Planetary Transit 2022: ಅಕ್ಟೋಬರ್ 26 ರವರೆಗೆ ಈ ರಾಶಿಗಳ ಜನರ ಪಾಲಿಗೆ ಸಮಯ ಬಂಬಾಟಾಗಿರಲಿದೆ, ಸಿಗಲಿದೆ ಬಂಪರ್ ಲಾಭ
Budh Rashi Parivartan 2022: ಬುಧ ದೇವ ತರ್ಕ, ಬುದ್ಧಿವಂತಿಕೆ, ಸಂವಹನ ಮತ್ತು ಸ್ನೇಹಕಾರಕನಾಗಿದ್ದಾನೆ. ಜಾತಕದಲ್ಲಿ ಬುಧ ಮಂಗಳಕರ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ಹಲವು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
Mercury Transit 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಆಗಸ್ಟ್ 21, 2022 ರಂದು ರಾತ್ರಿ 2 ಗಂಟೆ 14ನಿಮಿಷಕ್ಕೆ ಬುಧ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಬಳಿಕ ಆತ ಅಕ್ಟೋಬರ್ 26 ರ ಮಧ್ಯಾಹ್ನ 1 ಗಂಟೆ 55 ನಿಮಿಷಕ್ಕೆ ತುಲಾ ರಾಶಿಯಲ್ಲಿ ಗೋಚರಿಸಲಿದ್ದಾನೆ. ಆದರೆ ಬುಧನ ಪ್ರಸ್ತುತ ರಾಶಿ ಗೋಚರ ಹಲವು ರಾಶಿಗಳ ಜಾತಕದವರಿಗೆ ಬಂಬಾಟ್ ಲಾಭಗಳನ್ನು ನೀಡಲಿದೆ. ಬುಧನ ಈ ಸ್ಥಾನ ಪಲ್ಲಟ ಯಾವ ರಾಶಿಗಳ ಜನರ ಪಾಲಿಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ- ಈ ರಾಶಿಗಳ ಜಾತಕದವರ ಪಾಲಿಗೆ ಬುಧನ ಈ ಗೋಚರ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ನಿಮ್ಮ ಕಾರ್ಯಶೈಲಿಗೆ ಮೇಲಾಧಿಕಾರಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಲಿದೆ. ಗೋಚರ ಕಾಲಾವಧಿಯಲ್ಲಿ ನಿಮಗೆ ನಿಮ್ಮ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ನೌಕರಿಯ ಹುಡುಕಾಟದಲ್ಲಿರುವವರಿಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ.
ಕರ್ಕ ರಾಶಿ- ಕರ್ಕ ರಾಶಿಯ ಜಾತಕದವರ ಪಾಲಿಗೆ ಈ ಬುಧ ಗೋಚರ ಖುಷಿಗಳ ಪ್ರವಾಹವನ್ನೇ ಹರಿಸಲಿದೆ. ಈ ಅವಧಿಯಲ್ಲಿ ಸಂತಾನ ಪಕ್ಷದಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಕೌಟುಂಬಿಕ ವಾತಾವರಣ ಸಂತಸದಿಂದ ಕೂದಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿ- ಸಿಂಹ ರಾಶಿಯ ಜಾತಕದವರ ಪಾಲಿಗೆ ಬುಧ ಗೋಚರ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಅತ್ಯಧಿಕ ಧನಲಾಭವಾಗಲಿದೆ. ಕಾರ್ಯಸ್ಥಳದಲ್ಲಿ ಮೇಲಾಧಿಕಾರಿಗಳ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಇರಲಿದೆ. ಆದಾಯದಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಇದನ್ನೂ ಓದಿ-Numerology: ನಿಮ್ಮ ಜನ್ಮದಿನಾಂಕದ ಮೂಲಕ ಯಾವ ವೃತ್ತಿ ಉತ್ತಮ ಎಂದು ತಿಳಿಯಿರಿ!
ಕನ್ಯಾ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಕನ್ಯಾ ರಾಶಿಯನ್ನು ಪ್ರವೇಶಿಸಿದೆ. ಹೀಗಿರುವಾಗ ನಿಮಗೆ ಈ ಗೋಚರದಿಂದ ಭಾರಿ ಲಾಭವೇ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ನೌಕರಿ ಹಾಗೂ ಬಿಸಿನೆಸ್ ನಲ್ಲಿ ಲಾಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Guru Pushya Yog 2022: ಎರಡೂವರೆ ಸಾವಿರ ವರ್ಷಗಳ ಬಳಿಕ ನಿರ್ಮಾಣಗೊಂಡಿದೆ ಈ ಜಬರ್ದಸ್ತ್ ಯೋಗ, ಇಂದೇ ಈ ಕೆಲಸ ಮಾಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.