Ram Navami 2022 - ಚೈತ್ರ ಮಾಸದ ಶುಕ್ಲ ಪಕ್ಷ ನವಮಿ ತಿಥಿಯಂದು ಶ್ರೀ ರಾಮ ಜಯಂತಿ ಉತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮಶಾಸ್ತ್ರದಲ್ಲಿ ರಾಮ ನವಮಿಗೆ  ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ರಾಜಾ ಧಶರಥನ ಮನೆಯಲ್ಲಿ ಶ್ರೀರಾಮನ ಜನ್ಮವಾಯಿತು ಎನ್ನಲಾಗುತ್ತದೆ. ಈ ದಿನದಂದು ವಿಧಿ-ವಿಧಾನಗಳ ಮೂಲಕ ಶ್ರೀರಾಮನಿಗೆ ಪೂಜೆ ನೆರವೇರಿಸಲಾಗುತ್ತದೆ. ಈ ಬಾರಿಯ ಚೈತ್ರ ನವರಾತ್ರಿ ಉತ್ಸವ ಏಪ್ರಿಲ್ 2 ರಿಂದ ಆರಂಭಗೊಂಡಿದೆ. 

COMMERCIAL BREAK
SCROLL TO CONTINUE READING

ರಾಮ ನವಮಿ 2022ರ ದಿನಾಂಕ ಶುಭ ಮುಹೂರ್ತ
ರಾಮ ನವಮಿಯನ್ನು ಈ ವರ್ಷ 10ನೇ ಏಪ್ರಿಲ್ 2022 ರಂದು ಭಾನುವಾರ ಆಚರಿಸಲಾಗುತ್ತದೆ. ನವಮಿ ತಿಥಿಯು ಏಪ್ರಿಲ್ 10 ರಂದು ಬೆಳಗ್ಗೆ 01.32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು ಬೆಳಗ್ಗೆ 03.15 ಕ್ಕೆ ಕೊನೆಗೊಳ್ಳುತ್ತದೆ. ಶ್ರೀರಾಮನ ಆರಾಧನೆಯ ಶುಭ ಸಮಯವು ಏಪ್ರಿಲ್ 10, 2022 ರಂದು ಬೆಳಗ್ಗೆ 11.10 ರಿಂದ 01.32 ರವರೆಗೆ ಇರಲಿದೆ.


ಇದನ್ನೂ ಓದಿ-Vastu Tips: ವಾಸ್ತುಶಾಸ್ತ್ರದ ಈ ನಿಯಮಗಳ ಅನುಸರಣೆ ಮನೆಯಲ್ಲಿ ಸುಖ-ಸಮೃದ್ಧಿಗೆ ಕಾರಣ, ವಿಶೇಷ ಗಮನ ಹರಿಸಿ

ರಾಮ ನವಮಿ ಪೂಜಾ ವಿಧಿ
ಶ್ರೀರಾಮನವಮಿಯ ದಿನ ಎಲ್ಲಕ್ಕಿಂತ ಮೊದಲು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಇದರ ನಂತರ, ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರ ವಿಗ್ರಹಗಳಿಗೆ ಗಂಧದಿಂದ ತಿಲಕ ಮಾಡಿ, ನಂತರ ಶ್ರೀರಾಮನಿಗೆ ಅಕ್ಷತೆ, ಹೂವು ಅರ್ಪಿಸಿದ ನಂತರ ಘಂಟಾ ನಾದ ಹಾಗೂ ಶಂಖ ನಾದ ಮೊಳಗಿಸಿ, ಶ್ರೀರಾಮನನ್ನು ಯಥಾವತ್ತಾಗಿ ಪೂಜಿಸಿ. ಶ್ರೀರಾಮನ ಮಂತ್ರಗಳನ್ನು ಪಠಿಸಿ, ರಾಮಾಯಣವನ್ನು ಓದಿ ಮತ್ತು ರಾಮಚರಿತಮಾನಸ ಪಠಿಸಿ. ಪೂಜೆಯ ಕೊನೆಯಲ್ಲಿ ಆರತಿ ಬೆಳಗಿ. ಈ ದಿನದಂದು ಶ್ರೀರಾಮನನ್ನು ಉಯ್ಯಾಲೆಯಲ್ಲಿ ತೂಗಬೇಕು ಮತ್ತು ಬಡ ವ್ಯಕ್ತಿ ಅಥವಾ ಬ್ರಾಹ್ಮಣನಿಗೆ ಗೋಧಿ ಮತ್ತು ರಾಗಿಯನ್ನು ದಾನ ಮಾಡಬೇಕು.


ಇದನ್ನೂ ಓದಿ-Durga Ashtami 2022: ಅಷ್ಠಮಿಯ ಈ ಶುಭ ಮುಹೂರ್ತದಲ್ಲಿಯೇ ನೆರವೇರಿಸಿ ಕನ್ಯಾ ಪೂಜೆ

ರಾಮನವಮಿ 2022ರ ಮಹತ್ವ 
ಶ್ರೀರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರೈಸುತ್ತಾನೆ ಮತ್ತು ಈ ವೇಳೆ ಅವನು ರಾವಣನನ್ನು ಸಂಹರಿಸಿ ಧರ್ಮವನ್ನು ಪ್ರತಿಷ್ಟಾಪಿಸುತ್ತಾನೆ. ಈ ದಿನದ ಉಪವಾಸವು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದು ಧಾರ್ಮಿಕ ನಂಬಿಕೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ