Health Tips: ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ
ದಾಳಿಂಬೆ ಸಿಪ್ಪೆಯ ಪುಡಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ.
ನವದೆಹಲಿ: ದಾಳಿಂಬೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಬಹುತೇಕರು ದಾಳಿಂಬೆ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಅದರ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹೌದು, ದಾಳಿಂಬೆ ಸಿಪ್ಪೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ(Pomegranate Peel Benefits)ಯಾಗಿದೆ. ಇದನ್ನು ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ಚರ್ಮದ ಆರೈಕೆಗಾಗಿ
ದಾಳಿಂಬೆ ಸಿಪ್ಪೆ(Pomegranate Peel)ಯು ಸೂರ್ಯನ ಕಿರಣಗಳನ್ನು ತಡೆಯುವ ಏಜೆಂಟ್‌ಗಳನ್ನು ಹೊಂದಿದೆ. ಇದು ನಿಮ್ಮ ಚರ್ಮವನ್ನು ಹಾನಿಕಾರಕ UVA ಕಿರಣಗಳಿಂದ ರಕ್ಷಿಸುತ್ತಾರೆ. ಇದು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಸಿಪ್ಪೆಯ ಬಳಕೆಯು ಸನ್‌ಟಾನ್ ಅನ್ನು ಸಹ ತೆಗೆದುಹಾಕುತ್ತದೆ. ಇದಕ್ಕಾಗಿ ಬಿಸಿಲಿನಲ್ಲಿ ಒಣಗಿದ ದಾಳಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಸಂಗ್ರಹಿಸಿ. ಈ ಪುಡಿಯನ್ನು ನಿಮ್ಮ ಲೋಷನ್ ಅಥವಾ ಕೆನೆಯೊಂದಿಗೆ ಬೆರೆಸಿ ಮತ್ತು ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು ಅದನ್ನು ಹಚ್ಚಿಕೊಳ್ಳಿ.
ಇದನ್ನೂ ಓದಿ: Banana Shake: ನೀವೂ ಬಾಳೆಹಣ್ಣಿನ ಶೇಕ್ ಕುಡಿತೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ
ದಾಳಿಂಬೆ ಸಿಪ್ಪೆಗಳು ನಿಮ್ಮ ಚರ್ಮದಲ್ಲಿನ ಕಾಲಜನ್ ನಾಶವನ್ನು ತಡೆಯುತ್ತದೆ ಮತ್ತು ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಯಸ್ಸಾದ ಮತ್ತು ಸುಕ್ಕುಗಳ ಲಕ್ಷಣ(Skin Care)ಗಳನ್ನು ಕಡಿಮೆ ಮಾಡುತ್ತದೆ. 2 ಚಮಚ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಮಿಶ್ರಣ ಮಾಡಿ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಹಾಲಿನ ಬದಲಿಗೆ ರೋಸ್ ವಾಟರ್ ಅನ್ನು ಪುಡಿಯಲ್ಲಿ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದರ ಸಿಪ್ಪೆಗಳನ್ನು ಬಳಸುವುದು ನೈಸರ್ಗಿಕ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ.
ಬಾಯಿಯ ಆರೋಗ್ಯಕ್ಕಾಗಿ
ದಾಳಿಂಬೆ ಸಿಪ್ಪೆಯು ಬಾಯಿಯ ದುರ್ವಾಸನೆ, ಜಿಂಗೈವಿಟಿಸ್ ಮತ್ತು ಬಾಯಿ ಹುಣ್ಣುಗಳನ್ನು ತೆಗೆದುಹಾಕಲು ಪರಿಣಾಮಕಾರಿ ಮಾರ್ಗವಾಗಿದೆ. ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಈ ಮಿಶ್ರಣದಿಂದ ಗಾರ್ಗ್ಲ್ ಮಾಡಿ. ಇದರಿಂದ ಅನೇಕ ರೀತಿಯ ಆರೋಗ್ಯಕಾರಿ ಪ್ರಯೋಜನಗಳು ನಿಮಗೆ ಲಭಿಸುತ್ತವೆ.
ಹೃದಯದ ಆರೋಗ್ಯಕ್ಕಾಗಿ
ದಾಳಿಂಬೆ(Pomegranate) ಸಿಪ್ಪೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ನಿಮ್ಮನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ದಾಳಿಂಬೆ ಸಿಪ್ಪೆಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ರಕ್ತದೊತ್ತಡ ಎರಡನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಕುಡಿಯಿರಿ.
ಇದನ್ನೂ ಓದಿ: ಗಡ್ಡ-ಮೀಸೆಯ ಕೂದಲು ಬೆಳ್ಳಗಾಗುತ್ತಾ?: ಈ 5 ಮನೆಮದ್ದುಗಳಿಂದ ಕಪ್ಪಾಗಿಸಬಹುದು
ಕೂದಲನ ಆರೋಗ್ಯಕ್ಕೆ
ದಾಳಿಂಬೆ ಸಿಪ್ಪೆಯ ಪುಡಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.