ಚಂದ್ರಗ್ರಹಣದ ದಿನ ಅಪರೂಪದ ಸಂಯೋಗ:  2022ರ ಮೊದಲ ಚಂದ್ರ ಗ್ರಹಣವು  ಸೋಮವಾರ, ಮೇ 16 ರಂದು  ವಿಶಾಖ ನಕ್ಷತ್ರ ಮತ್ತು ವೃಶ್ಚಿಕ ರಾಶಿಯಲ್ಲಿ ವೈಶಾಖ ಮಾಸದ ಹುಣ್ಣಿಮೆಯಂದು ನಡೆಯುತ್ತದೆ. ಬುದ್ಧ ಪೂರ್ಣಿಮೆಯೂ ಇದೇ ದಿನವಾಗಿದ್ದು, ಸುಮಾರು 80 ವರ್ಷಗಳ ಬಳಿಕ ಇಂತಹ ಅಪರೂಪದ ಗ್ರಹ-ನಕ್ಷತ್ರಗಳ ಸಂಯೋಜನೆ ರೂಪುಗೊಳ್ಳುತ್ತಿದೆ. 


COMMERCIAL BREAK
SCROLL TO CONTINUE READING

ಚಂದ್ರ ಗ್ರಹಣವು ಭಾರತೀಯ ಕಲಾಮಾನದ ಪ್ರಕಾರ ಮೇ 16 ರಂದು ಬೆಳಿಗ್ಗೆ 07:02 ಕ್ಕೆ ಗ್ರಹಣ ಸಂಭವಿಸಲಿದ್ದು, ಮಧ್ಯಾಹ್ನ 12:20 ರವರೆಗೆ ಇರುತ್ತದೆ.  ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಸೂತಕದ ಸಮಯವೂ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಗ್ರಹಣದ ಸಮಯದಲ್ಲಿ, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಹಿಮ್ಮುಖದ ಕಾರಣ, ಅದರ ಪರಿಣಾಮವು ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ ಎಂದು ಹೇಳಲಾಗುತ್ತಿದೆ. 


ಚಂದ್ರಗ್ರಹಣದ ಪ್ರಭಾವ ಯಾವ ರಾಶಿಚಕ್ರದ ಮೇಲೆ ಕಂಡು ಬರಲಿದೆ. ಚಂದ್ರ ಗ್ರಹಣದ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ...


ಚಂದ್ರಗ್ರಹಣದ ದಿನ ಅಪರೂಪದ ಸಂಯೋಗ: ಈ ರಾಶಿಯವರ ಮೇಲೆ ಪರಿಣಾಮ:
ಮಿಥುನ ರಾಶಿ:
ಈ ರಾಶಿಯ ಜನರು ಚಂದ್ರಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು, ವಿರೋಧಿಗಳು ದ್ರೋಹ ಮಾಡಬಹುದು. ನಿಮ್ಮ ಗೌಪ್ಯ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಆತುರದ ನಿರ್ಧಾರವು ಮಾರಕವಾಗಬಹುದು. ಆರೋಗ್ಯ ಸಮಸ್ಯೆಗಳಿರಬಹುದು.


ಇದನ್ನೂ ಓದಿ- Chandra Grahan 2022: ಈ ರಾಶಿಯವರಿಗೆ ಅದೃಷ್ಟ, ವೃತ್ತಿ ಜೀವನದಲ್ಲಿ ಪ್ರಗತಿ


ಕರ್ಕಾಟಕ ರಾಶಿ : ವರ್ಷದ ಮೊದಲ ಚಂದ್ರಗ್ರಹಣವು ಕರ್ಕ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ. ವೃಶ್ಚಿಕ ರಾಶಿಯಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಇದರ ದುಷ್ಪರಿಣಾಮಗಳು ಕರ್ಕಾಟಕ ರಾಶಿಯವರ ಮೇಲೆ ಕಂಡುಬರುತ್ತವೆ. ಚಂದ್ರಗ್ರಹಣವು ನಿಮ್ಮನ್ನು ಮಾನಸಿಕವಾಗಿ ತೊಂದರೆಗೊಳಿಸಬಹುದು. ಆರೋಗ್ಯ ಹದಗೆಡಬಹುದು. ಖರ್ಚುಗಳು ನಿಮ್ಮನ್ನು ಆರ್ಥಿಕ ತೊಂದರೆಗೆ ಸಿಲುಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾತನ್ನು ನಿಯಂತ್ರಿಸಿ, ಈ ಸಮಯದಲ್ಲಿ ಯಾರೊಂದಿಗಾದರೂ ಜಗಳವಾಡುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಚಂದ್ರಗ್ರಹಣದ ಪ್ರಭಾವವನ್ನು ತಪ್ಪಿಸಲು, ಗ್ರಹಣದ ಸಮಯದಲ್ಲಿ ಓಂ ಸೋಮೇ ನಮಃ ಎಂಬ ಮಂತ್ರವನ್ನು ಪಠಿಸಿ.


ತುಲಾ ರಾಶಿ : ವರ್ಷದ ಮೊದಲ ಚಂದ್ರಗ್ರಹಣದ ಸಮಯದಲ್ಲಿ ತುಲಾ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ. ಅವರು ಯಾವುದೇ ಕೆಲಸಕ್ಕಾಗಿ ಹೆಚ್ಚು ಉತ್ಸಾಹದಿಂದ ಇರಬೇಕು. ಅದೇ ಸಮಯದಲ್ಲಿ, ಯಾವುದೇ ಹೊರಗಿನವರನ್ನು ಕುರುಡಾಗಿ ಕಣ್ಣು ಮುಚ್ಚಿ ನಂಬಬೇಡಿ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅಲ್ಲದೆ, ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಯೋಚಿಸಿ ಮಾತನಾಡುವುದು ಒಳ್ಳೆಯದು. ಇಲ್ಲವೇ ತೊಂದರೆಗೆ ಸಿಲುಕಿಸಬಹುದು.


ಮಕರ ರಾಶಿ : ಈ ಚಂದ್ರಗ್ರಹಣವು ಮಕರ ರಾಶಿಯವರಿಗೆ ಒಳ್ಳೆಯದಲ್ಲ, ಈ ರಾಶಿಯವರು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಎಲ್ಲಿಯಾದರೂ ಹೂಡಿಕೆ ಮಾಡುವ ಮೊದಲು ಆರ್ಥಿಕ ತಜ್ಞರನ್ನು ಸಂಪರ್ಕಿಸಿ. ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಯಾರಾದರೂ ದ್ರೋಹ ಮಾಡಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು. ಇದನ್ನು ತಪ್ಪಿಸಲು, ಯೋಗ ಮಾಡಿ.


ಇದನ್ನೂ ಓದಿ- ಚಂದ್ರಗ್ರಹಣ ಮುಗಿಯುತ್ತಿದ್ದಂತೆಯೇ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ ಆಗುವುದು ಲಾಭ


ಗ್ರಹಣದ ಕೆಟ್ಟ ಪರಿಣಾಮ ಕಡಿಮೆ ಮಾಡಲು ಪರಿಹಾರ:
ಧಾರ್ಮಿಕ ನಂಬಿಕೆಯ ಪ್ರಕಾರ, ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಗ್ರಹಣದ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಚಂದ್ರಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಗ್ರಹಣದ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು. ಗ್ರಹಣ ಮುಗಿದ ನಂತರ ಸ್ನಾನದ ನಂತರ ಅನ್ನದಾನ ಮಾಡಿದರೆ ಗ್ರಹಣದಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ನಂಬಲಾಗಿದೆ. 


ಗ್ರಹಣದ ಸಮಯದಲ್ಲಿ ಈ ಕೆಲಸ ಮಾಡಬೇಡಿ:
ಚಂದ್ರಗ್ರಹಣ ಮೇ 16 ರಂದು ಬೆಳಿಗ್ಗೆ 7:02 ರಿಂದ 12:20 ರವರೆಗೆ ಇರುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ತಿನ್ನಬಾರದು. ಈ ಸಮಯದಲ್ಲಿ, ಮನೆಯ ದೇವಾಲಯದ ಬಾಗಿಲುಗಳನ್ನು ಮುಚ್ಚಬೇಕು, ಗರ್ಭಿಣಿಯರು ಗ್ರಹಣ ಸಮಯದಲ್ಲಿ ಮನೆಯಿಂದ ಹೊರಬರಬಾರದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.