Rakshabandhan: ನಿನ್ನೆಯಷ್ಟೇ (ಆಗಸ್ಟ್ 23, 2023) ಭಾರತದ ತನ್ನ ಕನಸಿನ ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಚಂದ್ರನ ಮೇಲ್ಮೈ ಮೇಲೆ ಚಂದ್ರಯಾನ-3 ವಿಜಯೋತ್ಸವದ ಲ್ಯಾಂಡಿಂಗ್ ಸಾಧಿಸಿದ ಬೆನ್ನಲ್ಲೇ 
ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಸೋಷಿಯಲ್ ಮೀಡಿಯಾದಲ್ಲಿ ಚಂದ್ರಯಾನ 3 ರ ಯಶಸ್ಸಿನ ಈ ಐತಿಹಾಸಿಕ ಸಂದರ್ಭವನ್ನು ಆಚರಿಸಿದ ಖುಷಿಯಲ್ಲಿ ಮೀಮ್‌ಗಳು, ಜೋಕ್‌ಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅದುವೇ "ಭೂಮಿ ತಾಯಿ ಚಂದ್ರನಿಗೆ ರಾಖಿ ಕಟ್ಟುವ" ವಿಶೇಷವಾದ ಚಿತ್ರ. 


ಬಹಳ ಮುಖ್ಯ ಚಂದ್ರಯಾನ 3 ರ ಕೊನೆಯ 17 ನಿಮಿಷ ! ಹೇಗಿರಲಿದೆ ಗೊತ್ತಾ ಆ ರೋಚಕ ಕ್ಷಣ


ಚಂದ್ರಯಾನ-3 ಹ್ಯಾಶ್‌ಟ್ಯಾಗ್ ಬಳಸಿ ಬಳಕೆದಾರರು ಟ್ವಿಟರ್‌ನಲ್ಲಿ "ಭೂಮಿ ತಾಯಿ ಚಂದ್ರನಿಗೆ ರಾಖಿಯನ್ನು ಕಟ್ಟುವ ಚಿತ್ರವನ್ನು"  ಉತ್ಸಾಹದಿಂದ ಹಂಚಿಕೊಂಡಿದ್ದಾರೆ.  


ಇದನ್ನೂ ಓದಿ- ಚಂದ್ರಯಾನ 3ರ ಯಶಸ್ಸಿನ ನಂತರ ಭಾರತದ ಕೈ ಸೇರುವುದು ಈ ನಿಧಿ !


ಗಮನಾರ್ಹವಾಗಿ, ಭಾರತೀಯರು ಭೂಮಿಯನ್ನು ತಾಯಿಯ ಸ್ವರೂಪಿಣಿ ಎಂದು ಪೂಜಿಸುತ್ತಾರೆ. ಅಷ್ಟೇ ಅಲ್ಲ, ಭಾರತೀಯರು ಚಂದ್ರನನ್ನು  ಮಾಮಾ, ಚಂದ ಮಾಮಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ಮುದ್ದಾಗಿರುವ ಚಿತ್ರ ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ. 


ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, "ಓಹ್, ಇದು ತುಂಬಾ ಮುದ್ದಾಗಿದೆ. ಭೂಮಿಯು ಚಂದ್ರನಿಗೆ ರಾಖಿ ಕಟ್ಟುತ್ತಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ನಮ್ಮ ದೇಶವು ಶ್ರೇಷ್ಠವಾಗಿದೆ ಮತ್ತು ಇದಕ್ಕೆ ಕಾರಣ ನಾವು ಭಾರತವನ್ನು ಮಾತ್ರವಲ್ಲದೆ ಇಡೀ ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ ಮತ್ತು ಆದ್ದರಿಂದ ಚಂದ್ರನನ್ನು ನಮ್ಮ ತಾಯಿಯ ಸಹೋದರ ಎಂದು ಕರೆಯಲಾಗುತ್ತದೆ" ಬರೆದಿದ್ದಾರೆ. ಅದೇ ರೀತಿ ಇನ್ನೂ ಹಲವು ಬಳಕೆದಾರರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಚಂದ ಮಾಮಾ, ಹ್ಯಾಪಿ ಪೂರ್ವ ರಕ್ಷಾ ಬಂಧನ್" ಎಂದು ಬರೆದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.