How to Get Rid of Mosquitoes From Home: ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿರು ಬಿಸಿಲಿನ ಜೊತೆ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ರಾತ್ರಿ ಬಿಡಿ, ಹಗಲಿನಲ್ಲಿಯೂ ಸೊಳ್ಳೆಗಳು ಕಚ್ಚುವುದರಿಂದ ಚರ್ಮ ಕೆಂಪಾಗುತ್ತದೆ. ಸೊಳ್ಳೆಗಳ ಕಾಟಕ್ಕೆ ಹಚ್ಚಿದ ಕಾಯಿಲ್ ಅಥವಾ ಅಗರಬತ್ತಿಗಳು ಹಲವು ಬಾರಿ ಕೆಲಸ ಮಾಡಲ್ಲ, ಇದರಿಂದ ಜನರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ನೀವೂ ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದು ನಾವು ನಿಮಗೆ 5 ಗಿಡಗಳ ಬಗ್ಗೆ ಹೇಳುತ್ತಿದ್ದೇವೆ, ಅವುಗಳನ್ನು ಮನೆಯಲ್ಲಿ ನೆಟ್ಟರೆ ಸೊಳ್ಳೆಗಳು ನಿಮ್ಮ ಬಳಿಯೂ ಸುಳಿಯಲ್ಲ.


COMMERCIAL BREAK
SCROLL TO CONTINUE READING

ಲ್ಯಾವೆಂಡರ್ ಸಸ್ಯ : ಆಯುರ್ವೇದ ತಜ್ಞರ ಪ್ರಕಾರ, ಲ್ಯಾವೆಂಡರ್ ಸಸ್ಯವನ್ನು ನೆಡುವುದು ಮನೆಯಲ್ಲಿ ಪರಿಮಳವನ್ನು ಹರಡಲು ಪ್ರಯೋಜನಕಾರಿಯಾಗಿದೆ. ಮನುಷ್ಯರಿಗೆ, ಈ ಸಸ್ಯದ ಸುಗಂಧವು ಆಹ್ಲಾದಕರವಾಗಿರುತ್ತದೆ, ಆದರೆ ಸೊಳ್ಳೆಗಳು ಈ ಸುಗಂಧವನ್ನು ಇಷ್ಟಪಡುವುದಿಲ್ಲ ಮತ್ತು ಅವುಗಳಿಂದ ದೂರವಿರುತ್ತವೆ. ಲ್ಯಾವೆಂಡರ್ ಗಿಡಗಳನ್ನು ನೆಟ್ಟ ಮನೆಯೊಳಗೆ ಪ್ರವೇಶಿಸಲು ಸೊಳ್ಳೆಗಳು ಹಿಂದೇಟು ಹಾಕುತ್ತವೆ.


ಇದನ್ನೂ ಓದಿ : ದೇಹವನ್ನು ನಿರ್ವಿಷಗೊಳಿಸಿ, ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುತ್ತವೆ ಈ ಎಲೆಗಳು!


ಪುದೀನಾ ಗಿಡ : ಪುದೀನಾ ಸಸ್ಯವು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಸೊಳ್ಳೆಗಳನ್ನು ಓಡಿಸಲು ಇದು ತುಂಬಾ ಸಹಾಯ ಮಾಡುತ್ತದೆ. ಅದರ ಪರಿಮಳದಿಂದಾಗಿ ಸೊಳ್ಳೆಗಳು ಮನೆಯ ಸುತ್ತಲೂ ಹಾರುವುದಿಲ್ಲ. ಪುದೀನಾ ಗಿಡದ ಕೆಲವು ಎಲೆಗಳನ್ನು ಕಿತ್ತು ಅಲ್ಲಿ ಇಲ್ಲಿ ಎಸೆಯಬೇಕು, ಇದರಿಂದ ಸುವಾಸನೆ ಹರಡುವುದರಿಂದ ಸೊಳ್ಳೆಗಳು ಓಡಿಹೋಗುತ್ತವೆ.


ರೋಸ್ಮರಿ ಗಿಡ : ಮನೆಯ ಅಂದವನ್ನು ಹೆಚ್ಚಿಸಲು ಈ ಗಿಡವನ್ನು ನೆಡಲಾಗುತ್ತದೆ. ಆದರೆ ಇದು ಮನೆಯನ್ನು ಅಲಂಕರಿಸುವುದಲ್ಲದೆ ಸೊಳ್ಳೆಗಳನ್ನು ಸಹ ನಿವಾರಿಸುತ್ತದೆ. ವಾಸ್ತವವಾಗಿ, ಸೊಳ್ಳೆಗಳು ಅದರಿಂದ ಹೊರಹೊಮ್ಮುವ ವಾಸನೆಯನ್ನು ಸಹಿಸುವುದಿಲ್ಲ ಮತ್ತು ಅವು ಆ ಸ್ಥಳದಿಂದ ಓಡಿಹೋಗುತ್ತವೆ. ನೀವು ಈ ಸಸ್ಯವನ್ನು ಮನೆಯ ಕಿಟಕಿಗಳು ಮತ್ತು ಬಾಗಿಲುಗಳ ಬಳಿ ನೆಡಬಹುದು.


ಇದನ್ನೂ ಓದಿ :  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು!


ತುಳಸಿ ಗಿಡ : ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ದಿನ ಬೆಳಗ್ಗೆಜನರು ತುಳಸಿ ಪೂಜಿಸುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ತುಳಸಿ ಪವಿತ್ರ ಮಾತ್ರವಲ್ಲ ಔಷಧೀಯ ಸಸ್ಯವೂ ಹೌದು. ತುಳಸಿ ಗಿಡದಿಂದ ಹೊರಸೂಸುವ ವಾಸನೆಯಿಂದ ಸೊಳ್ಳೆಗಳು ತೊಂದರೆಗೊಳಗಾಗುತ್ತವೆ ಮತ್ತು ಆ ಮನೆಯಿಂದ ದೂರವಿರಲು ಬಯಸುತ್ತವೆ. 


ಮಾರಿಗೋಲ್ಡ್ : ಹಳದಿ ಮತ್ತು ಕಿತ್ತಳೆ ಬಣ್ಣದ ಮಾರಿಗೋಲ್ಡ್ ಸಸ್ಯಗಳು ತುಂಬಾ ಸುಂದರವಾಗಿ ಕಾಣುತ್ತವೆ. ಪೈರೆಥ್ರಮ್ ಎಂಬ ಅಂಶವು ಈ ಸಸ್ಯದಲ್ಲಿ ಕಂಡುಬರುತ್ತದೆ, ಇದನ್ನು ಸೊಳ್ಳೆಗಳು ಸೇರಿದಂತೆ ಅನೇಕ ರೀತಿಯ ಕೀಟ ನಿವಾರಕಗಳಲ್ಲಿ ಬಳಸಲಾಗುತ್ತದೆ. ಮನೆಯ ಕಿಟಕಿ, ಬಾಗಿಲುಗಳ ಬಳಿ ಮಾರಿಗೋಲ್ಡ್ ಹೂವುಗಳಿರುವ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ಒಳಗೆ ಪ್ರವೇಶಿಸಲಾರವು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.