Ramzan 2023 Bigins : ಕೇವಲ ಬಾಯಿಗೆ ಅಷ್ಟೇ ಅಲ್ಲ ಕಣ್ಣಿಗೂ ರೋಜಾ ಅನ್ವಯಿಸುತ್ತದೆ, ರಂಜಾನ್ ಅವಧಿಯಲ್ಲಿ ಈ ಸಂಗತಿಗಳನ್ನು ನೆನಪಿನಲ್ಲಿಡಿ
Ramzan 2023 Bigins: ರಂಜಾನ್ ಪವಿತ್ರ ಪರ್ವ ಆರಂಭಗೊಂಡಿದೆ. ರಂಜಾನ ತಿಂಗಳು ಪೂರ್ಣಗೊಂಡ ಬಳಿಕ ಈದ್ ವರೆಗೆ ಹಬ್ಬವನ್ನು ಆಚರಿಸಲಾಗುತ್ತದೆ. ರಂಜಾನ್ ತಿಂಗಳಿನಲ್ಲಿ ರೋಜಾ ಆಚರಿಸುವವರು ಹಲವು ಸಂಗತಿಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಈ ಸಂಗತಿಗಳನ್ನು ನಿರ್ಲಕ್ಷಿಸಿದರೆ ರೋಜಾ ಹಿಡಿಯುವವರ ರೋಜಾ ಮುರಿದು ಹೋಗುತ್ತದೆ ಎನ್ನಲಾಗುತ್ತದೆ.
Ramzan 2023 Bigins: ಮುಸ್ಲಿಂ ಬಾಂಧವರ ಪವಿತ್ರ ಪರ್ವ ರೋಜಾ ಆರಂಭಗೊಂಡಿದೆ. ರೋಜಾ ತಿಂಗಳು ಅಂತ್ಯವಾದ ಬಳಿಕ ಈದ್ ಹಬ್ಬ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ರೋಜಾ ಆಚಿಐರುವುದರ ಜೊತೆಗೆ ಅಲ್ಲಾಹ್ ನನ್ನು ಸಂಪೂರ್ಣ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಮುಸ್ಲಿಂ ಮೌಲ್ವಿಯೊಬ್ಬರು ಹೇಳುವ ಪ್ರಕಾರ, ರಂಜಾನ್ ಸಂಪೂರ್ಣ ತಿಂಗಳಿನಲ್ಲಿ ಅಲ್ಲಾಹ್ ಕೃಪಾವೃಷ್ಟಿ ತನ್ನ ಭಕ್ತರ ಮೇಲಿರುತ್ತದೆ.
ಅವರ ಪ್ರಕಾರ ಈ ತಿಂಗಳಿನಲ್ಲಿ ಅಲ್ಲಾಹ್ ತನ್ನ ಭಕ್ತರ ಎಲ್ಲ ತಪ್ಪುಗಳನ್ನು ಮನ್ನಿಸುತ್ತಾನೆ ಮತ್ತು ಅವರ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಮತ್ತು ತನ್ನ ಅನುಯಾಯಿಗಳಿಗೆ ರೋಜಾ ಹಿಡಿಯುವವರ ಪ್ರಾರ್ಥನೆಗೆ 'ಆಮೀನ್' ಹೇಳಲು ಸೂಚಿಸುತ್ತಾನೆ ಎನ್ನುತ್ತಾರೆ. ಆಲಾಹ್ ನ ಕೃಪೆಗಾಗಿ ಸಂಪೂರ್ಣ ಭಕ್ತಿ ಭಾವದಿಂದ ರೋಜಾ ಕೈಗೊಳ್ಳುವ ಭಕ್ತರ ಅವರ ಹಿಂದಿನ ಎಲ್ಲಾ ಅಪರಾಧಗಳನ್ನು ಅಲ್ಲಾಹ್ ಮನ್ನಿಸುತ್ತಾನೆ. ಈ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ತಮ್ಮ ಬಡ ಹಾಗೂ ನಿರ್ಗತಿಕರ ಬಾಂಧವರ ಕಾಳಜಿವಹಿಸಬೇಕು ಎಂದು ಮೌಲ್ವಿ ಹೇಳುತ್ತಾರೆ.
ಆದರೆ, ರೋಜಾ ಹಿಡಿಯುವವರು ರೋಜಾ ಅವಧಿಯಲ್ಲಿ ಹಲವು ಸಂಗತಿಗಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ಒಂದು ಸಣ್ಣ ತಪ್ಪಿನ ಕಾರಣ ರೋಜಾ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು ಸೆಹರಿಯಿಂದ ಹಿಡಿದು ಇಫ್ತಾರ್ ವರೆಗೆ ಕಾಲ ಕಳೆಯುವುದು ತುಂಬಾ ಮುಖ್ಯ.
ಯಾವ ಸಣ್ಣ ತಪ್ಪುಗಳ ಕಾರಣ ರೋಜಾ ಮುರಿದು ಹೋಗುತ್ತದೆ
ಈ ಕುರಿತು ಮಾಹಿತಿ ನೀಡುವ ಮುಸ್ಲಿಂ ಮೌಲ್ವಿಗಳು, ರೋಜಾ ಮಕರೂಹ್ ಅಥವಾ ಮುರಿದು ಬೀಳಲು ಹಲವು ಕಾರಣಗಳಿವೆ ಎನ್ನುತ್ತಾರೆ. ಇದರಲ್ಲಿ ಕಣ್ಣಿನ ಮೇಲಿನ ತೆರೆ ಕೂಡ ಒಂದು ಮುಖ್ಯ ಕಾರಣವಾಗಿದೆ. ರೋಜಾ ಹಿಡಿಯುವವರು ಯಾವುದೇ ವ್ಯಕ್ತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೂ ಕೂಡ ರೋಜಾ ಮಕರೂಹ್ ಆಗುತ್ತದೆ ಎನ್ನುತ್ತಾರೆ ಮೌಲ್ವಿಗಳು. ಇದಲ್ಲದೆ ಸುಳ್ಳು ಹೇಳುವುದು, ಬೆನ್ನ ಹಿಂದೆ ಕೆಟ್ಟ ಮಾತುಗಳನ್ನು ಆಡುವುದರಿಂದಲೂ ಕೂಡ ರೋಜಾ ಮಕರೂಹ್ ಆಗುತ್ತದೆ.
ಇದನ್ನೂ ಓದಿ-Ramadan 2023 Date : ರಂಜಾನ್ ವೇಳೆಯ ಸೆಹ್ರಿ ಮತ್ತು ಇಫ್ತಾರ್ ಸಮಯ ಹೀಗಿದೆ..!
ಸೆಹರಿ ಬಳಿಕ ಅಥವಾ ಇಫ್ತಾರ್ ಕೂಟಕ್ಕೂ ಮುನ್ನ ತಿಳಿದು ತಿಳಿದು ಏನನ್ನಾದರೂ ಸೇವಿಸುವುದು ಅಥವಾ ನೀರುಕುಡಿಯುವ ಜನರ ರೋಜಾ ಮಕರೂಹ್ ಆಗುತ್ತದೆ. ಇದರ ಜೊತೆಗೆ ರೋಜೇದಾರನ ಬಾಯಿಯಲ್ಲಿ ಸಿಕ್ಕಿಬಿದ್ದ ಅನ್ನದ ಅಗಳನ್ನು ನುಂಗುವುದರಿಂದಲೂ ಕೂಡ ರೋಜಾ ಅಂತ್ಯವಾಗುತ್ತದೆ. ಯಾರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅಪಶಬ್ದಗಳನ್ನು ಪ್ರಯೋಗಿಸುವುದು ಅಥವಾ ಯಾವುದೇ ರೋಗವಿಲ್ಲದೆ ವಿನಾಕಾರಣ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದರಿಂದಲೂ ಕೂಡ ರೋಜಾ ಮಕರೂಹ್ ಆಗುತ್ತದೆ.
ಇದನ್ನೂ ಓದಿ-Ramadan 2023: ರಂಜಾನ್ ತಿಂಗಳು ಯಾವಾಗ ಆರಂಭ, ರೋಜಾ ಎಂದಿನಿಂದ ಆರಂಭ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾನಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.