ನವದೆಹಲಿ : ಜಾತಕದಲ್ಲಿ ಹೆಚ್ಚು ಅಶುಭ ಯೋಗಗಳು ರೂಪುಗೊಳ್ಳುವ ಗ್ರಹಗಳಲ್ಲಿ ರಾಹು ಪ್ರಮುಖವಾಗಿದೆ. ರಾಹು ಒಂದೂವರೆ ವರ್ಷಗಳ ಕಾಲ ಪ್ರತಿ ರಾಶಿಯಲ್ಲೂ (Zodiac sign) ನೆಲೆಸಿದ್ದರೂ, ರಾಶಿ ಬದಲಾದಾಗ ಸಾಕಷ್ಟು ಏರುಪೇರನ್ನು ಸೃಷ್ಟಿಸುತ್ತಾನೆ.  2022ರಲ್ಲಿ, ರಾಹು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಏಪ್ರಿಲ್ 12, 2022 ರಂದು ರಾಶಿಚಕ್ರವನ್ನು (Rahu transit) ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ತಿಂಗಳಲ್ಲಿ ಅತ್ಯಂತ ಕ್ರೂರ ಗ್ರಹ ಶನಿಯು (Shani transit) ಕೂಡಾ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ರಾಶಿ ಬದಲಾವಣೆಗಳು 6 ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ರಾಹು ಅಶುಭ ಯೋಗವನ್ನು ಸೃಷ್ಟಿಸಿದರೆ, ಉದ್ಯೋಗ-ವ್ಯಾಪಾರ, ಹಣದ ವಿಷಯದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಈ ರಾಶಿಚಕ್ರದ ಜನರು ಜಾಗರೂಕರಾಗಿರಿ :
ಮೇಷ ರಾಶಿ : 
ರಾಹುವಿನ ಕಾರಣದಿಂದ ಮೇಷ ರಾಶಿಯ  (Aries) ಜನರ  ಕೌಟುಂಬಿಕ ಜೀವನದ ಮೇಲೆ ಪ್ರಭಾವ ಉಂಟಾಗುತ್ತದೆ. ಇದಲ್ಲದೆ, ನೀವು ವೃತ್ತಿಜೀವನದಲ್ಲಿ ಸಾಕಷ್ಟು ಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ವೃತ್ತಿಜೀವನದ ಬಗ್ಗೆ ಅಭದ್ರತೆಯ ಭಾವನೆ ಮೂಡುತ್ತದೆ. ಹೂಡಿಕೆ (investment) ಮಾಡುವುದನ್ನು ತಪ್ಪಿಸಿ. ತಪ್ಪಿಯೂ ವಿವಾದಕ್ಕೆ ಒಳಗಾಗಬೇಡಿ. 


ಇದನ್ನೂ ಓದಿ : 2022ರಲ್ಲಿ ಶನಿದೇವನು ಈ ಜನರಿಗೆ ದಯೆ ತೋರುತ್ತಾನೆ: ಇದರಲ್ಲಿ ನೀವು ಇದ್ದೀರಾ?


ವೃಷಭ :
ವೃಷಭ ರಾಶಿಯ (Taurus) ಜನರು ರಾಹು ಬದಲಾವಣೆಯ ನಂತರ ಗೊಂದಲಕ್ಕೊಳಗಾಗುತ್ತಾರೆ. ಇದರಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಣದ ನಷ್ಟ ಉಂಟಾಗಬಹುದು. 


ಕರ್ಕ: 
ಕರ್ಕ ರಾಶಿಯ (Cancer) ಜನರು ಕೆಲಸದ ಸ್ಥಳದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ತಾಳ್ಮೆಯಿಂದ ಕೆಲಸ ಮಾಡಿ. ಆದರೂ ಕೆಲಸದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ, ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ಕೆಲವರಿಗೆ ಉದ್ಯೋಗದಲ್ಲಿ ವರ್ಗಾವಣೆಯಾಗಬೇಕಾಗಬಹುದು. 


ಕನ್ಯಾ:


2022 ರಲ್ಲಿ ಕನ್ಯಾ ರಾಶಿಯವರ (Virgo) ಮಾನಸಿಕ ಸ್ಥಿತಿಯ ಮೇಲೆ ರಾಹು ಪ್ರಭಾವ ಬೀರುತ್ತಾನೆ. ಇದು ಜನರೊಂದಿಗಿನ  ಸಂಘರ್ಷಕ್ಕೆ ಕಾರಣವಾಗಬಹುದು. ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.  


ಇದನ್ನೂ ಓದಿ : Rashi Parivartan : ರಾಶಿ ಬದಲಾಯಿಸಿದ ಗುರು ಗ್ರಹ : ಈ 5 ರಾಶಿಯವರಿಗೆ ಒಲಿಯಲಿದೆ ಅದೃಷ್ಟ! 


ವೃಶ್ಚಿಕ : ರಾಹು ವೃಶ್ಚಿಕ ರಾಶಿಯವರಿಗೆ (Scorpio) ವೈವಾಹಿಕ ಮತ್ತು ಪ್ರೇಮ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. . ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ಸಂಬಂಧ ಮುರಿದು ಬೀಳುವವರೆಗೂ ವಿಷಯ ಮುಂದುವರಿಯಬಹುದು. ಗೌರವ ಹಣದ ನಷ್ಟ ಎದುರಾಗಬಹುದು. 


ಧನು ರಾಶಿ : ಧನು ರಾಶಿಯ (Sagittarius) ಜನರು ನ್ಯಾಯಾಲಯ-ಕೋರ್ಟ್ ಅನ್ನು ಸುತ್ತಬೇಕಾಗಬಹುದು. ಅದೇ ಸಮಯದಲ್ಲಿ, ಹಳೆಯ ಪ್ರಕರಣಗಳು ನಡೆಯುತ್ತಿರುವ ಜನರು ಈಗ ಪರಿಹಾರವನ್ನು ಪಡೆಯಬಹುದು. ಮಾನಸಿಕ ಅಸ್ತವ್ಯಸ್ತತೆ ಇರುತ್ತದೆ. ಧ್ಯಾನ ಮಾಡಿ, ಅದು ಪ್ರಯೋಜನಕಾರಿಯಾಗಿರಲಿದೆ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.