ನವದೆಹಲಿ: ಹೋಳಿ ನಂತರ ರಂಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ರಂಗ ಪಂಚಮಿ ಹಬ್ಬವನ್ನು ಚೈತ್ರ ಮಾಸದ ಕೃಷ್ಣ ಪಕ್ಷದ 5ನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ದೇವ-ದೇವತೆಗಳು ಹೋಳಿ ಆಡಲು ಭೂಮಿಗೆ ಬರುತ್ತಾರೆಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನವು ದೇವರ ಆಶೀರ್ವಾದ ಪಡೆಯಲು ಬಹಳ ವಿಶೇಷವಾಗಿದೆ. ರಂಗ ಪಂಚಮಿಯ ದಿನದಂದು ಮಾಡುವ ಆಚರಣೆಗಳು ಅತ್ಯಂತ ಮಂಗಳಕರ ಫಲಿತಾಂಶ ನೀಡುತ್ತವೆ. ಇದರೊಂದಿಗೆ ಜಾತಕದಲ್ಲಿರುವ ಗ್ರಹದೋಷ ನಿವಾರಣೆಗೂ ಈ ದಿನ ಬಹಳ ಮುಖ್ಯ. ರಂಗ ಪಂಚಮಿಯಂದು ಪೂಜೆ ಮತ್ತು ಪರಿಹಾರಗಳಿಗೆ ಮಂಗಳಕರ ಸಮಯ ತಿಳಿಯಿರಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಧನಲಾಭವಾಗಲಿದೆ


ರಂಗ ಪಂಚಮಿ ಪೂಜೆಯ ಶುಭ ಸಮಯ


ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪಂಚಮಿ ತಿಥಿ ಮಾರ್ಚ್ 11ರಂದು ರಾತ್ರಿ 10.05ರಿಂದ ಪ್ರಾರಂಭವಾಗಿದೆ, ಇದು ಮಾರ್ಚ್ 12ರಂದು ರಾತ್ರಿ 10.01ರವರೆಗೆ ಇರುತ್ತದೆ. ಆದ್ದರಿಂದ ಇಂದು ಉದಯತಿಥಿ ಪ್ರಕಾರ ರಂಗ ಪಂಚಮಿ ಆಚರಿಸಲಾಗುವುದು. ರಂಗ ಪಂಚಮಿಯಂದು ಪೂಜೆಗೆ ಅಭಿಜಿತ್ ಮುಹೂರ್ತ ಮಧ್ಯಾಹ್ನ 12:07ರಿಂದ 12:55ರವರೆಗೆ ಮತ್ತು ವಿಜಯ್ ಮುಹೂರ್ತವು ಮಧ್ಯಾಹ್ನ 2:30ರಿಂದ 3:17ರವರೆಗೆ ಇರುತ್ತದೆ. ರಂಗ ಪಂಚಮಿಯ ಪೂಜೆಗೆ ಈ ಎರಡೂ ಶುಭ ಸಮಯಗಳು ಒಳ್ಳೆಯದು.


ಇದನ್ನೂ ಓದಿ: Astro Tips: ಮಂಗಳ-ಶುಕ್ರ ಆಶೀರ್ವಾದದಿಂದ ಈ ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!


ರಂಗ ಪಂಚಮಿಯಂದು ಹಣ ಪಡೆಯಲು ಪರಿಹಾರಗಳು


ರಂಗ ಪಂಚಮಿಯ ದಿನದಂದು ಮನೆಯ ಉತ್ತರ ದಿಕ್ಕಿನಲ್ಲಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ-ನಾರಾಯಣರ ಚಿತ್ರವನ್ನು ಇರಿಸಿ. ನಂತರ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿದ ಕಲಶವನ್ನು ನಿಯಮಗಳ ಪ್ರಕಾರ ಇಟ್ಟುಕೊಳ್ಳಿ. ಅದರ ಮೇಲೆ ಸ್ವಸ್ತಿಕ್ ಚಿಹ್ನೆ ರಚಿಸಿರಿ. ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವಿಗೆ ಗುಲಾಬಿ ಹೂವುಗಳನ್ನು ಅರ್ಪಿಸಿ. ನಂತರ ಸಕ್ಕರೆ ಮಿಠಾಯಿ ನೀಡಿ. ಕೊನೆಯಲ್ಲಿ ಇಡೀ ಮನೆಯಲ್ಲಿ ಪಾತ್ರೆಯಲ್ಲಿ ಇರಿಸಲಾದ ನೀರನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಕೆಲವೇ ಸಮಯದಲ್ಲಿ ಮನೆಯಲ್ಲಿ ಹಣದ ಆದಾಯವು ಹೆಚ್ಚಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ