ಬೆಂಗಳೂರು : Premature White Hair Problem Solution: ಇತ್ತೀಚಿನ ದಿನಗಳಲ್ಲಿ 25 ರಿಂದ 30 ವರ್ಷ ವಯಸ್ಸಿನ ಯುವಕರು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಬಿಳಿ ಕೂದಲು ಸಾಮಾನ್ಯವಾಗಿ ಕೆಲವೊಮ್ಮೆ ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಉಂಟು ಮಾಡುತ್ತದೆ.  ಕೆಲವರು ಬಿಳಿ ಕೂದಲು ಕಂಡ ಕೂಡಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಕಲರ್ ಬಳಸಲು ಆರಂಭ ಮಾಡುತ್ತಾರೆ. ಆದರೆ ಇದು ಶಾಶ್ವತ ಪರಿಹಾರ ನೀಡುವುದಿಲ್ಲ. ಅಲ್ಲದೆ, ಕೂದಲಿನ ಆರೋಗ್ಯವನ್ನು ಕೂಡಾ ಕೆಡಿಸುತ್ತದೆ. ಯಾಕೆಂದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕವಿರುತ್ತದೆ. ಇದಕ್ಕಾಗಿ  ಮನೆಯಲ್ಲಿಯೇ ಕುಳಿತು ಕೆಲವು ಸುಲಭ ಉಪಾಯಗಳನ್ನು ಮಾಡಬಹುದು. ಈ ಮನೆ ಮಫ್ದು ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದಲ್ಲದೆ, ಮತ್ತೆ ಬಿಲಿಕುದಳು ಬೆಳೆಯದಂತೆ ಕೂಡಾ ತಡೆಯುತ್ತದೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಕೂದಲು ಹಣ್ಣಾಗಲು ಪ್ರಾರಂಭಿಸಿದಾಗ, ಆ ಕೂದಲನ್ನು ಕೀಳಲು ಆರಂಭಿಸುತ್ತಾರೆ. ಅಥವಾ ರಾಸಾಯನಿಕ ಆಧಾರಿತ  ಹೇರ್ ಕಲರ್ ಬಳಸುತ್ತಾರೆ. ಈ ಎರಡೂ ಕ್ರಮಗಳಿಂದಲೂ ಕೂದಲಿಗೆ ಹಾನಿಯಾಗುತ್ತದೆ.   


ಇದನ್ನೂ ಓದಿ : ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ ಈ ಒಂದು ತರಕಾರಿ


ಚಿಕ್ಕ ವಯಸ್ಸಿನಲ್ಲಿ ಕೂದಲು ಏಕೆ ಬೆಳ್ಳಗಾಗುತ್ತದೆ ? : 
ಕೂದಲಿನ ಸಮಸ್ಯೆಯು ಆನುವಂಶಿಕ ಕಾರಣಗಳಿಂದ ಕೂಡ ಇರಬಹುದು. ಆದರೆ ಇದಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಆಹಾರ ಪದ್ಧತಿ. ಪೌಷ್ಠಿಕಾಂಶ ಮತ್ತು ಆರೈಕೆಯ ಕೊರತೆಯಿಂದಾಗಿ, ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗಲು ಪ್ರಾರಂಭಿಸುತ್ತದೆ. ಅಂದಹಾಗೆ, ಕೂದಲು ಹಣ್ಣಾಗಲು ಮಾನಸಿಕ ಒತ್ತಡವೂ ಒಂದು ಕಾರಣವಾಗಿದೆ. 


ಬಿಳಿ ಕೂದಲನ್ನು ಹೀಗೆ ಕಪ್ಪಾಗಿಸಿ :
1. ಕರಿಬೇವಿನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ, ಕೂದಲಿಗೆ  ಔಷಧಿಗಿಯಾಗಿಯೂ ಬಳಕೆಯಾಗುತ್ತದೆ. ಇದರ ಎಲೆಗಳನ್ನು ರುಬ್ಬಿದ ನಂತರ ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ಈ ಪೇಸ್ಟ್ ಅನ್ನು ಹಾಕಿ  ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ. 


ಇದನ್ನೂ ಓದಿ : Monsoon Food Tips : ಮಳೆಗಾಲದಲ್ಲಿ ಹುಳಿ ಪದಾರ್ಥ ಸೇವನೆ ಆರೋಗ್ಯಕ್ಕೆ ಎಷ್ಟು ಲಾಭ? ಇಲ್ಲಿದೆ ನೋಡಿ


2. ಈರುಳ್ಳಿಯನ್ನು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ, ಕೂದಲಿನ ಬೇರುಗಳಿಗೆ ಈರುಳ್ಳಿ ರಸವನ್ನು ಲೇಪಿಸಿದರೆ, ಬಿಳಿ ಕೂದಲು ಮತ್ತೆ ಕಪ್ಪಾಗುವುದು ಮಾತ್ರವಲ್ಲದೆ ಕೂದಲು ಉದುರುವಿಕೆಯಿಂದ ಕೂಡಾ ಮುಕ್ತಿ ಪಡೆಯುತ್ತದೆ.


3. ಟೊಮ್ಯಾಟೊ ಮತ್ತು ಮೊಸರನ್ನು ಒಟ್ಟಿಗೆ ಮಿಕ್ಸರ್ ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ,. ಪೇಸ್ಟ್ ಸಿದ್ಧವಾದಾಗ, ಅದಕ್ಕೆ ನೀಲಗಿರಿ ಎಣ್ಣೆಯನ್ನು ಸೇರಿಸಿ ಮತ್ತು ಕೂದಲಿಗೆ ಮಸಾಜ್ ಮಾಡಿ.  ಹೀಗೆ ಮಾಡಿದರೆ ಬೆಳ್ಳಗಿರುವ ಕೂದಲು ಕಪ್ಪಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ