ನವದೆಹಲಿ : ಜ್ಯೋತಿಷ್ಯದಂತೆಯೇ (Astrology) ಸಂಖ್ಯಾಶಾಸ್ತ್ರವೂ (Numerology) ವ್ಯಕ್ತಿಯ ನಡವಳಿಕೆ ಮತ್ತು ಭವಿಷ್ಯವನ್ನು ಹೇಳುತ್ತದೆ. ಇದರ ಮಾಹಿತಿಯು ವ್ಯಕ್ತಿಯ ಮೂಲಾಂಕದಿಂದ ಸಿಗುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 15 ರಂದು ಜನಿಸಿದರೆ, ಅವನ ಮೂಲಾಂಕ 6 ಆಗಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ, 1 ರಿಂದ 9 ರವರೆಗಿನ ಆಳುವ ಗ್ರಹಗಳು ಮತ್ತು ವ್ಯಕ್ತಿಯ ಮೇಲೆ ಅವುಗಳ ಪ್ರಭಾವವನ್ನು ಹೇಳಲಾಗಿದೆ. ಮೂಲಾಂಕ 8 ರಲ್ಲಿ ಜನಿಸಿದವರ ವಿಶೇಷತೆಗಳ ಬಗ್ಗೆ ನಾವು ಇಲ್ಲಿ ಹೇಳಲಿದ್ದೇವೆ.  ಯಾವುದೇ ತಿಂಗಳ 8, 17 ಅಥವಾ 26 ರಂದು ಜನಿಸಿದವರ ಮೂಲಾಂಕ 8 ಆಗಿರುತ್ತದೆ. 


COMMERCIAL BREAK
SCROLL TO CONTINUE READING

ಮೂಲಾಂಕ 8ರ ಜನ ನಿಗೂಢವಾಗಿರುತ್ತಾರೆ :
ಶನಿಯು (Shani) ಮೂಲಾಂಕ 8ರ ಅಧಿಪತಿ. ಈ ಮೂಲಾಂಕ ಹೊಂದಿರುವ ಜನರು ನಿಗೂಢ ಸ್ವಭಾವದವರು. ಅವರು ಯಾವಾಗ ಏನು ಮಾಡುತ್ತಿದ್ದಾರೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಈ ಜನರು ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ. ಅವರು ತಮ್ಮ ರಹಸ್ಯಗಳನ್ನು ಯಾರಿಗೂ ಹೇಳುವುದಿಲ್ಲ. 


ಇದನ್ನೂ ಓದಿ :  Addictions of zodiac signs:ಚಾಲೆಂಜ್ ತೆಗೆದುಕೊಳ್ಳುವುದೇ ಈ ರಾಶಿಯವರ ಅಡಿಕ್ಷನ್!


ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ :
ವೈವಾಹಿಕ ಜೀವನವು (Married life) ಯಾವಾಗಲೂ ಉತ್ತಮವಾಗಿಯೇ ನಡೆಯುವುದು ಕೆಲವರ ಜೀವನದಲ್ಲಿ ಮಾತ್ರ. ನ್ನು ಕೆಲವರ ವೈವಾಹಿಕ ಜೀವನದಲ್ಲಿ ಬರೀ ಸಮಸ್ಯೆಗಳನ್ನೇ ಎದುರಿಸುತ್ತಿರುತ್ತಾರೆ.  ಮೂಲಾಂಕ 8 ರ ಜನರು  ಗುಂಪಿನಲ್ಲಿ ಸೇರುತ್ತಾರೆ. ಇವರ ಜೀವನದಲ್ಲಿ ಪ್ರೀತಿ (love life) ಕೂಡಾ ಬಹಳ ಕಾಲ ಉಳಿಯುವುದಿಲ್ಲ. ಇವರ  ಮದುವೆ ಕೂಡಾ ತಡವಾಗಿ ಆಗುತ್ತದೆ. ಮದುವೆಯ ನಂತರವೂ ತಮ್ಮ ಸೋಮಾರಿತನ, ಹಠಮಾರಿತನ, ಅಹಂಕಾರ ಮತ್ತು ರಹಸ್ಯಗಳನ್ನು ಮರೆಮಾಚುವ ಗುಣಗಳಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ.  


ಕಬ್ಬಿಣದ ಕೆಲಸ ಅಥವಾ ಎಂಜಿನಿಯರಿಂಗ್ ವೃತ್ತಿ :
ಮೂಲಾಂಕ 8ರ ಜನರು ಸಾಮಾನ್ಯವಾಗಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನ ಆರಂಭಿಸಬಹುದು. ಸ್ವಂತ  ಉದ್ಯೋಗ ಮಾಡುವುದಾದರೆ, ಕಬ್ಬಿಣ, ನಿರ್ಮಾಣ ವಸ್ತುಗಳಿಗೆ ಸಂಬಂಧಿಸಿದ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ. ಈ ಮೂಲಾಂಕದ ಜನರು ತಂತ್ರ-ಮಂತ್ರ, ಜ್ಯೋತಿಷ್ಯ ಶಾಸ್ತ್ರದಲ್ಲೂ (Astrology) ಪ್ರವೀಣರಾಗಿರಬಹುದು. ಇನ್ನು ಸರ್ಕಾರಿ ಕೆಲಸದ ಬಗ್ಗೆ ಯೋಚಿಸುವುದಾದರೆ, ಪೊಲೀಸ್ (Police) ಅಥವಾ ಸೈನ್ಯಕ್ಕೆ ಸೇರಬಹುದು. ಈ ಮೂಲಾಂಕ ಹೊಂದಿರುವವರು ಪ್ರತಿನಿತ್ಯ ಗಣಪತಿಯನ್ನು ಪೂಜಿಸಿ,  ಪ್ರಾಣಿಗಳಿಗೆ ಆಹಾರ ನೀಡಬೇಕು. ಹೀಗೆ ಮಾಡಿದರೆ ಅವರ ಭಾಗ್ಯ ಬೆಳಗುತ್ತದೆ. 


ಇದನ್ನೂ ಓದಿ : ನಿಮ್ಮನ್ನು ಮೂರ್ಖರೆಂದು ಸಾಬೀತು ಮಾಡಿಬಿಡುತ್ತಾರೆ ಈ ರಾಶಿಯ ವರು, ಇವರಿಂದ ಅಂತರ ಕಾಯ್ದುಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ