Potato face pack: ಮುಖದ ಸೌಂದರ್ಯ ಮತ್ತು ಚರ್ಮದ ಆರೈಕೆ ಆರೋಗ್ಯದಷ್ಟೇ ಮುಖ್ಯ. ಚರ್ಮವನ್ನು ರಕ್ಷಿಸಲು ಹಲವು ಮಾರ್ಗಗಳಿವೆ. ಇತ್ತೀಚಿನ ದಿನಗಳಲ್ಲಿ ತ್ವಚೆಯ ತೇವಾಂಶ ಕಳೆದುಕೊಳ್ಳುವುದು, ನಿಸ್ತೇಜತೆ, ಮುಖದಲ್ಲಿ ಸುಕ್ಕುಗಳು, ಮೊಡವೆಗಳು, ಕಪ್ಪು ಕಲೆಗಳು, ಟ್ಯಾನಿಂಗ್ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ತ್ವಚೆಯು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ವಾಯು ಮಾಲಿನ್ಯ, ಆಹಾರ ಪದ್ಧತಿ, ಸಾಕಷ್ಟು ನೀರು ಕುಡಿಯದಿರುವುದು, ನಿದ್ರೆಯ ಕೊರತೆ ಹಲವು ಕಾರಣಗಳು ಇದಕ್ಕೆಲ್ಲ ಕಾರಣವಾಗಬಹುದು. 


COMMERCIAL BREAK
SCROLL TO CONTINUE READING

ಮುಖದ ಸೌಂದರ್ಯ ಮತ್ತು ತ್ವಚೆಯ ಆರೈಕೆಗಾಗಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಲಭ್ಯವಿದ್ದರೂ ಅವುಗಳಲ್ಲಿರುವ ರಾಸಾಯನಿಕಗಳಿಂದಾಗಿ ಅನೇಕ ಅಡ್ಡ ಪರಿಣಾಮಗಳಿವೆ. ಅದಕ್ಕಾಗಿಯೇ ಚರ್ಮದ ಆರೈಕೆಯಲ್ಲಿ ಸಾಧ್ಯವಾದಷ್ಟು ನೈಸರ್ಗಿಕ ಪದಾರ್ಥಗಳನ್ನು ಬಳಸಬೇಕು. ಇಂದು ನಾವು ಮುಖದ ಸೌಂದರ್ಯ ಹೆಚ್ಚಿಸಲು ಆಲೂಗಡ್ಡೆ ಫೇಸ್‌ಪ್ಯಾಕ್‌ ಬಗ್ಗೆ ಹೇಳಲಿದ್ದೇವೆ. ಆಲೂಗೆಡ್ಡೆ ಫೇಸ್ ಪ್ಯಾಕ್ ಮುಖದಲ್ಲಿರುವ ಎಲ್ಲಾ ಕಲೆಗಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ತ್ವಚೆಯನ್ನು ನಯವಾಗಿಸುತ್ತದೆ.


ಇದನ್ನೂ ಓದಿ: ಈ 8 ಅಭ್ಯಾಸಗಳು ನಿಮ್ಮ ಮುಖದ ಮೇಲೆ ಮೊಡವೆಗಳಿಗೆ ಕಾರಣವಾಗಬಹುದು..!


ತ್ವಚೆಯ ಆರೈಕೆಗೆ ಆಲೂಗಡ್ಡೆ ಫೇಸ್ ಪ್ಯಾಕ್ ಉತ್ತಮವಾಗಿದೆ. ಆಲೂಗಡ್ಡೆ ಅನ್ನು ಸರಿಯಾದ ರೀತಿಯಲ್ಲಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಆಲೂಗೆಡ್ಡೆಯಲ್ಲಿರುವ ಆ್ಯಂಟಿ ಏಜಿಂಗ್ ಗುಣದಿಂದಾಗಿ ಮುಖದ ಮೇಲಿನ ಸುಕ್ಕುಗಳೂ ಮಾಯವಾಗುತ್ತವೆ. ಕಣ್ಣುಗಳ ಕೆಳಗೆ ಇರುವ ಡಾರ್ಕ್‌ ಸರ್ಕಲ್‌ಗಳನ್ನು ಕೂಡ ಆಲೂಗಡ್ಡೆ ಫೇಸ್‌ ಪ್ಯಾಕ್‌ ಹೋಗಲಾಡಿಸುತ್ತದೆ. ಈ ಫೇಸ್ ಪ್ಯಾಕ್ ನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.


ಜೇನು ತುಪ್ಪ ಮತ್ತು ಆಲೂಗಡ್ಡೆಯ ಸಂಯೋಜನೆಯು ಕಲೆಗಳನ್ನು ತೊಡೆದುಹಾಕಲು ಮತ್ತು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಲು ಅತ್ಯುತ್ತಮ ಮಾರ್ಗವಾಗಿದೆ. ಒಂದು ಬಟ್ಟಲಿನಲ್ಲಿ 1 ಚಮಚ ಆಲೂಗಡ್ಡೆ ರಸ, 1 ಚಮಚ ಜೇನುತುಪ್ಪ, 2 ಚಮಚ ಹಸಿ ಹಾಲು ಸೇರಿಸಿ ಮಿಶ್ರಣ ಮಾಡಿ. ಕೆಲವು ಹನಿ ಗ್ಲಿಸರಿನ್ ಸೇರಿಸಿದರೆ ಇನ್ನೂ ಒಳ್ಳೆಯದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ವಾರದಲ್ಲಿ 3 ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಮುಖದಲ್ಲಿ ಯಾವುದೇ ಕಲೆಗಳು ಇರದೇ, ಕ್ಲೀನ್‌ ಆಂಡ್‌ ಕ್ಲಿಯರ್‌ ಫೇಸ್‌ ನಿಮ್ಮದಾಗುತ್ತದೆ.


ಇದನ್ನೂ ಓದಿ: White Hair: 15 ದಿನದಲ್ಲಿ ಬಿಳಿಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಮನೆಮದ್ದು.!


ಮುಲ್ತಾನಿ ಮಿಟ್ಟಿ ಮತ್ತು ಸಿಹಿ ಗೆಣಸಿನ ಫೇಸ್‌ ಪ್ಯಾಕ್‌ ಕೂಡ ಅದ್ಭುತ ಪರಿಣಾಮ ಬೀರುತ್ತದೆ. ಒಂದು ಬಟ್ಟಲಿನಲ್ಲಿ 2 ಚಮಚ ಮುಲ್ತಾನಿ ಮಿಟ್ಟಿ ಮತ್ತು ಆಲೂಗಡ್ಡೆ ರಸವನ್ನು ತೆಗೆದುಕೊಳ್ಳಿ. ಇವೆರಡನ್ನೂ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ಈ ಫೇಸ್ ಪ್ಯಾಕ್ ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಸುಕ್ಕುಗಳನ್ನೂ ಕಡಿಮೆ ಮಾಡುತ್ತದೆ.


ಟೊಮೆಟೊ ರಸ ಮತ್ತು ಆಲೂಗಡ್ಡೆ ಫೇಸ್‌ ಪ್ಯಾಕ್‌ ಕೂಡ ತ್ವಚೆಯ ಆರೈಕೆಗೆ ಉತ್ತಮ. ಇದಕ್ಕಾಗಿ, ಒಂದು ಬೌಲ್‌ನಲ್ಲಿ 1 ಚಮಚ ಟೊಮೆಟೊ ರಸ, 2 ಚಮಚ ಜೇನುತುಪ್ಪ ಮತ್ತು 1 ಚಮಚ ಆಲೂಗಡ್ಡೆ ರಸವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಇರಿಸಿ. ಈ ಫೇಸ್‌ ಪ್ಯಾಕ್‌ನಿಂದ ಮುಖದ ಮೇಲಿನ ಮೊಡವೆಗಳು ಕಡಿಮೆಯಾಗುತ್ತವೆ. 


ಇದನ್ನೂ ಓದಿ: ನೈಸರ್ಗಿಕವಾಗಿ ಕಾಂತಿಯುತ ತ್ವಚೆ ಪಡೆಯಲು ಮೆಂತ್ಯಕಾಳನ್ನು ಈ ರೀತಿ ಬಳಸಿ


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.