ಬೆಂಗಳೂರು : ಏಪ್ರಿಲ್ ತಿಂಗಳಿನಲ್ಲಿ ಅನೇಕ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ (Planet transit).  ರಾಹು-ಕೇತು ರಾಶಿಯು 18 ತಿಂಗಳ ನಂತರ ಏಪ್ರಿಲ್ 12 ರಂದು ರಾಶಿ ಬದಲಿಸಲಿದೆ. ಶನಿ ಮಹಾತ್ಮನು ಈ ತಿಂಗಳು ಮಕರ ರಾಶಿಯನ್ನು ಪ್ರವೇಶಿಸಲಿದ್ದಾರೆ (Saturn transit) . ದೇವಗುರು ಬೃಹಸ್ಪತಿ ಕೂಡಾ ಈ ತಿಂಗಳು ಮೀನರಾಶಿಗೆ ಪ್ರವೇಶಿಸಲಿದ್ದಾರೆ. ಇನ್ನು ಸೂರ್ಯ ಮತ್ತು ಶುಕ್ರ ಕೂಡಾ ಏಪ್ರಿಲಳ ತಿಂಗಳಲ್ಲಿ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾರೆ . ಈ ಎಲ್ಲಾ ಗ್ರಹಗಳ ರಾಶಿ ಬದಲಾವಣೆ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರಲಿದೆ. 


COMMERCIAL BREAK
SCROLL TO CONTINUE READING

ಧನು ರಾಶಿ : ಏಪ್ರಿಲ್ ಧನು ರಾಶಿಯವರಿಗೆ (Sagitarius) ಮಂಗಳಕರವಾಗಿರುತ್ತದೆ. ಈ ತಿಂಗಳು ಆರ್ಥಿಕ ಬೆಳವಣಿಗೆ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳವಾಗಲಿದೆ. ಹಣದ  ಹರಿವು ಅಧಿಕವಾಗಿರುತ್ತದೆ. ಸಾರ್ವಜನಿಕ ವಲಯದಲ್ಲಿರುವವರು ಈ ಅವಧಿಯಲ್ಲಿ ಲಾಭ ಪಡೆಯಬಹುದು. ಈ ಸಮಯವು ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.


ಇದನ್ನೂ ಓದಿ : Vastu Shastra: ಮಾಸ್ಟರ್ ಬೆಡ್‌ರೂಮ್‌ನಲ್ಲಿ ಎಂದಿಗೂ ಈ ವಸ್ತುಗಳನ್ನು ಇಡಬೇಡಿ


ಮಕರ: ಮುಂದಿನ ತಿಂಗಳು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ಅವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಆರ್ಥಿಕ ಲಾಭವಾಗಲಿದೆ. ಮಕರ ರಾಶಿಯವರು (Capricorn)ಕೆಲಸದಲ್ಲಿ ಬಡ್ತಿಯನ್ನು ಪಡೆಯುತ್ತಾರೆ.  ಸಾಲ ಕೊಟ್ಟ ಹಣ ಮರಳಿ ಬರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರದ ಹಾದಿಗಳು ತೆರೆದುಕೊಳ್ಳುತ್ತವೆ. ಹೂಡಿಕೆಗೆ ಈ ಸಮಯ ಸೂಕ್ತವಾಗಿದೆ.


ಕುಂಭ: ಕುಂಭ ರಾಶಿಯವರ (Aquarius) ಆರ್ಥಿಕ ಸ್ಥಿತಿ ಸುಧಾರಿಸಲಿದೆ.  ಹಣಕಾಸಿನ ವಿಚಾರದಲ್ಲಿ ಏಪ್ರಿಲ್ ಉತ್ತಮವಾಗಿರುತ್ತದೆ. ಈ ತಿಂಗಳಲ್ಲಿ ಹಣದ ಹರಿವು ಚೆನ್ನಾಗಿರುತ್ತದೆ. ಅನಿರೀಕ್ಷಿತ ಮೂಲಗಳಿಂದಲೂ ಹಣದ ಹರಿವು ಬರಲಿದೆ. ಯಾವುದೇ ಕೆಲಸಕ್ಕೆ ಹಾಕಿದರೂ ಯಶಸ್ಸು ಸಿಗಲಿದೆ.  ಸಾರ್ವಜನಿಕ ವಲಯದಲ್ಲಿ ಆರ್ಥಿಕ ಲಾಭವಾಗಲಿದೆ. ವ್ಯಾಪಾರದಲ್ಲಿ ಹೂಡಿಕೆಯು ಫಲ ನೀಡುತ್ತದೆ.


ಇದನ್ನೂ ಓದಿ : ಈ ನಾಲ್ಕು ರಾಶಿಯವರ ಅದೃಷ್ಟ ಬೆಳೆಗಲಿದ್ದಾನೆ ರಾಹು..!


ಮೀನ: ಆರ್ಥಿಕವಾಗಿ ಏಪ್ರಿಲ್ ಮೀನ ರಾಶಿಯವರಿಗೆ(Pisces) ಅನುಕೂಲಕರವಾಗಲಿದೆ. ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಬಹಳ ದಿನಗಳಿಂದ ಅಲಭ್ಯವಾಗಿದ್ದ ಹಣ ಈ ಅವಧಿಯಲ್ಲಿ  ಕೈ ಸೇರಲಿದೆ.  ವ್ಯವಹಾರದಲ್ಲಿ ಲಾಭದಾಯಕವಾಗಬಹುದು. ಖಾಸಗಿ ವಲಯಕ್ಕೆ ಸಂಬಂಧಿಸಿದವರು ಲಾಭ ಪಡೆಯಬಹುದು. ಸರ್ಕಾರಿ ನೌಕರರಿಗೂ (Government employee) ಈ ಸಮಯ ಅನುಕೂಲಕರವಾಗಿರುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.