Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!
2023ರಲ್ಲಿ ರಾಹು ಸಂಕ್ರಮಣ: ಮುಂದಿನ ವರ್ಷ ರಾಹು ಗ್ರಹ ಬೇರೆ ರಾಶಿಗೆ ಸಂಚರಿಸಲಿದೆ. ಈ ಸಂಚಾರದಿಂದ ನಿರ್ದಿಷ್ಟ ರಾಶಿಯ ಜನರ ಜೀವನದಲ್ಲಿ ಬಹಳಷ್ಟು ಏರುಪೇರುಗಳು ಉಂಟಾಗುತ್ತವೆ. ಇದರಿಂದ ಯಾವ ರಾಶಿಯವರಿಗೆ ಲಾಭ-ನಷ್ಟ ಅನ್ನೋದನ್ನು ತಿಳಿಯಿರಿ.
ನವದೆಹಲಿ: ರಾಹು ಮತ್ತು ಕೇತುಗಳನ್ನು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಕ್ರೋಧಗಳೆಂದು ಪರಿಗಣಿಸಲಾಗುತ್ತದೆ. ರಾಹು-ಕೇತುಗಳು ಒಮ್ಮೆ ಯಾರ ಮೇಲಾದರೂ ಕೋಪಗೊಂಡರೆ ಅವರನ್ನು ವಿನಾಶದಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ. ಇವುಗಳಲ್ಲಿ ರಾಹು ಯಾವಾಗಲೂ ಹಿಮ್ಮುಖ ಚಲನೆಯಲ್ಲಿ ಉಳಿಯುತ್ತಾನೆ ಮತ್ತು ಒಂದೂವರೆ ವರ್ಷಗಳ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
ಪ್ರಸ್ತುತ ರಾಹು ಗ್ರಹವು ಹಿಮ್ಮುಖ ಚಲನೆಯಲ್ಲಿದ್ದು, ಮೇಷ ರಾಶಿಯಲ್ಲಿದೆ. ಅದು 2023ರ ಅಕ್ಟೋಬರ್ 30ರಂದು ಹಿಮ್ಮುಖವಾಗಿ ಚಲಿಸಲಿದ್ದು, ಮೀನ ರಾಶಿಯನ್ನು ಪ್ರವೇಶಿಸಲಿದೆ. ರಾಹುವಿನ ಈ ವಿಶೇಷ ಸ್ಥಾನವು ಕುಂಭ ರಾಶಿಯವರಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದರಿಂದ ಕುಂಭ ರಾಶಿಯವರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದನ್ನು ತಿಳಿಯಿರಿ.
ಜ್ಯೋತಿಷಿಗಳ ಪ್ರಕಾರ ರಾಹು ಗ್ರಹವು 2023ರ ಅಕ್ಟೋಬರ್ 30ರ ವೇಳೆಗೆ ಕುಂಭ ರಾಶಿಯ 3ನೇ ಮನೆಯಲ್ಲಿ ಸಾಗಲಿದೆ. ಈ 3ನೇ ಮನೆಯು ಸಣ್ಣ ಪ್ರಯಾಣವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸಹೋದರ-ಸಹೋದರಿಯರೊಂದಿಗಿನ ಸಂಬಂಧಗಳೊಂದಿಗೆ ಸಂಬಂಧ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕುಂಭ ರಾಶಿಯವರು ರಾಹು ಸಂಕ್ರಮಣದಿಂದ ಜಾಗರೂಕರಾಗಿರಬೇಕು.
ಇದನ್ನೂ ಓದಿ: Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ
ಸಂಬಂಧಗಳ ಮೇಲೆ ಪರಿಣಾಮ ಸಾಧ್ಯತೆ
ರಾಹುವಿನ ಸಂಕ್ರಮಣವು ಕುಂಭ ರಾಶಿಯವರ ಮನೆಯಲ್ಲಿ ಜಗಳಗಳನ್ನು ಹೆಚ್ಚಿಸಬಹುದು. ಈ ರಾಶಿಯವರು ತಮ್ಮ ನೆರೆಹೊರೆಯವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು ಅಥವಾ ಒಡಹುಟ್ಟಿದವರೊಂದಿಗಿನ ಸಂಬಂಧಗಳು ಪೂರ್ವಜರ ಆಸ್ತಿ ವಿಚಾರವಾಗಿ ಹಾಳಾಗಬಹುದು. ಇನ್ನೂ ಅವಿವಾಹಿತರು ಮುಂದಿನ ವರ್ಷ ಮದುವೆಯಾಗಬಹುದು. ನೀವು ಯಾರೊಂದಿಗಾದರೂ ಪ್ರೇಮ ಸಂಬಂಧ ಹೊಂದಬಹುದು & ಪ್ರೇಮ ವಿವಾಹ ಸಂಭವಿಸಬಹುದು. ಈಗಾಗಲೇ ಮದುವೆಯಾದವರ ಜೀವನ ಸುಖಮಯವಾಗಿರುತ್ತದೆ.
ಹೂಡಿಕೆ ಮಾಡುವ ಮೊದಲು ಯೋಚಿಸಿ
ಯಾವುದೇ ಹೂಡಿಕೆಯಲ್ಲಿ ಹಣ ಹೂಡುವ ಮುನ್ನ ಕುಂಭ ರಾಶಿಯವರು ಅದರ ಲಾಭ-ನಷ್ಟದ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಹಣದ ಬಗ್ಗೆ ಹೆಚ್ಚು ಜಾಗೃತೆ ವಹಿಸಿ ಮತ್ತು ಸಾಧ್ಯವಾದಷ್ಟು ಸಾಲದ ವಹಿವಾಟುಗಳನ್ನು ತಪ್ಪಿಸಿ. ಪ್ರಯಾಣದ ವೇಳೆ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಬಹುದು ಅಥವಾ ಹಾನಿಗೊಳಗಾಗಬಹುದು, ಹೀಗಾಗಿ ಹೆಚ್ಚು ಜಾಗರೂಕರಾಗಿರಿ. ನೀವೂ ಅನೇಕ ವಿಷಯಗಳಲ್ಲಿ ಮೋಸ ಹೋಗಬಹುದು. ದಾನ ಕಾರ್ಯಗಳಲ್ಲಿ ನಿಮ್ಮ ಕ್ರಿಯಾಶೀಲತೆ ಕಾಪಾಡಿಕೊಳ್ಳಿ, ಇದನ್ನು ಮಾಡುವುದರಿಂದ ನೀವು ಭರ್ಜರಿ ಲಾಭ ಪಡೆಯುತ್ತೀರಿ.
ದೀರ್ಘಕಾಲದ ಕಾಯಿಲೆಗಳ ಭೀತಿ!
2023ರಲ್ಲಿ ರಾಹುವಿನ ಸಂಚಾರದಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಬೆನ್ನುಹುರಿಗೆ ಸಂಬಂಧಿಸಿದ ಹಳೆಯ ಸಮಸ್ಯೆ ಮತ್ತೆ ಉದ್ಭವಿಸಬಹುದು. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ ಮತ್ತು ಪ್ರತಿದಿನ 3-4 ಕಿ.ಮೀ ನಡೆಯಲು ಪ್ರಯತ್ನಿಸಿ. ಜಂಕ್ ಫುಡ್ ಮತ್ತು ಬೀದಿಬದಿಯ ಆಹಾರವನ್ನು ತಪ್ಪಿಸಿ. ಇದರಿಂದ ನಿಮಗೆ ಆರೋಗ್ಯ ಲಾಭ ಸಿಗಲಿದೆ.
ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗ ಜೊತೆಗೆ ಯಶಸ್ಸು ದೊರೆಯಲಿದೆ
ಉದ್ಯೋಗ-ವ್ಯವಹಾರದಲ್ಲಿನ ಪ್ರಗತಿ
2023ರಲ್ಲಿ ರಾಹು ಸಂಕ್ರಮಣದಿಂದ ಉದ್ಯೋಗ ಅಥವಾ ವ್ಯವಹಾರದ ವಿಷಯದಲ್ಲಿ ನಿಮಗೆ ಮಂಗಳಕರವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ಪ್ರಯಾಣಿಸಬೇಕಾಗಬಹುದು, ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದು ನಿಮ್ಮ ವೃತ್ತಿಜೀವನವನ್ನು ಮತ್ತಷ್ಟು ಉಜ್ವಲಗೊಳಿಸಲು ಸಹಾಯ ಮಾಡುತ್ತದೆ. ಮಾರ್ಕೆಟಿಂಗ್ ಕ್ಷೇತ್ರ ಮತ್ತು ಸೇನೆ-ಪೊಲೀಸ್‌ಗೆ ಸಂಬಂಧಿಸಿದ ಜನರು ಹೆಚ್ಚಿನ ಪ್ರಯೋಜನ ಪಡೆಯಬಹುದು.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.