ್ರವಲ್ಲ ನಾಳೆ 4 ಗ್ರಹಗಳು ಒಂದೇ ಸಾಲಿನಲ್ಲಿ ಗೋಚರಿಸಲಿವೆ. ಈ ರೀತಿ ಸಾಲಿನಲ್ಲಿ ಬರುವ ಗ್ರಹಗಳ ಈ ಅದ್ಭುತ ಕಾಕತಾಳೀಯ ಸುಮಾರು 1000 ವರ್ಷಗಳ ನಂತರ ಕಾಣಿಸಲಿದೆ. ಹೀಗೆ ಒಂದೇ ರೇಖೆಯಲ್ಲಿ ಗ್ರಹಗಳು ಕಾಣಿಸಿಕೊಳ್ಳುವುದನ್ನು ಪ್ಲಾನೆಟ್ ಪೆರೇಡ್ ಎಂದು ಕರೆಯಲಾಗುತ್ತದೆ. ಏಪ್ರಿಲ್ ತಿಂಗಳ ಕೊನೆಯ ದಿನ ಶುಕ್ರ, ಮಂಗಳ, ಗುರು ಮತ್ತು ಶನಿ ಸೇರಿದಂತೆ 4 ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿದೆ. ಏಪ್ರಿಲ್ 30 ರಂದು ಸೂರ್ಯೋದಯಕ್ಕೆ ಸುಮಾರು 1 ಗಂಟೆ ಮೊದಲು, ಪೂರ್ವ ದಿಕ್ಕಿನಲ್ಲಿ ನೇರ ರೇಖೆಯಲ್ಲಿ ಈ ಗ್ರಹಗಳು ಒಟ್ಟಿಗೆ ಗೋಚರಿಸುತ್ತವೆ. ಈ ಹಿಂದೆ ಕ್ರಿ.ಶ.947ರಲ್ಲಿ ಇಂತಹ ಅದ್ಭುತ ದೃಶ್ಯ ಕಂಡಿತ್ತು.
ಪ್ಲಾನೆಟ್ ಪೆರೇಡ್ ನ ಅಪರೂಪದ ದೃಶ್ಯ:
ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುವ ಈ ಘಟನೆಗಳನ್ನು ಗ್ರಹಗಳ ಪೆರೇಡ್ ಅಥವಾ ಪ್ಲಾನೆಟ್ ಪೆರೇಡ್ ಎಂದು ಕರೆಯಲಾಗುತ್ತದೆ. ಇನ್ನೂ ವಿಸ್ತಾರವಾಗಿ ಹೇಳುವುದಾದರೆ, ಈ ಗ್ರಹಗಳ ಪರೇಡ್ ಮೂರು ವಿಧಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮೊದಲನೆಯದಾಗಿ, ಸೌರವ್ಯೂಹದ 3 ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಬಂದಾಗ. ಎರಡನೆಯದಾಗಿ, ಕೆಲವು ಗ್ರಹಗಳು ಒಂದೇ ಸಮಯದಲ್ಲಿ ಆಕಾಶದ ಸಣ್ಣ ಪ್ರದೇಶದಲ್ಲಿ ಗೋಚರಿಸಿದಾಗ. ಮೂರನೆಯದಾಗಿ, 4 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಂಡಾಗ. ಗ್ರಹಗಳ ಪರೇಡ್ ಬಹಳ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ : ಇಂದಿನಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ಕಾಟ ಆರಂಭ
ನಾಳೆ ಬಹಳ ಸಮೀಪದಲ್ಲಿ ಗೋಚರಿಸಲಿವೆ ಶುಕ್ರ ಮತ್ತು ಗುರು :
ಏಪ್ರಿಲ್ ಕೊನೆಯ ದಿನ ಅಂದರೆ ನಾಳೆ ಈ 4 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿವೆ. ಶುಕ್ರ, ಮಂಗಳ, ಗುರು ಮತ್ತು ಶನಿ ಚಂದ್ರನ ಪೂರ್ವ ದಿಗಂತದಿಂದ 30 ಡಿಗ್ರಿಯಲ್ಲಿ ಗೋಚರಿಸಬೇಕು. ಏಪ್ರಿಲ್ 30 2022 ರಂದು, ಕಾಣಿಸಿಕೊಳ್ಳುವ ಈ ದೃಶ್ಯವು ಅತ್ಯಂತ ಅದ್ಭುತವಾಗಿರುತ್ತದೆ. ಸೂರ್ಯೋದಯಕ್ಕೆ ಒಂದು ಗಂಟೆ ಮೊದಲು, ಈ ದಿನ ಅತ್ಯಂತ ಪ್ರಕಾಶಮಾನವಾದ ಗ್ರಹಗಳಾದ ಶುಕ್ರ ಮತ್ತು ಗುರುವನ್ನು ಒಟ್ಟಿಗೆ ನೋಡಬಹುದು. ಶುಕ್ರವು ಗುರುವಿನ ದಕ್ಷಿಣಕ್ಕೆ 0.2 ಡಿಗ್ರಿ ಇರುತ್ತದೆ. ಆಕಾಶವು ಶುಭ್ರವಾಗಿದ್ದು, ಮೋಡ, ಮಾಲಿನ್ಯ ಇಲ್ಲದಿದ್ದರೆ, ಈ ಗ್ರಹಗಳ ರೇಖೆಯನ್ನು ದುರ್ಬಿನ್ ಅಥವಾ ಟೆಲಿಸ್ಕೋಪ್ ಇಲ್ಲದೆ ಕೂಡಾ ವೀಕ್ಷಿಸಬಹುದು.
ಇದನ್ನೂ ಓದಿ : ಇಂದಿನಿಂದ ಕುಂಭ ರಾಶಿಯಲ್ಲಿ ಶನಿಯ ಸಂಚಾರ: ಈ ರಾಶಿಯವರಿಗೆ ಹಣದ ಸುರಿಮಳೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.