Bedroom plants: ಉತ್ತಮ ನಿದ್ರೆಗೆ ಬೆಡ್ ರೂಮ್ನಲ್ಲಿ ಈ 5 ಗಿಡಗಳನ್ನು ಇರಿಸಿ.!
best plants for bedroom: ನಿಮ್ಮ ಮಲಗುವ ಕೋಣೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಇಟ್ಟರೆ ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.
Plants For Good Sleep: ಮನೆಯಲ್ಲಿ ಹಲವಾರು ಗಿಡಗಳನ್ನು ನೆಡುತ್ತೇವೆ. ವಿಶೇಷವಾಗಿ ತುಳಸಿ, ಅಲೋವೆರಾ, ಮನಿ ಪ್ಲಾಂಟ್ ಎಲ್ಲರ ಮನೆಯಲ್ಲೂ ಇರುತ್ತವೆ. ಈ ರೀತಿ ಗಿಡಗಳನ್ನು ಇಡುವುದರಿಂಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಇವು ಆಧ್ಯಾತ್ಮಿಕವಾಗಿ ತುಂಬಾ ಒಳ್ಳೆಯ ಸಸ್ಯಗಳಾಗಿವೆ. ನಿಮ್ಮ ಮಲಗುವ ಕೋಣೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಇಟ್ಟರೆ ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.
ಇಂದು ಹೆಚ್ಚಿನ ಜನರು ತೀವ್ರ ಒತ್ತಡ, ಕೆಲಸ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಇದು ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿದ್ರಾಹೀನತೆಯು ಖಿನ್ನತೆ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳಿಗೆ ಕೆಲವು ಔಷಧಗಳನ್ನೂ ವೈದ್ಯರು ಬರೆದುಕೊಡುತ್ತಾರೆ.
ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ಇಟ್ಟುಕೊಳ್ಳುವುದರಿಂದ ಸ್ವಾಭಾವಿಕವಾಗಿ ಉತ್ತಮ ನಿದ್ದೆ ಬರುತ್ತದೆ. ಮಲಗುವ ಕೋಣೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಇರಿಸಿದರೆ ನಿದ್ರಾಹೀನತೆಯ ಸಮಸ್ಯೆಗಳು ನಿಮಗೆ ಬರುವುದಿಲ್ಲ.
ಸ್ನೇಕ್ ಪ್ಲ್ಯಾಂಟ್: ಮನೆಯಲ್ಲಿ ಸ್ನೇಕ್ ಪ್ಲ್ಯಾಂಟ್ ಇಡುವುದರಿಂದ ಸುತ್ತಮುತ್ತಲಿನ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ. ಇದು ಮನೆಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಸ್ನೇಕ್ ಪ್ಲ್ಯಾಂಟ್ ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಮಲಗುವ ಕೋಣೆಯಲ್ಲಿ ಸ್ನೇಕ್ ಪ್ಲ್ಯಾಂಟ್ ಇಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.
ಪೀಸ್ ಲಿಲಿ: ಇದು ನೋಡಲು ಬಹಳ ಸುಂದರವಾದ ಸಸ್ಯವಾಗಿದೆ. ಈ ಸಸ್ಯಕ್ಕೆ ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುವ ಶಕ್ತಿಯೂ ಇದೆ. ಪೀಸ್ ಲಿಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಸುತ್ತಮುತ್ತಲಿನ ವಾತಾವರಣವೂ ಆರಾಮದಾಯಕವಾಗಿ ಇರಿಸುತ್ತದೆ.
ಇಂಗ್ಲಿಷ್ ಐವಿ ಪ್ಲಾಂಟ್: ನಾವು ಮಲಗುವ ಕೋಣೆಯನ್ನು ಸುಂದರವಾಗಿ ಅಲಂಕರಿಸುತ್ತೇವೆ. ಈ ಇಂಗ್ಲಿಷ್ ಐವಿ ಪ್ಲಾಂಟ್ ಮನೆಯಲ್ಲಿ ಇರಿಸುವುದರಿಂದ ಸುತ್ತಮುತ್ತಲಿನ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ಅಲೋವೆರಾ: ಇದು ನಮ್ಮ ಮನೆಯ ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದರಲ್ಲಿ ಹಲವು ಔಷಧೀಯ ಗುಣಗಳೂ ಇವೆ. ಅಲೋವೆರಾ ಗಾಳಿಯಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.
ಮಲ್ಲಿಗೆ: ಜಾಸ್ಮಿನ್ ಸಸ್ಯವು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುವಲ್ಲಿ ಸಹ ಪರಿಣಾಮಕಾರಿಯಾಗಿದೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತವೆ. ಅವುಗಳ ಸುವಾಸನೆಯು ನಿಮಗೆ ಚೆನ್ನಾಗಿ ನಿದ್ರೆ ಬರುವಂತೆ ಮಾಡುತ್ತದೆ. ಈ ಹೂವುಗಳು ಬಿಳಿ ಬಣ್ಣದಲ್ಲಿರುತ್ತವೆ.
ಇದನ್ನೂ ಓದಿ: ಈ ಕಾಳು ನೆನೆಸಿಟ್ಟ ನೀರು ಕುಡಿದರೆ ರಕ್ಕದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗಿ ಹೋಗುವುದು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.