ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ನಿಮ್ಮ ಮನೆಯ ಈ ದಿಕ್ಕಿನಲಿರಲಿ ತುಳಸಿ ಸಸ್ಯ
Vastu Tips For Tulsi: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ಅಂತೆಯೇ, ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ತುಳಸಿ ಸಸ್ಯವನ್ನು ಸ್ಥಾಪಿಸಲು ಅಥವಾ ನೆಡಲು ಸರಿಯಾದ ದಿಕ್ಕನ್ನು ಕೂಡ ಉಲ್ಲೇಖಿಸಲಾಗಿದೆ.
Vastu Tips For Tulsi: ಭಾರತದಲ್ಲಿ ಪ್ರತಿ ಹಿಂದೂವಿನ ಮನೆಯಲ್ಲಿ ತುಳಸಿ ಸಸ್ಯ ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿ ಪವಿತ್ರ ಸಸ್ಯದ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಮನೆಯಲ್ಲಿ ಹಿರಿಯರು ನಿತ್ಯ ತುಳಸಿಗೆ ನಮಿಸುವಂತೆ, ಮುಂಜಾನೆ, ಮುಸ್ಸಂಜೆಯಲ್ಲಿ ತುಳಸಿ ಮಾತೆಗೆ ದೀಪ ಬೆಳಗಿಸುವಂತೆ ಸೂಚಿಸುತ್ತಾರೆ. ಆದರೆ, ತುಳಸಿ ಸಸ್ಯವನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಹುದೇ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
ಜ್ಯೋತಿಷ್ಯ ಶಾಸ್ತ್ರದಂತೆ, ವಾಸ್ತು ಶಾಸ್ತ್ರದಲ್ಲಿಯೂ ಕೂಡ ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮಾತ್ರವೇ ಅದರ ಸಕಾರಾತ್ಮಕ ಫಲಿತಾಂಶಗಳು ಲಭ್ಯವಾಗುತ್ತವೆ ಎಂದು ಹೇಳಲಾಗುತ್ತದೆ.
ತುಳಸಿ ಸಸ್ಯಕ್ಕೆ ಸಂಬಂಧಿಸಿದಂತೆ ವಾಸ್ತು:
ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಇಡಲು ಹಲವು ನಿಯಮಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಯಾವ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ಕೃಪೆ ಸದಾ ನೆಲೆಸುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕಾಸಿನ ತೊಂದರೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ತುಳಸಿ ಸಸ್ಯವನ್ನು ನೆಡಲು ಯಾವುದು ಸರಿಯಾದ ದಿಕ್ಕು? ಯಾವ ದಿಕ್ಕಿನಲ್ಲಿ ತುಳಸಿ ಸಸ್ಯ ನೆಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...
ಇದನ್ನೂ ಓದಿ- Tulsi Benefits : ತುಳಸಿ ಗಿಡದ ಜೊತೆ ಈ ಸಸ್ಯ ನೆಡಬೇಡಿ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ತಪ್ಪಿದಲ್ಲ!
ಮನೆಯಲ್ಲಿ ತುಳಸಿ ಸಸ್ಯವನ್ನು ನೆಡಲು ಇದು ಸರಿಯಾದ ದಿಕ್ಕು:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಒಂದೊಮ್ಮೆ ನಿಮ್ಮ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ನೆಡಲು ಸಾಧ್ಯವಾಗದಿದ್ದರೆ ಈಶಾನ್ಯ ದಿಕ್ಕಿನಲ್ಲೂ ತುಳಸಿಯನ್ನು ನೆಡಬಹುದು.
ತುಳಸಿ ಗಿಡ ನೆಡಲು ಈ ದಿನ ತುಂಬಾ ಶ್ರೇಷ್ಠ:
ವಾರದ ಬೇರೆ ದಿನಗಳಿಗಿಂತ ಗುರುವಾರದಂದು ತುಳಸಿ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು. ಈ ದಿನದಂದು ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ತಾಯಿ ಮಹಾಲಕ್ಷ್ಮಿಯ ಕೃಪೆ ದೊರೆಯುತ್ತದೆ. ವಿಶ್ನುಜ್ವಿನ ಅನುಗ್ರಹ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಬಯಸುವವರು ಶನಿವಾರ ತುಳಸಿ ಸಸ್ಯವನ್ನು ನೆಡಬಹುದು.
ಇದನ್ನೂ ಓದಿ- Vastu Tips: ಮನೆಯ ಈ ದಿಕ್ಕಿನಲ್ಲಿ ಟಿವಿ ಇಡುವುದರಿಂದ ಧನ ನಷ್ಟ
ಮನೆಯ ಈ ಭಾಗದಲ್ಲಿ ಅಪ್ಪಿತಪ್ಪಿಯೂ ತುಳಸಿ ಸಸ್ಯವನ್ನು ನೆಡಬೇಡಿ:
* ವಾಸ್ತು ಪ್ರಕಾರ, ಮನೆಯ ದಕ್ಷಿಣ ಮತ್ತು ನೈಋತ್ಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ತುಳಸಿ ಸಸ್ಯವನ್ನು ನೆಡಬಾರದು.
* ಇದಲ್ಲದೆ, ಮಾನ್ಯ ಪೂರ್ವ ದಿಕ್ಕಿನಲ್ಲಿಯೂ ಕೂಡ ತುಳಸಿಯನ್ನು ನೆಡಬಾರದು. ಮನೆಯ ಪೂರ್ವ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಅಂತಹ ಮನೆಯಲ್ಲಿ ಮನೆಯ ಮುಖ್ಯಸ್ಥ ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
* ಮನೆಯ ಮೇಲ್ಚಾವಣಿಯಲ್ಲಿ ತುಳಸಿ ಸಸ್ಯವನ್ನು ನೆಡಬಾರದು. ಇದರಿಂದ ಅತ್ನಹ ಮನೆಯಲ್ಲಿ ವ್ಯಕ್ತಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.